ಪತ್ನಿಗೆ ವಿಚ್ಛೇದನ ಕೊಡ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಟ ಇಮ್ರಾನ್ ಖಾನ್ ಉತ್ತರವೇನು ಗೊತ್ತಾ?

ಮುಂಬೈ, ಭಾನುವಾರ, 9 ಜೂನ್ 2019 (08:56 IST)

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಪತ್ನಿ ಆವಂತಿಕಾ ನಡುವಿನ ಸಂಬಂಧ ಸರಿಯಿಲ್ಲ. ಇಬ್ಬರೂ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂದೆಲ್ಲಾ ಕೆಲವು ದಿನಗಳ ಹಿಂದೆ ಸುದ್ದಿ ಹಬ್ಬಿತ್ತು.


 
ಈಗ ಆ ಎಲ್ಲಾ ವದಂತಿಗಳಿಗೆ ಸ್ವತಃ ಇಮ್ರಾನ್ ಮತ್ತು ಅವರ ಅತ್ತೆ ವಂದನಾ ಸ್ಪಷ್ಟನೆ ನೀಡಿದ್ದಾರೆ. ಇಮ್ರಾನ್ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಪತ್ರಕರ್ತರು ನಿಜವಾಗಿಯೂ ನಿಮ್ಮ ಪತ್ನಿಗೆ ನೀವು ವಿಚ್ಛೇದನ ನೀಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
 
ಪತ್ರಕರ್ತರ ಪ್ರಶ್ನೆಯಿಂದ ಇರಿಸುಮುರಿಸಿಗೊಳಗಾದ ಇಮ್ರಾನ್ ‘ಇಂತಹಾ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳುತ್ತಿದ್ದೀರಲ್ಲಾ ಸರಿಯಾ?’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಇಮ್ರಾನ್ ಅತ್ತೆ ವಂದನಾ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ‘ಹೌದು ದಂಪತಿ ನಡುವೆ ವೈಮನಸ್ಯ ಬಂದಿದ್ದು  ನಿಜ. ಆದರೆ ಅವರು ಬೇರೆಯಾಗುತ್ತಿಲ್ಲ. ಅದನ್ನು ಅವರು ಬಗೆಹರಿಸಿಕೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಕೊಡಿಸಿದ ಕಿಚ್ಚ ಸುದೀಪ್

ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಹೆಸರಿನ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ...

news

ನೀನಾ ನಾನಾ? ನೋಡೇಬಿಡೋಣ! ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಧುಮ್ಕಿ!

ಬೆಂಗಳೂರು: ರಕ್ಷಿತ್ ಶೆಟ್ಟಿ ಬ್ರೇಕ್ ನ ನಂತರ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿ ಅವನೇ ಶ್ರೀಮನ್ನಾರಾಯಣ ...

news

ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!

ಹೈದರಾಬಾದ್: ಬಾಹುಬಲಿ, ಈಗ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ರಾಜಮೌಳಿ ಈಗ ಜ್ಯೂನಿಯರ್ ಎನ್ ...

news

ಡಬಲ್ ಗುಡ್ ನ್ಯೂಸ್ ಕೊಟ್ಟ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಶ್ರೀಮನ್ನಾರಾಯಣ ಟೀಸರ್ ಬಿಡುಗಡೆಯಾಗಿದ್ದು, ಜತೆಗೆ ಮತ್ತೆ ...