ನಿಜವಾಗಲೂ ಪ್ರಭಾಸ್ ಹಾಗೂ ಕರಣ್ ಜೋಹರ್ ನಡುವೆ ಮನಸ್ತಾಪವಿದೆಯಾ?

ಹೈದರಾಬಾದ್, ಭಾನುವಾರ, 27 ಮೇ 2018 (07:03 IST)

ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನ ಖ್ಯಾತ , ಕರಣ್ ಜೋಹರ್ ಅವರ ನಡುವೆ ಮನಸ್ತಾಪವಿದೆ. ಅವರ ಸಂಬಂಧ ಚೆನ್ನಾಗಿಲ್ಲವೆಂಬ ಸುದ್ದಿ ಆಗಾಗ ಕೇಳಿಬಂದಿತ್ತು.ಆದರೆ ಇದೀಗ ಪ್ರಭಾಸ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಸೂಪರ್ ಹಿಟ್ ಸಿನಿಮಾ ಬಾಹುಬಲಿ ಯ ನಂತರ ಪ್ರಭಾಸ್ ಅವರು ತುಂಬಾ ಫೆಮಸ್ ಆಗಿದ್ದು, ಅವರಿಗೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಕರಣ್ ಜೋಹರ್ ಅವರು ಕೂಡ ಪ್ರಭಾಸ್ ಕಾಲ್ ಶೀಟ್ ಕೇಳಿದ್ದರು. ಆದರೆ ಪ್ರಭಾಸ್ ಅವರು ಕರಣ್ ಜೋಹರ್ ಆಫರ್ ನ ತಿರಸ್ಕರಿಸಿ 'ಸಾಹೋ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿತ್ತು. ಆದಕಾರಣ ಅವರ ನಡುವೆ ಮನಸ್ತಾಪವಿದೆ ಎಂಬ ಅನುಮಾನ ಜನರಲ್ಲಿ ಉಂಟಾಗಿದೆ.


ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಭಾಸ್ ಅವರು,’ ನನ್ನ ಹಾಗೂ ಕರಣ್ ಜೋಹರ್ ನಡುವೆ ಯಾವುದೇ ವಿಚಾರಕ್ಕೂ ಮನಸ್ತಾಪ ಇಲ್ಲ. ಈ ಸುದ್ದಿ ಕರಣ್ ಕಿವಿಗೂ ಬಿದ್ದಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಅವರೇ ನನಗೆ ಕಿವಿಮಾತು ಹೇಳಿದರು. ನಮ್ಮಿಬ್ಬರ ನಡುವೆ ಅಂಥದ್ದೇನೂ ಆಗಿಲ್ಲ. ನನಗೆ ಕರಣ್ ಜೋಹರ್ ನಿರ್ದೇಶನದ ಚಿತ್ರಗಳು ಇಷ್ಟ. 'ಕುಚ್ ಕುಚ್ ಹೋತಾ ಹೇ' ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು’ ಎಂದು ಹೇಳುವುದರ ಮೂಲಕ ಆ ಗಾಸಿಪ್ ಗೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾದ ಮಲೈಕಾ ಅರೋರ

ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.

news

ಕರೀನಾ ಮನೆಯಲ್ಲಿ ಇಲ್ಲದಿದ್ದಾಗ ತೈಮೂರ್ ಹೇಗೆ ವರ್ತಿಸುತ್ತಾನೆ ಗೊತ್ತಾ…?

ಮುಂಬೈ : ತಾಯಿ ಮಗುವಿನ ಸಂಬಂಧ ಯಾರು ಬೇರ್ಪಡಿಸಲಾದ ಅನುಬಂಧ ಎನ್ನುತ್ತಾರೆ. ಹಾಗೇ ಮಗುವಿಗೆ ತಾಯಿ ...

news

ಜಾಕಿ ಶ್ರಾಫ್ ಗೆ ತಾವು ಅಷ್ಟೊಂದು ಫೇಮಸ್ ನಟ ಎಂಬುದು ತಿಳಿದದ್ದು ಬಾಲಿವುಡ್ ನ ಖ್ಯಾತ ನಟರೊಬ್ಬರ ಮಕ್ಕಳಿಂದವಂತೆ!

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಾವು ...

news

ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಆರೋಪದ ಕುರಿತು ಕ್ಷಮೆಯಾಚಿಸಿದ ಹಾಲಿವುಡ್ ನಟ ಮಾರ್ಗನ್ ಪ್ರಿಮನ್

ಮುಂಬೈ:ಹಾಲಿವುಡ್ ಖ್ಯಾತ ಹಿರಿಯ ನಟ, ಆಸ್ಕರ್ ವಿಜೇತ ಮಾರ್ಗನ್ ಪ್ರಿಮನ್ ವಿರುದ್ಧ ಲೈಂಗಿಕ ಆರೋಪ ಕೇಳಿ ...

Widgets Magazine