Widgets Magazine

ಜಾಕಿ ಶ್ರಾಫ್ ಗೆ ತಾವು ಅಷ್ಟೊಂದು ಫೇಮಸ್ ನಟ ಎಂಬುದು ತಿಳಿದದ್ದು ಬಾಲಿವುಡ್ ನ ಖ್ಯಾತ ನಟರೊಬ್ಬರ ಮಕ್ಕಳಿಂದವಂತೆ!

ಮುಂಬೈ| pavithra| Last Modified ಭಾನುವಾರ, 27 ಮೇ 2018 (06:47 IST)
ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಾವು ಅಷ್ಟೊಂದು ಫೇಮಸ್ ನಟ ಎಂಬುದು ತಿಳಿದದ್ದು ಅಮಿತಾಬ್ ಬಚ್ಚನ್ ಅವರ
ಮಕ್ಕಳಿಂದ ಎಂಬುದಾಗಿ ಹೇಳಿದ್ದಾರೆ.ಇತ್ತೀಚೆಗೆ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಾಕಿ ಶ್ರಾಫ್ ಅವರು,’ ನಾನು ಚೆನ್ನೈ ನಲ್ಲಿ ಶೂಟಿಂಗ್ ನಲ್ಲಿದ್ದೆ. ಆ ಸಂದರ್ಭ ಬಚ್ಚನ್ 5 ಸ್ಟಾರ್ ಹೊಟೆಲ್ ನ ಇಡೀ ಪ್ಲೋರ್ ಅನ್ನು ಬುಕ್ ಮಾಡಿದ್ದರು. ಹೀಗಾಗಿ ನಾನು ವೆಯ್ಟರ್ ಬಳಿ ಅಮಿತಾಬ್ ಯಾವಾಗ ರೂಮ್ ನಿಂದ ಹೊರಬರುತ್ತಾರೆ ಎಂದು ಕೇಳಿದ್ದೆ. ಯಾಕೆಂದರೆ ನನಗೆ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಈ ಸಂದರ್ಭದಲ್ಲಿ ಅಮಿತಾಬ್ ಅವರ ಮಕ್ಕಳು ಬಂದು ನನ್ನ ಬಳಿ ಆಟೋಗ್ರಾಫ್ ಕೇಳಿದರು. ನನಗಾಗ ಆದ ವರ್ಣಿಸಲು ಸಾಧ್ಯವಿಲ್ಲ. ನಾನು ಅಮಿತಾಬ್ ಗಾಗಿ ಕಾಯುತ್ತಿದ್ದರೆ, ಅವರ ಮಕ್ಕಳು ಬಂದು ನನ್ನ ಬಳಿ ಆಟೋಗ್ರಾಫ್ ಕೇಳುತ್ತಿದ್ದಾರೆ. ಆವಾಗಲೇ ನನಗೆ ತಿಳಿದಿದ್ದು ನಾನು ಅಷ್ಟೊಂದು ಪ್ರಸಿದ್ಧಿಗೆ ಬಂದಿದ್ದೇನೆ ಎಂದು’ ಅಂತ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :