ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಗೆ ಬರಲು ಈ ಸಿನಿಮಾ ಕಾರಣವಂತೆ!

ಮುಂಬೈ, ಮಂಗಳವಾರ, 12 ಜೂನ್ 2018 (12:38 IST)

ಮುಂಬೈ : ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಭಾರತಕ್ಕೆ ಬಂದು ನಟಿಯಾಗಲು  ಬಾಲಿವುಡ್ ನ ಸಿನಿಮಾವೊಂದು ಕಾರಣವಂತೆ.


2006 ರಲ್ಲಿ ಮಿಸ್ ಶ್ರೀಲಂಕಾ ಯೂನಿವರ್ಸ್ ಟೈಟಲ್ ಮುಡಿಗೇರಿಸಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ನಟಿಸಿದ 'ದೇವದಾಸ್' ಸಿನಿಮಾ ನೋಡಿ ಭಾರತಕ್ಕೆ ಬಂದು ನಟಿಸಬೇಕೆಂಬ ಆಸೆಯಾಗಿತ್ತಂತೆ. ಈ ವಿಷಯವನ್ನು ರೇಸ್ 3 ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಿಳಿಸಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು,’ ಕೇನ್ ಚಲನಚಿತ್ರೋತ್ಸವದಲ್ಲಿ ದೇವದಾಸ್ ಸಿನಿಮಾ ನೋಡಿದೆ. ಬಳಿಕ ಮನೆಗೆ ಹೋಗಿ ಡಿವಿಡಿ ತರಿಸಿಕೊಂಡು ಮತ್ತೆ ಸಿನಿಮಾ ನೋಡಿದೆ. ಈ ಸಿನಿಮಾ ನೋಡಿದ ಬಳಿಕ ಅದು ನಿಜವಾಗಿಯೂ ಸಿನಿಮಾನಾ? ಅನ್ನಿಸಿತು. ಅದರಲ್ಲಿನ ತಾರೆಗಳೆಲ್ಲಾ ಅದ್ಭುತವಾಗಿ ನಟಿಸಿದ್ದಾರೆ. ಆ ಸಿನಿಮಾ ನೋಡಿದ ಬಳಿಕ ಸಂಜಯ್ ಲೀಲಾ ಬನ್ಸಾಲಿ ಅವರ ಬ್ಲಾಕ್ ನೋಡಿದೆ. ಇದೂ ಸಹ ಭಿನ್ನವಾದ ಸಿನಿಮಾ. ಸಂಜಯ್ ಅವರ ಈ ಎರಡು ಸಿನಿಮಾಗಳನ್ನು ನೋಡಿ ನಾನು ಭಾರತಕ್ಕೆ ಬರಬೇಕೆಂದುಕೊಂಡೆ. ಅವರ ಜತೆಗೆ ಕೆಲಸ ಮಾಡಬೇಕೆಂದುಕೊಂಡೆ. ಆದರೆ ಇದುವರೆಗೂ ನನ್ನ ಕನಸು ನೆರವೇರಿಲ್ಲ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆ ಕೇಳಿದ ನಟ ಅರ್ಜುನ್ ಕಪೂರ್

ಮುಂಬೈ : ನಟಿ ಶ್ರೀದೇವಿ ಮಗಳು ನಟಿ ಜಾಹ್ನವಿ ಕಪೂರ್ ಅವರು ಮೊದಲಬಾರಿಗೆ ನಟಿಸುತ್ತಿರುವ 'ಧಡಕ್' ಚಿತ್ರದ ...

news

ವ್ಯಕ್ತಿಯೊಬ್ಬ ನಟಿ ಸೋಫಿಯಾಗೆ ಏನಂತ ಮಸೇಜ್ ಕಳುಹಿಸಿದ್ದಾನೆ ಗೊತ್ತಾ?

ಮುಂಬೈ : ಪತಿಯಿಂದ ದೂರವಾದ ಮಾಜಿ ಬಿಗ್ ​ಬಾಸ್​​ ಸ್ಪರ್ಧಿ, ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ...

news

ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?

ಮುಂಬೈ : ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ...

news

ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ನಟ ಸೈಫ್ ಅಲಿ ಖಾನ್‌

ಮುಂಬೈ : ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನ್ಯಾಯಾಲಯದಿಂದ ರಿಲೀಫ್ ಪಡೆದಿರುವ ...

Widgets Magazine