ಲವರ್‌ಗೆ ಕನ್ನಡ ಕಲಿಸಿದ ನಟಿ ಪ್ರಿಯಾಮಣಿ

ಬೆಂಗಳೂರು, ಸೋಮವಾರ, 26 ಸೆಪ್ಟಂಬರ್ 2016 (19:41 IST)

Widgets Magazine

ಡ್ರಾಮಾ ಜ್ಯೂನಿಯರ್ಸ್ ಫೈನಲ್ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಮಣಿ ಹಾಗೂ ದನಕಾಯೋನು ಚಿತ್ರತಂಡ 
ಭಾಗಿಯಾಗಿದೆ.. ಗದಗ್‌‌ಗೆ ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುನ್ನ ಪ್ರಿಯಾಮಣಿ ತಮ್ಮ ಭಾವಿ ಪತಿಗೆ ಕನ್ನಡ ಕಲಿಸುವ ಮೂಲಕ ಮಾಧ್ಯಮಗಳ ಗಮನ ಸೆಳೆದರು. ಜತೆಗೆ ಯೋಗರಾಜ್ ಭಟ್ ಕೂಡ ಇದ್ದರು. 


ಗದಗ್ ಕಾರ್ಯಕ್ರಮಕ್ಕೆ ಪ್ರಿಯಾಮಣಿ ಲವರ್ ಮುಸ್ತಾಫ ಕೂಡಾ ಹೋಗಿದ್ದರು. ಕಾರಿನಲ್ಲಿ ಹೊರಟಿದ್ದ ವೇಳೆಯಲ್ಲಿ ಪ್ರಿಯಾಮಣಿ ಕೇರಳ ಮೂಲದ ಉದ್ಯಮಿ, ಭಾವಿ ಪತಿ ಮುಸ್ತಾಫ್ ರನ್ನು ಮಾಧ್ಯಮಗಳಿಗೆ ಪರಿಚಯಿಸಿದರು. ಈ ವೇಳೆ ಮುಸ್ತಾಫ್ ರಿಂದ ಕನ್ನಡದಲ್ಲಿ ಒಂದೆರೆಡು ಪದಗಳನ್ನು ಹೇಳಿಸಿದ್ದರು. 

ಮಂಗಳೂರಿನ ಚಿತ್ರಾಲಿ, ಗದಗಿನ ಪುಟ್ಟರಾಜು ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಡೆಯ ಸುತ್ತಿನಲ್ಲಿ ಪುಟ್ಟರಾಜು ಹಾಗೂ ಚಿತ್ರಾಲಿಯನ್ನು ವಿಜೇತರೆಂದು ಘೋಷಿಸಲಾಯ್ತು. ಮಹೇಂದ್ರ ಮೊದಲ ರನ್ನರ್ ಅಪ್ ಆಗಿದ್ದರೆ, ಅಮೋಘಾ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
 
ಅಂತಿಮ ಸುತ್ತಿಗೆ ಅಚಿಂತ್ಯಾ, ತುಷಾರ್, ಪುಟ್ಟರಾಜು ಹಾಗೂ ಚಿತ್ರಾಲಿ, ಮಹೇಂದ್ರ, ರೇವತಿ, ತೇಜಸ್ವಿನಿ ಭಾಗಿಯಾಗಿದ್ದರು. ಮಾಸ್ಟರ್ ಆನಂದ ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದರು. ತೀರ್ಪುಗಾರರಾಗಿ ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, ಹಿರಿಯ ಕಲಾವಿದ ಲಕ್ಷ್ಮೀ ಹಾಗೂ ನಟ ವಿಜಯ್ ರಾಘವೇಂದ್ರ ಭಾಗಿಯಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಡ್ರಾಮಾ ಜ್ಯೂನಿಯರ್ಸ್ ನಲ್ಲಿ ವಿಜೇತರಾದ ಚಿತ್ರಾಲಿ, ಪುಟ್ಟರಾಜು

ಕನ್ನಡಿಗರಾದ ಮನೆ ಮಾತಾಗಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಅಂತಿಮ ...

news

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ದೀಪಿಕಾ ಕಾಮಯ್ಯ

ಚಾಲೆಂಜಿಂಗ್ ದರ್ಶನ್ ಜೊತೆ ಚಿಂಗಾರಿಯಲ್ಲಿ ಮಿಂಚಿ, ಬಿಗ್‍ಬಾಸ್‍ನಲ್ಲಿ ಸುದ್ದಿಯಗಿದ್ದ ನಟಿ ದೀಪಿಕಾ ಕಾಮಯ್ಯ ...

news

ಅಪ್ಪನ ಜತೆಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟ ಪ್ರಭುದೇವ್

ನಟ, ನಿರ್ದೇಶಕ ಪ್ರಭುದೇವ್ ನಟನೆಯಿಂದ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ಫೇಮಸ್ ಕೋರಿಯೋಗ್ರಾಫ್ ನಿಂದ ...

news

ಸಾಂಪ್ರದಾಯಿಕ ಉಡುಗೆಯಲ್ಲಿ ಸೋನಮ್ ಮಿಂಚಿಂಗ್

ಬಾಲಿವುಡ್ ನಟಿ ಸೋನಮ್ ಕಪೂರ್ ಕಲ್ಯಾಣ ಜುವೆಲರ್ಸ್‌ನ ಶೋ ರೂಮ್ ಬಿಡುಗಡೆ ವೇಳೆ ನಟಿ ಸೋನಮ್ ಕಪೂರ್ ...

Widgets Magazine