ಸಿನಿಮಾವಾಗಲಿದೆ ಕಪಿಲ್ ದೇವ್ ರ 1983 ರ ಸಾಹಸ

ಮುಂಬೈ, ಸೋಮವಾರ, 25 ಸೆಪ್ಟಂಬರ್ 2017 (09:36 IST)

ಮುಂಬೈ: ಧೋನಿ, ಸಚಿನ್ ನಂತರ ಭಾರತದ ಇನ್ನೊಬ್ಬ ಮಹಾನ್ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಚರಿತ್ರೆ ಸಿನಿಮಾವಾಗಲಿದೆ.


 
ಬಾಲಿವುಡ್ ನಲ್ಲಿ ಕ್ರೀಡಾ ಕಥಾ ವಸ್ತುಗಳ ಸಿನಿಮಾಗಳನ್ನು ಮಾಡಿ ಹೆಸರುವಾಸಿಯಾಗಿರುವ ಕಬೀರ್ ಖಾನ್ ಈ ಸಿನಿಮಾ ಮಾಡಲಿದ್ದಾರೆ. ಹಾಗಿದ್ದರೆ ಕಪಿಲ್ ಪಾತ್ರ ಯಾರು ಮಾಡುತ್ತಾರೆ ಗೊತ್ತಾ? ರಣವೀರ್ ಸಿಂಗ್!
 
ಹೌದು. ರಣವೀರ್ ಕಪಿಲ್ ಪಾತ್ರ ನಿರ್ವಹಿಸಲಿದ್ದಾರೆ. ಈ ಸಿನಿಮಾದಲ್ಲಿ ವಿಶೇಷವಾಗಿ ಕಪಿಲ್ ಅವರ 1983 ರ ವಿಶ್ವಕಪ್ ಗೆಲುವಿನ ಸಾಹಸ ಹೈಲೈಟ್ ಆಗಲಿದೆಯಂತೆ. 1983 ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಣದಲ್ಲಿ ಕಪಿಲ್ ಪಡೆ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ವಿಶ್ವ ಚಾಂಪಿಯನ್ ಆಗಿದ್ದು ಇಂದಿಗೂ ಜನ ಮರೆತಿಲ್ಲ. ಅದನ್ನು ತೆರೆ ಮೇಲೆ ನೋಡಲು ಉತ್ಸುಕರಾಗಿದ್ದರೆ ಸ್ವಲ್ಪ ಸಮಯ ಕಾಯಲೇ ಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಮಹಿರಾ ಖಾನ್ ಜತೆ ರಣಬೀರ್ ದಮ್ ಎಳೆದರೆ ತಪ್ಪೇನು?’

ಮುಂಬೈ: ಪಾಕಿಸ್ತಾನಿ ಮೂಲದ ನಟಿ ಮಹಿರಾ ಖಾನ್ ಜತೆ ಹೋಟೆಲ್ ಒಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಧಮ್ ...

news

‘ರಾಮ್ ರಹೀಂ ಹತ್ತಿರ ಸುಳಿಯಲೂ ಹನಿಪ್ರೀತ್ ನನ್ನನ್ನು ಬಿಟ್ಟಿರಲಿಲ್ಲ’

ನವದೆಹಲಿ:ವಿವಾದಿತ ಬಾಬಾ ರಾಮ್ ರಹೀಂ ಸಿಂಗ್ ಕುರಿತಾಗಿ ಸಿನಿಮಾ ಮಾಡಲು ಹೊರಟಿದ್ದ ಬಾಲಿವುಡ್ ಹಾಟ್ ಬೆಡಗಿ ...

news

ಡ್ರಾಮಾ ಜ್ಯೂನಿಯರ್ಸ್ ಗೆ ತೀರ್ಪು ನೀಡಲು ಬರಲಿದ್ದಾರೆ ‘ಮುಖ್ಯಮಂತ್ರಿ’!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ...

news

ಡ್ರಾಮಾ ಜ್ಯೂನಿಯರ್ಸ್ ನಿಂದ ಟಿಎನ್ ಸೀತಾರಾಂ ಔಟ್!

ಬೆಂಗಳೂರು: ಹಿರಿಯ ನಿರ್ದೇಶಕ ಟಿಎನ್ ಸೀತಾರಾಂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ...

Widgets Magazine
Widgets Magazine