Widgets Magazine

ಕತ್ರೀನಾ ಕೈಫ್ ಇಂಗ್ಲೆಂಡ್‌ನಲ್ಲಿ ಸ್ನೇಹಿತರೊಂದಿಗೆ ಜಾಲಿ ರೈಡ್

ಬೆಂಗಳೂರು| nagashree| Last Modified ಶುಕ್ರವಾರ, 31 ಆಗಸ್ಟ್ 2018 (15:33 IST)
ಕತ್ರೀನಾ ಕಾರಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರು ಇಂಗ್ಲೆಂಡ್‌ನಲ್ಲಿರುವುದು ಕಂಡುಬರುತ್ತದೆ. ಸಹ-ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾಲ್ಟಾದಲ್ಲಿ ಭಾರತ್ ಚಿತ್ರದ ಚಿತ್ರೀಕರಣದ ನಂತರ ಇಂಗ್ಲೆಂಡ್‌ಗೆ ತೆರಳಿದ್ದರು. ಕತ್ರೀನಾ ಈಗ ತಮ್ಮ ಸ್ನೇಹಿತರೊಂದಿಗೆ ರೋಡ್ ಟ್ರಿಪ್‌ನಲ್ಲಿದ್ದು ಆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕಳೆದ ವಾರ ಮಾಲ್ಟಾದಲ್ಲಿ ಭಾರತ್ ಚಿತ್ರದ ಶೂಟಿಂಗ್ ಸ್ಥಳದಿಂದ ತಮ್ಮ ಭಾವಚಿತ್ರವನ್ನು ತೆಗೆದು "ಮಾಲ್ಟಾ" ಎನ್ನುವ ಶೀರ್ಷಿಕೆಯ ಅಡಿ ಅಪ್‌ಲೋಡ್ ಮಾಡಿದ್ದರು. ಆ ಚಿತ್ರದಲ್ಲಿ ಕತ್ರೀನಾ ತಮ್ಮ ಬೌನ್ಸಿ ಕೂದಲು ಮತ್ತು ತಾಜಾ ಮುಖದಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದು ಅವರ ಅಭಿಮಾನಿಗಳಿಗೆ ಹಬ್ಬವನ್ನುಂಟುಮಾಡಿತ್ತು. ಪ್ರಿಯಾಂಕಾ ಛೋಪ್ರಾ ಭಾರತ್‌ನಿಂದ ಹೊರನಡೆದ ನಂತರ, ಸಲ್ಮಾನ್‌ಗೆ ಎದುರಾಗಿ ಕತ್ರೀನಾ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಟಬು ಮತ್ತು ದಿಶಾ ಪಟಾನಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
 
ಭಾರತ್ ಅನೇಕ ಕಾಲಾವಧಿಯಲ್ಲಿ ಪ್ಯಾಪಿಸಿರುವ ಒಂದು ಕಥೆಯನ್ನು ಹೊಂದಿದ್ದು, ಮಾಲ್ಟಾ, ಅಬುಧಾಬಿ, ಪಂಜಾಬ್, ದೆಹಲಿಯಲ್ಲಿ ಚಿತ್ರೀಕರಣಗೊಳ್ಳಲಿದೆ. ಅಲಿ ಅಬ್ಬಾಸ್ ನಿರ್ದೇಶನದ ಈ ಚಿತ್ರವನ್ನು ಮುಂದಿನ ವರ್ಷ ಜೂನ್ 5 ರಂದು ಬಿಡುಗಡೆಗೊಳಿಸಲು ತಯಾರಿ ನಡೆಸಲಾಗುತ್ತಿದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :