‘ಹುಡುಗ ಹುಡುಗಿ ಜತೆಯಾಗಿ ಸುತ್ತಾಡುವುದರಲ್ಲಿ ತಪ್ಪೇನು?’

ಮುಂಬೈ, ಶನಿವಾರ, 21 ಅಕ್ಟೋಬರ್ 2017 (07:34 IST)

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ರಣಬೀರ್ ಕಪೂರ್ ಪಾಕಿಸ್ತಾನ ಬೆಡಗಿ ಮಹಿರಾ ಖಾನ್ ಜತೆಗೆ ಸಿಗರೇಟು ಸೇದುತ್ತಿರುವ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಗುಲ್ಲೆದ್ದಿತ್ತು. ಇದೀಗ ಸ್ವತಃ ಮಹಿರಾ ಅದರ ಬಗ್ಗೆ ಕಾಮೆಂಟ್ ಮಾಡಿದ್ದಾಳೆ.


 
ಪಾಕ್ ಮೂಲದ ನಟಿ ಅಲ್ಲಿನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ‘ಪ್ರಾಯಕ್ಕೆ ಬಂದ ಒಬ್ಬ ಹುಡುಗ, ಹುಡುಗಿ ಜತೆಯಾಗಿ ಸುತ್ತಾಡುವುದು ಸರ್ವೇ ಸಾಮಾನ್ಯ. ಅದರಲ್ಲಿ ವಿವಾದ ಮಾಡುವಂತದ್ದು ಏನಿದೆ? ಅಷ್ಟಕ್ಕೂ ಇದು ನಮ್ಮ ವೈಯಕ್ತಿಕ ವಿಷಯ. ಇದರಲ್ಲಿ ಪ್ರಶ್ನೆ ಮಾಡುವುದೇನಿದೆ?’  ಎಂದು ಮಹಿರಾ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ.
 
ವಿವಾದವಾದ ಸಂದರ್ಭದಲ್ಲಿ ರಣಬೀರ್ ಪರ ತಂದೆ ರಿಷಿ ಕಪೂರ್ ಬ್ಯಾಟಿಂಗ್ ಮಾಡಿದ್ದರು. ಅವರಿಬ್ಬರಿಗೂ ಮದುವೆಯಾಗಿಲ್ಲ. ಹೊರಗಡೆ ಸುತ್ತಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಈ ವಿವಾದದಿಂದಾಗಿ ನೀವು ಪತ್ರಕರ್ತರು ಎಲ್ಲೆಲ್ಲೂ ಇರ್ತೀರಾ. ಇನ್ನು ಹುಷಾರಾಗಿರಬೇಕು ಎಂದು ಕಲಿತುಕೊಂಡೆ ಎಂದಿದ್ದಾಳೆ ಮಹಿರಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟಾಸ್ಕ್ ಕಂಪ್ಲೀಟ್ ಮಾಡಲಾಗದೆ ಕಣ್ಣೀರಿಟ್ಟ ಬಾರ್ಬಿ ಡಾಲ್, ಆಶಿತಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ನಿನ್ನೆ ಕಣ್ಣೀರಿನ ಕೋಡಿ ಹರಿಯಿತು. ಸ್ಪರ್ಧಿಗಳಿಗೆ ಬಿಗ್ಬಾಸ್ ನೀಡಿದ್ದ ...

news

ಸಚಿವ ಎಚ್ ಎಂ ರೇವಣ್ಣ ಇನ್ನು ಸಿಎಂ!

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಎಚ್ ಎಂ ರೇವಣ್ಣ ಇನ್ನು ಮುಖ್ಯಮಂತ್ರಿಯಾಗಲಿದ್ದಾರೆ! ...

news

ತಮಿಳು ನಟ ವಿಜಯ್ ಮೆರ್ಸಲ್ ಚಿತ್ರಕ್ಕೆ ಮತ್ತೊಂದು ವಿವಾದ

ಚೆನ್ನೈ: ತಮಿಳು ನಟ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರದ ಅಭಿಮಾನಿಗಳು ಬೆಂಗಳೂರಿನ ಥಿಯೇಟರ್ ಗಳ ಮುಂದೆ ...

news

ಪುಟ್ಟಗೌರಿ ಮದುವೆಗೆ ಅಭಿಮಾನಿಗಳು ತಮಾಷೆ ಮಾಡಿದರೂ ಡೋಂಟ್ ಕೇರ್ ಎಂದ ನಿರ್ದೇಶಕ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿ ಬಗ್ಗೆ ...

Widgets Magazine
Widgets Magazine