Widgets Magazine
Widgets Magazine

ವಿವಾಹವಾಗದೇ ತಾಯಿಯಾಗುತ್ತಿದ್ದಾಳಂತೆ ಹಾಟ್ ನಟಿ ಮಲ್ಲಿಕಾ ಶೆರಾವತ್

ಮುಂಬೈ, ಶುಕ್ರವಾರ, 21 ಅಕ್ಟೋಬರ್ 2016 (16:25 IST)

Widgets Magazine

ಬಾಲಿವುಡ್‌ನ ಹಾಟ್ ಹಾಟ್ ನಟಿಯಾಗಿದ್ದ ತಾರೆ ಕರೀನಾ ಕಪೂರ್ ಇದೀಗ ಗರ್ಭಿಣಿಯಾಗಿ ತಾಯ್ತನದ ಸುಖ ಅನುಭವಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಅದಲ್ಲ ವಿಶೇಷ. ಇದೀಗ ಹಾಟ್ ಐಟಂ ಗರ್ಲ್ ಮಲ್ಲಿಕಾ ಶೆರಾವತ್ ವಿವಾಹವಾಗದೇ ತಾಯಿಯಾಗುತ್ತಿರುವುದು. 

 
ಮರ್ಡರ್ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಿಂದ ಪಡ್ಡೆ ಹುಡುಗರ ಮನೆ ಮಾತಾಗಿ ಖ್ಯಾತಿ ಪಡೆದಿದ್ದ ಶೆರಾವತ್, ಫ್ರಾನ್ಸ್‌ನ ರಿಯಲ್ ಎಸ್ಟೇಟ್ ಉದ್ಯಮಿ ಸಿರಿಲ್ಲೆ ಆಕ್ಸೆನ್‌ಫಾನ್ಸ್ ಅವರೊಂದಿಗೆ ಲವ್ವಿ ಡವ್ವಿ ನಡೆಸುತ್ತಿದ್ದಾರೆ. ಪ್ರಿಯಕರನ ಭೇಟಿಗಾಗಿ ಮುಂಬೈ ಮತ್ತು ಪ್ಯಾರಿಸ್ ಹಾರಾಟ ನಡೆಸುತ್ತಿದ್ದಾರೆ.  
 
ಶೆರಾವತ್ ಮತ್ತು ಸಿರಿಲ್ಲೆ ಆಕ್ಸೆನ್‌ಫಾನ್ಸ್ ಇಬ್ಬರು ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ವರದಿಗಳು ಬಹಿರಂಗವಾಗಿವೆ. ಆದರೆ, ಮಲ್ಲಿಕಾ ಮಾತ್ರ, ಇಲ್ಲಪ್ಪ ಆಯಪ್ಪನನ್ನು ವಿವಾಹವಾಗೇ ಇಲ್ಲ ಎಂದು ನುಲಿದಿದ್ದಾಳೆ.
 
ಆದರೆ, ಇದೀಗ ಬಂದ ಹಾಟ್ ನಟಿಯ ಹಾಟ್ ಸುದ್ದಿಯೆಂದರೆ ಇಬ್ಬರು ತಂದೆತಾಯಿಯಾಗಲು ಯೋಜನೆ ರೂಪಿಸುತ್ತಿದ್ದಾರೆ ಎನ್ನುವ ವರದಿಗಳು ರೆಕ್ಕೆಪುಕ್ಕ ಕಟ್ಟಿ ಹಾರಾಡುತ್ತಿವೆ.
 
ಕಳೆದ ಎರಡು ವರ್ಷಗಳಿಂದ ಮಲ್ಲಿಕಾ ಮತ್ತು ಸಿರಿಲ್ಲೆ ಲೈವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ತಂದೆತಾಯಿಯಾಗುವ ಅವರ ನಿರ್ಧಾರದ ಬಗ್ಗೆ ನಟಿಯ ಮ್ಯಾನೇಜರ್‌ನನ್ನು ಸಂಪರ್ಕಿಸಿದಾಗ, ಛೇ ಎಂತಹ ಮಾತು ಹೇಳ್ತೀರಾ? ಅವರಿಬ್ಬರು ಲೈವ್ ಇನ್ ರಿಲೇಶನ್‌ಶಿಪ್‌ನಲ್ಲಿ ಸಂತೋಷವಾಗಿದ್ದಾರೆ ಎಂದು ವರದಿಗಳನ್ನು ತಳ್ಳಿಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇಂದು ರಾಮಾ ರಾಮಾ ರೇ ಬಿಡುಗಡೆ

ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ರಾಮಾ ರಾಮಾ ರೇ”.

news

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್

ಕಾವೇರಿ ವಿವಾದ ವಿಚಾರದಲ್ಲಿ ಮಾಧ್ಯಮಗಳಿಗೆ ಸವಾಲು ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸೆಂಚುರಿ ಸ್ಟಾರ್ ...

news

ಜಗ್ಗೇಶ್ ನೀರ್ ದೋಸೆ ಅರ್ಧಶತಕ

ನವರಸನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಅಭಿನಯದ ನೀರ್ ದೋಸೆ ಚಿತ್ರ 50 ದಿನಗಳನ್ನು ಪೂರೈಸಿ ...

news

“ಮನೆದೇವ್ರು” ಧಾರವಾಹಿಯ ಅರ್ಚನಾ ಈಗ ಸಿನಿಮಾ ನಾಯಕಿ

ಕಲರ್ಸ್ ಕನ್ನಡ ವಾಹಿನಿಯ ಇನ್ನೊಬ್ಬ ಬೆಡಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಅರ್ಚನಾ ...

Widgets Magazine
Widgets Magazine Widgets Magazine