ಇನ್ನೂ ಮುಗಿದಿಲ್ಲ ವಿಜಯ್ ‘ಮರ್ಸೆಲ್’ ವಿವಾದ

ಮುಂಬೈ, ಸೋಮವಾರ, 23 ಅಕ್ಟೋಬರ್ 2017 (09:06 IST)

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ  ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಬಿಜೆಪಿ ವಾದಕ್ಕೆ ಬಾಲಿವುಡ್ ನಿರ್ದೇಶಕ ಫರ್ಹಾನ್ ಅಖ್ತರ್ ತಿರುಗೇಟು ನೀಡಿದ್ದಾರೆ.


 
ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮತ್ತು ಫರ್ಹಾನ್ ಅಖ್ತರ್ ನಡುವೆ ಈ ವಿವಾದದ ಕುರಿತಾಗಿ ಟ್ವಿಟರ್ ನಲ್ಲಿ ಮಾತಿನ ಚಕಮಕಿಯೇ ನಡೆದಿದೆ.
 
ರಾವ್ ತಮ್ಮ ಟ್ವಿಟರ್ ನಲ್ಲಿ ಸಿನಿಮಾ ತಾರೆಯರಿಗೆ ಕಡಿಮೆ ಜ್ಞಾನ ಮತ್ತು ಬುದ್ಧಿವಂತಿಕೆಯಿದೆ ಎಂದಿದ್ದರು. ಇದು ಅಖ್ತರ್ ರನ್ನು ಕೆರಳಿಸಿದ್ದು, ಹೀಗೆ ಹೇಳಲು ನಿಮಗೆಷ್ಟು ಧೈರ್ಯ? ಎಂದು ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ನರಸಿಂಹ ರಾವ್ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಧೈರ್ಯ ಬೇಕಾಗಿಲ್ಲ. ನಟರ ಕೆಲಸವನ್ನು ಗೌರವಿಸುತ್ತೇವೆ. ಟೀಕೆಗಳನ್ನು ಸರಿಯಾದ ರೀತಿಯಲ್ಲೇ ಸ್ವೀಕರಿಸಿ. ಅಸಹಿಷ್ಣುತೆ ಎನ್ನಬೇಡಿ ಎಂದು ತಿರುಗೇಟು ನೀಡಿದ್ದಾರೆ. ಅಂತೂ ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲರೂ ಪ್ರತಿಕ್ರಿಯಿಸುವ ಮಟ್ಟಿಗೆ ಮರ್ಸೆಲ್ ಚಿತ್ರ ಫೇಮಸ್ಸಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥಕ್ಕೆ ಧ್ರುವ ಸರ್ಜಾ ಸಂಭ್ರಮ

ಬೆಂಗಳೂರು: ಅಣ್ಣ ಚಿರು ಸರ್ಜಾ ಮತ್ತು ಭಾವೀ ಅತ್ತಿಗೆ ಮೇಘನಾ ರಾಜ್ ನಿಶ್ಚಿತಾರ್ಥದ ಸಂಭ್ರಮವನ್ನು ಸಹೋದರ, ...

news

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಸುಮಾ ...

news

ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…

ಮುಂಬೈ: ವಿರಾಟ್ ಹಾಗೂ ಅನುಷ್ಕಾ ಶರ್ಮಾ ಲವ್ ಬರ್ಡ್ಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ...

news

ಸಂಜಯ್ ದತ್ ಮಗಳ ಸೆಕ್ಸಿ ಫೋಟೊ ವೈರಲ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಲಾ ಸೆಕ್ಸಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ...

Widgets Magazine
Widgets Magazine