ಬಹು ನಿರೀಕ್ಷಿತ ಚಿತ್ರ 'ಪದ್ಮಾವತ್' ಜ. 25ಕ್ಕೆ ತೆರೆಯಮೇಲೆ ಬರಲಿದೆ..!!

ನಾಗಶ್ರೀ ಭಟ್ 

ಬೆಂಗಳೂರು, ಸೋಮವಾರ, 8 ಜನವರಿ 2018 (17:19 IST)

ಹಲವಾರು ವಿವಾದಗಳಿಗೆ ತುತ್ತಾಗಿದ್ದ ಸಂಜಯ್ ಲೀಲಾ ಬನ್ಸಾಲಿಯವರ ನಿರ್ಮಾಣದ 'ಪದ್ಮಾವತ್' ಜನವರಿ 25, 2018 ರಂದು ಬಿಡುಗಡೆಯಾಗುತ್ತಿದೆ.

ಇದು ಸೂಫಿ ಲೇಖಕರಾದ ಮಲಿಕ್ ಮುಹಮ್ಮದ್ ಜಯಾಸಿ ಅವರು 1950 ರಲ್ಲಿ ಬರೆದ 'ಪದ್ಮಾವತ್' ಮಹಾಕಾವ್ಯವನ್ನು ಆಧರಿಸಿ ನಿರ್ಮಿಸಿರುವ ಚಿತ್ರವಾಗಿದೆ. ಚಿತ್ರದ ಹೆಸರನ್ನು 'ಪದ್ಮಾವತಿ' ಇಂದ 'ಪದ್ಮಾವತ್'ಗೆ ಬದಲಾಯಿಸಿ ಚಿತ್ರದ ಹಲವಾರು ಸೀನ್‌ಗಳನ್ನು ಮರುಚಿತ್ರಿಸುವಂತೆ ಸೂಚಿಸಿದ ಬಳಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.
 
'ಪದ್ಮಾವತ್' ಹೆಸರಿನಿಂದ ಬಿಡುಗಡೆಯಾಗುತ್ತಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಶಾಹಿದ ಕಪೂರ್ ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಚಿತ್ರವು ಅದರ ಅತಿ ಹೆಚ್ಚು ಬಜೆಟ್‌ನಿಂದ, ಚಿತ್ರಿಸುವ ಸಮಯದಲ್ಲಾದ ಗಲಾಟೆಗಳಿಂದ ಹಾಗೂ ರಾಣಿ ಪದ್ಮಾವತಿಯ ಪ್ರತಿಷ್ಠೆಗೆ ಅವಮಾನವಾಗುವಂತೆ ತೋರಿಸಲಾಗಿದೆ ಎನ್ನುವ ವಾದವಿವಾದಗಳಿಂದ ಹೆಚ್ಚಿನ ಜನರಲ್ಲಿ ಕುತೂಹಲವನ್ನು ಕೆರಳಿಸಿದ್ದು ಅನೇಕ ಜನರು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
 
ಎಲ್ಲಾ ಅಂದು ಕೊಂಡಂತೆಯೇ ಆಗಿದ್ದರೆ ಡಿಸೆಂಬರ್ 1, 2017 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಹಲವು ವಿವಾದಗಳಿಂದಾಗಿ ಜನವರಿ 25, 2018 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಅಕ್ಷಯ್ ಕುಮಾರ ಅಭಿನಯದ ಪ್ಯಾಡ್ ಮ್ಯಾನ್ ಸಹ ಬಿಡುಗಡೆಯಾಗುತ್ತಿದೆ. 'ಪದ್ಮಾವತ್' ದೊಡ್ಡ ಬಜೆಟ್‌ನ ಚಿತ್ರವಾಗಿರುವುದರಿಂದ ಜ. 25ರ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಮನೋಜ್ ಪಾಂಡೆ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಅವರ ಅಭಿನಯದ ಚಿತ್ರ ಅಯಾರಿ ಯ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಭಾವಿ ಸೊಸೆಗೆ ರಣವೀರ್ ಪೋಷಕರು ನೀಡಿದ ಉಡುಗೊರೆ ಏನು ಗೊತ್ತಾ...?

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದು, ...

news

ಜಗ್ಗೇಶ್ ಗೆ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ತೊಟ್ಟಿಲು ತೂಗುವುದನ್ನು ನೋಡುವಾಸೆಯಂತೆ!

ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಸಿನಿ ಲೋಕದ ಗಣ್ಯರೂ ಯಶ್ ಗೆ ಹುಟ್ಟು ಹಬ್ಬದ ಶುಭಾಷಯ ...

news

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಬಿಡುಗಡೆಯಾಯ್ತು ಜಬರ್ ದಸ್ತು ಕೆಜಿಎಫ್ ಟೀಸರ್ (ವಿಡಿಯೋ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಪತ್ನಿ ರಾಧಿಕಾ ಪಂಡಿತ್ ಸೇರಿದಂತೆ ...

news

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ, ನಿವೇದಿತಾಗೆ ಮನೆಯೊಳಗಿರುವ ಅರ್ಹತೆಯೇ ಇಲ್ಲ ಎಂದ್ರು ಕೃಷಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಕೃಷಿ ತಾಪಂಡ, ಸಮೀರ್ ಆಚಾರ್ಯ, ...

Widgets Magazine
Widgets Magazine