ಸಿಲ್ವರ್ ಸ್ಕ್ರೀನ್ ನಲ್ಲಿ ಮತ್ತೆ ಒಂದಾಗ್ತಾರ ಐಶ್-ಅಭಿ

ಮುಂಬೈ, ಬುಧವಾರ, 27 ಸೆಪ್ಟಂಬರ್ 2017 (21:34 IST)

ಮುಂಬೈ: `ಗುರು’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿ ಬಿದ್ದು, ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆದರೆ ಮದುವೆ ನಂತರ ಐಶ್ ಅಭಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ.


ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮದುವೆಯಾದ ಬಳಿಕ ಹಲವು ಬಿಗ್ ಡೈರೆಕ್ಟರ್ ಗಳ ಸಿನಿಮಾಗಳಿಗೆ ಆಫರ್ ಬಂದರೂ ಸಹ ಇಬ್ಬರು ಒಟ್ಟಿಗೆ ನಟಿಸೋಕೆ ಸಮ್ಮತಿ ನೀಡಿರಲಿಲ್ಲ. ಆದರೆ ಈಗ ವಾಸು ಭಗ್ನಾನಿ `ಸುಂದರಕಾಂಡ್’ ಸಿನಿಮಾ ಮಾಡ್ತಿದ್ದಾರೆ. ಈ ಹಿಂದೆಯೂ ಐಶ್ ಅಭಿ ದಂಪತಿಗೆ ತಮ್ಮ  ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದ ಭಗ್ನಾನಿ ಈಗ ಈ ಸಿನಿಮಾದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದ್ದಾರಂತೆ.

ಆದರೆ ಬಾಲಿವುಡ್ ದಿವಾ ಐಶ್ವರ್ಯ ಮತ್ತು ಅಭೀಷೇಕ್ ಬಚ್ಚನ್ ಈ ಚಿತ್ರದಲ್ಲಿ ಬೆಳ್ಳೆ ತೆರೆ ಮೇಲೆ ಕಾಣಿಸಿಕೊಳ್ತಾರ ಗೊತ್ತಿಲ್ಲ. ಅಥವಾ ಈ ಚಿತ್ರವನ್ನು ನಿರಾಕರಿಸುತ್ತಾರ ಎಂದು ಕಾದುನೋಡಬೇಕು.
ಈ ಚಿತ್ರಕ್ಕೆ ಇರ್ಫಾನ್ ಮತ್ತು ತಾಪ್ಸಿ ಪನ್ನು ಜತೆ ಮಾತುಕತೆಯಾಗಿತ್ತು. ಆದರೆ ಅವರಿಬ್ಬರೂ ಈ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ದಂಪತಿ ಸಿನಿಮಾದ ಸ್ಕ್ರಿಪ್ಟ್ ಕೇಳಿದ್ದಾರಂತೆ. ಆದರೆ ಒಟ್ಟಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ ಕಾದು ನೋಡಬೇಕು.

ಐಶ್ವರ್ಯ ಮತ್ತು ಅಭಿಷೇಕ್ ಕೊನೆಯದಾಗಿ ಮಣಿರತ್ನಂ ನಿರ್ದೇಶನದ ರಾವಣ್ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಯಾವುದೇ ಚಿತ್ರದಲ್ಲೂ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರಲಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಮೊದಲ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಸಲ್ಮಾನ್ ...

news

ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾದ ಬಾಹುಬಲಿ 2!

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ...

news

ಚಿತ್ರರಂಗಕ್ಕೆ ರಮ್ಯಾ ಹೇಳ್ತಾರಂತೆ ಗುಡ್ ಬೈ!

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ಬೇಸರವಾಗುವಂತಹ ...

news

ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ

ಬೆಂಗಳೂರು: ಸತತ ಸಿನಿಮಾಗಳಿಂದ ಬ್ಯುಸಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಜಾಲಿ ಮೂಡಲ್ಲಿದ್ದಾರೆ. ತಮ್ಮ ...

Widgets Magazine