Widgets Magazine

ಪವನ್ ಕಲ್ಯಾಣ್​ 'ಮೈ ರಿಯಲ್​ ಇನ್​ಸ್ಪಿರೇಷನ್' ಎಂದ ಪೂನಂಪಾಂಡೆ

ಹೈದರಾಬಾದ್| pavithra| Last Modified ಗುರುವಾರ, 6 ಸೆಪ್ಟಂಬರ್ 2018 (14:08 IST)
ಹೈದರಾಬಾದ್ : ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಅವತಾರದಲ್ಲಿ ಸುದ್ದಿಯಾಗುತ್ತಿರುವ ಮಾದಕ ನಟಿ ಪೂನಂಪಾಂಡೆ ಇದೀಗ ಟಾಲಿವುಡ್ ನ ಸೂಪರ್ ಸ್ಟಾರ್ ಪವನ್​​​​​​ ಕಲ್ಯಾಣ್ ಅವರಿಗೆ ವಿಶ್ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ.


ಹೌದು. ಇತ್ತೀಚೆಗಷ್ಟೇ ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ 47 ನೇ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪೂನಂಪಾಂಡೆ ಪವನ್ ಕಲ್ಯಾಣ್ ಅವರಿಗೆ ಟ್ವೀಟ್ ಮೂಲಕ
ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


'ಹ್ಯಾಪಿ ಬರ್ತ್​ಡೇ ಪವರ್​ ಸ್ಟಾರ್​ ಪವನ್​​​​​​ ಕಲ್ಯಾಣ್​ ಸರ್​. ಈ ದಿನ ನನ್ನ ಮುಂದಿನ ಚಿತ್ರ 'ಲೇಡಿ ಗಬ್ಬರ್ ಸಿಂಗ್​' ಸಿನಿಮಾವನ್ನು ನಿಮಗೆ ಡೆಡಿಕೇಟ್​ ಮಾಡುತ್ತೇನೆ. ಪವನ್ ಕಲ್ಯಾಣ್​ 'ಮೈ ರಿಯಲ್​ ಇನ್​ಸ್ಪಿರೇಷನ್' ಅಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.


ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಸಿನಿಮಾ ಪ್ರಮೋಷನ್ ಗಾಗಿ ಈ ರೀತಿ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.





ಇದರಲ್ಲಿ ಇನ್ನಷ್ಟು ಓದಿ :