ಪ್ರಿಯಾ ಪ್ರಕಾಶ್ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಎನ್ನುವುದು ನಿಮಗೆ ಗೊತ್ತಾ?

ನಾಗಶ್ರೀ ಭಟ್ 

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (16:37 IST)

ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ಈ ನಟಿ ಕೇವಲ ಅಭಿನಯದಲ್ಲಿ ಮಾತ್ರವಲ್ಲ ಹಾಡುವುದರಲ್ಲೂ ಪ್ರವೀಣೆ ಎನ್ನುವುದು ತಿಳಿದುಬಂದಿದೆ.
ಮೊನ್ನೆಯಿಂದಲೂ ಯೂಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಎಲ್ಲಿ ನೋಡಿದರೂ ಪ್ರಿಯಾ ಪ್ರಕಾಶ ಅಭಿನಯಿಸಿರುವ ಚಿತ್ರವೊಂದರ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ಪ್ರಿಯಾ ಕೊಟ್ಟ ಎಕ್ಸ್‌ಪ್ರೆಶನ್‌ಗಳು ಹುಡುಗರ ಹೃದಯವನ್ನು ಕದ್ದಂತಿದೆ. ಈಗಾಗಲೇ ಈ ಹಾಡನ್ನು 4 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದು ಟ್ರೆಂಡಿಂಗ್‌ನಲ್ಲಿ ನಂ. 1 ಆಗಿದೆ.
 
ಆದರೆ ಇತ್ತೀಚೆಗೆ ಪ್ರಿಯಾ ಪ್ರಕಾಶ್ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದು ನೋಡಿದಾಗ ತಿಳಿದ ವಿಷಯವೆಂದರೆ ಅವರು ಉತ್ತಮ ನಟಿಯೊಂದೇ ಅಲ್ಲ ಚೆನ್ನಾಗಿ ಹಾಡುತ್ತಾರೆ ಎನ್ನುವುದು. ಇನ್ಸ್ಟಾಗ್ರಾಮ್‌ನಲ್ಲಿರುವ ವೀಡಿಯೊವೊಂದರಲ್ಲಿ ಇವರು ಹೊಡೊಂದನ್ನು ಚೆನ್ನಾಗಿ ಹಾಡಿದ್ದಾರೆ. ಉತ್ತಮ ಕಂಠವನ್ನು ಹೊಂದಿರುವ ಇವರು ಸಂಗೀತದಲ್ಲಿ ತರಬೇತಿ ಪಡೆದಿರುತ್ತಾರೆ ಎನ್ನುವುದು ಹಲವರ ಅಭಿಪ್ರಾಯ.
 
ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ 'ಒರು ಅದಾರ್ ಲವ್' ಚಿತ್ರದ 'ಮಾಣಿಕ್ಯ ಮಲರಯಾ ಪೂವಿ' ಹಾಡಿನ ವೀಡಿಯೊ ಬಿಡುಗಡೆಯಾಗಿದ್ದು ಅದರಲ್ಲಿ ನಟಿಸಿದ ಪ್ರಿಯಾ ಪ್ರಕಾಶ್ ಒಂದೇ ದಿನದಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ವಿನೀತ್ ಶ್ರೀನಿವಾಸನ್ ಅವರು ಹಾಡಿದ, ಶಾನ್ ರೆಹಮಾನ್ ಸಂಯೋಜಿಸಿದ ಈ ಹಾಡು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಈ ಹಾಡಿನಲ್ಲಿ ಜನರನ್ನು ಹೆಚ್ಚಾಗಿ ಆಕರ್ಷಿಸಿ ಪ್ರಶಂಸೆಗೆ ಪಾತ್ರವಾಗಿದ್ದು ಪ್ರಿಯಾ ಪ್ರಕಾಶ್ ಅಭಿನಯ. ತಮ್ಮ ಕಣ್ಣಿನ ಸನ್ನೆಯಿಂದ ಇವರು ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿರುವುದು ಸುಳ್ಳಲ್ಲ.
 
ಈಗಷ್ಟೇ ತಮ್ಮ ಮೊದಲ ಚಿತ್ರದಲ್ಲಿ ಅಭಿನಯಿಸುತ್ತಿರುವ ಇವರು ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ. ಚೆನ್ನಾಗಿ ಹಾಡು ಹೇಳುವ, ಡ್ಯಾನ್ಸ್ ಮಾಡುವ ಇವರು ರೂಪದರ್ಶಿಯೂ ಹೌದು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೀರೆಯಲ್ಲಿ ಫುಶ್ ಅಪ್ಸ್ ಮಾಡಿದ ಮಂದಿರಾ, ವೈರಲ್ ಆಯ್ತು ವಿಡಿಯೋ

45 ವರ್ಷದ ಬೋಲ್ಡ್‌ ನಟಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ...

news

ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ...

news

ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದ್ದು ಯಾಕೆ ಗೊತ್ತಾ…?

ಮುಂಬೈ : ಅಕ್ಷಯ್ ಕುಮಾರ್ ಅಭಿಯದ ಪ್ಯಾಡ್ ಮ್ಯಾನ್ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಆದರೆ ...

news

ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಯಾಂಡಲ್ ವುಡ್ ನಿಂದ ಬಂಪರ್ ಆಫರ್ !

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಯಾಂಡಲ್ ವುಡ್ ನಿಂದ ಆಫರ್ ...

Widgets Magazine
Widgets Magazine