Widgets Magazine

ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದಕ್ಕೆ ಗಂಡನಿಗೆ ಪಬ್ಲಿಕ್ ಆಗಿ ಹೀಗೆ ಹೇಳಿದ್ರು ಪ್ರಿಯಾಂಕಾ ಚೋಪ್ರಾ

ಮುಂಬೈ| Krishnaveni K| Last Modified ಗುರುವಾರ, 14 ಮಾರ್ಚ್ 2019 (09:30 IST)
ಮುಂಬೈ: ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ವೃತ್ತಿ ಜೀವನದಲ್ಲೂ ಯಶಸ್ಸು ಕಾಣುತ್ತಿದ್ದಾರೆ.

 
ಅವರ ಪತಿ ನಿಕ್ ಜೊನಾಸ್ ಅವರ ‘ಸಕ್ಕರ್ಸ್’ ಮ್ಯೂಸಿಕ್ ಆಲ್ಬಮ್ ಇದೀಗ ಟ್ರೆಂಡಿಂಗ್ ನಲ್ಲಿ ನಂ.1 ಆಗಿದೆ. ಪತಿಯ ಮ್ಯೂಸಿಕ್ ಆಲ್ಬಮ್ ನಲ್ಲಿ ಪ್ರಿಯಾಂಕಾ ಕೂಡಾ ಕಾಣಿಸಿಕೊಂಡಿದ್ದಾರೆ.
 
 ಇದೀಗ ತಮ್ಮ ಆಲ್ಬಮ್ ಭಾರೀ ಯಶಸ್ವಿಯಾಗಿರುವುದಕ್ಕೆ ಖುಷಿಯಾಗಿರುವ ನಿಕ್ ಜೊನಾಸ್ ಪತ್ನಿ ಪ್ರಿಯಾಂಕಾಗೆ ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಕಾರಿನ ಬೆಲೆ ಅಂದಾಜು 2.7 ಕೋಟಿ ರೂ. ಎಂದು ಲೆಕ್ಕಾಚಾರ ಹಾಕಲಾಗಿದೆ.
 
ಗಂಡನಿಂದ ದುಬಾರಿ ಕಾರು ಉಡುಗೊರೆ ಸಿಕ್ಕ ಖುಷಿಯಲ್ಲಿ ಪ್ರಿಯಾಂಕಾ ಇನ್ ಸ್ಟಾಗ್ರಾಂನಲ್ಲಿ ಕಾರಿನ ಜತೆ ರೊಮ್ಯಾಂಟಿಕ್ ಫೋಟೋ ಒಂದನ್ನು ಪ್ರಕಟಿಸಿದ್ದು, ‘ಐ ಲವ್ ಯೂ. ನೀನು ಬೆಸ್ಟ್ ಹಸ್ಬೆಂಡ್’ ಎಂದು ಮುದ್ದು ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :