ಅಂದು ಅನುಷ್ಕಾ ಜೊತೆ ಏನಾಯ್ತು ಗೊತ್ತೆ?

ಸೋಮವಾರ, 21 ಏಪ್ರಿಲ್ 2014 (10:28 IST)

ಅಂದು ಅನುಷ್ಕಾ ಶರ್ಮ ನಟನೆಯ ಹೊಸ ಚಿತ್ರ ಎನ್ವಿಚ್ 10 . ಇದರ ಚಿತ್ರೀಕರಣ ರಾಜಸ್ತಾನದಲ್ಲಿ  ನೆರವೇರುತ್ತಿದೆ. ಇತ್ತೀಚೆಗೆ ಆ ಚಿತ್ರದ ನಿರ್ದೇಶಕ ನವದೀಪ್ಸಿಂಗ್  ನಟಿ ಅನುಷ್ಕಳಿಗೆ ಪಾತ್ರದ ವಿವರಣೆ ನೀಡಿದರು. ಸರಿ ಇನ್ನೇನು ನಟಿಸ ಬೇಕು ಅನ್ನುವಷ್ಟರಲ್ಲಿ ಸಣ್ಣ ಪ್ರಮಾಣದ ಗಾಳಿ ಆರಂಭ ಆಯಿತಂತೆ.
 
ಅದು ಎಲ್ಲರ ಮನಕ್ಕೆ ಆಹ್ಲಾದ ನೀಡಿತು.. ಅದರ ಸವಿಯನ್ನು ಸವಿಯುತ್ತಾ ಇದ್ದವರಿಗೆ ಆ ಗಾಳಿ ಪ್ರಮಾಣ ಮತ್ತಷ್ಟು ಹೆಚ್ಚಾದಾಗಲೂ ಏನೂ ಅನ್ನಿಸಲಿಲ್ಲ. ಆದರೆ ಅದರ ರಭಸ ಅದೆಷ್ಟು ಹೆಚ್ಚಾಯಿತು ಅಂದರೆ ಅಲ್ಲಿದ್ದ ಸಿನಿಮಾ ಯೂನಿಟ್ ನವರಿಗೆ ಏನು ಮಾಡ ಬೇಕು ಎಂದು ತಿಳಿಯದ ಪರಿಸ್ಥಿತಿ.
 
ಅಂದರೆ ಆ ಗಾಳಿ ಸುಂಟರಗಾಳಿಯಾಗಿ ಬದಲಾಗಿತ್ತು. ಅರ್ಧಗಂಟೆ ನಿರಂತರವಾಗಿ ಬೀಸಿ ಆ ಬಳಿಕ ತಣ್ಣಗಾಯಿತಂತೆ. ಆ ಸಮದಲ್ಲಿ ಎಲ್ಲರು ದಿಕ್ಕಾಪಾಲಾಗಿ ಬಿಟ್ಟಿದ್ದರಂತೆ. ಈ ಅನುಭವದ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾಳೆ. ಒಂದು ಪುಟ್ಟ ಪ್ರಮಾಣದ ಗಾಳಿ ಅತಿ ದೊಡ್ಡ ಸುಂಟರ ಗಾಳಿ ಆಗಿ ಬದಲಾಯಿತು. ಯೂನಿಟ್ ಸದಸ್ಯರೆಲ್ಲರೂ ಆ ಗಾಳಿಯಿಂದ ದಿಕ್ಕಾಪಾಲಾದರು. ಹಾರಿ ಬರುತ್ತಿದ್ದ ಮರಳಿನಿಂದ ಅವರ ದೇಹವು ದಣಿದು ಹೋಯಿತು.ಎಲ್ಲರು ಎಲ್ಲೆಲ್ಲೊ ಬಿದ್ದಿದ್ದರು. ಒಂದು ಸ್ವಲ್ಪ ಸಮಯ ಆದ ಬಳಿಕ ಆ ಗಾಳಿಯು ತನ್ನ ಆರ್ಭಟ ನಿಲ್ಲಿಸಿತು . ಈ ತಿಂಗಳ 17  ಎಂದಿಗೂ ಮರೆಯಲಾಗದ ದಿನ ಎನ್ನುವ ಮಾತನ್ನು ಹೇಳಿದ್ದಾಳೆ ಆಕೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಜಮೌಳಿ ಬಾಹುಬಲಿಯಲ್ಲಿ ರಜನಿಕಾಂತ್ ನಟನೆ ?

ಟಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ರಾಜಮೌಳಿ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಅವರು ಯಾವ ಚಿತ್ರವನ್ನೇ ...

news

ತುಪ್ಪದ ಹುಡುಗಿ ರಾಗಿಣಿ ಪರಪಂಚದ ಐಟಂ ನಂಬರ್ ನಲ್ಲಿ ಕಾಣಿಸ್ತಾ ಇದ್ದಾರ?

ತುಪ್ಪ ಬೇಕ ತುಪ್ಪ ಎಂದು ಕನ್ನಡ ಸಿನಿ ರಸಿಕರ ಮೂಗಿಗೆ ತುಪ್ಪ ಸವರಿ ಮನಕ್ಕೆ ಖುಷಿ ಕೊಟ್ಟ ಚೆಲುವೆ ರಾಗಿಣಿ ...

news

ರಕ್ಷಿತ್ ಶೆಟ್ಟಿಗೆ ಇವರೆಂದರೆ ಪಂಚಪ್ರಾಣ...!

ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ...

news

ಸಾರಿ ‍ಫ್ರೆಂಡ್ಸ್ ಸಾರಿ ಎಂದರು ಕಿಚ್ಚ ಸುದೀಪ್.. ಯಾರಿಗೆ ಗೊತ್ತೆ ?

ಕನ್ನಡದ ಸ್ಟಾರ್ ನಟ ನಿರ್ದೇಶಕ ಕಿಚ್ಚ ಸುದೀಪ್. ಅವರಿಗೆ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಸಹ ಬ್ಯುಸಿ. ಆ ...

Widgets Magazine
Widgets Magazine