ತನಗಿರುವ ಕೆಟ್ಟ ಚಟವೊಂದರ ಬಗ್ಗೆ ಹೇಳಿಕೊಂಡ ನಟ ರಣಬೀರ್ ಕಪೂರ್

ಭಾನುವಾರ, 15 ಜುಲೈ 2018 (07:14 IST)

ಮುಂಬೈ : ಕೆಲವರಿಗೆ ಯಾವುದೇ ರೀತಿಯ ಕೆಟ್ಟ ಚಟಗಳಿದ್ದರೆ ಅದನ್ನು ಅವರು ಬಹಿರಂಗವಾಗಿ ಎಲ್ಲೂ ಹೇಳಿಕೊಳ್ಳುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳಂತೂ ಈ ವಿಷಯವನ್ನು ಅಪ್ಪಿತಪ್ಪಿಯೂ ಹೇಳಲು ಇಚ್ಚಿಸುವುದಿಲ್ಲ. ಆದರೆ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ತಮಗಿರುವ ಕೆಟ್ಟ ಚಟವೊಂದರ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


ಹೌದು. ಹೆಲ್ತ್ ಆಂಡ್ ನ್ಯೂಟ್ರಿಶೀಯನ್ ಗೆ ನೀಡಿದ ಸಂದರ್ಶನದಲ್ಲಿ ನಟ ರಣ್‍ಬೀರ್ ಕಪೂರ್ ಅವರು ಈ ವಿಚಾರವನ್ನು ಹೇಳಿದ್ದಾರೆ. ‘ನನಗೆ ಮದ್ಯ ಕುಡಿಯುವ ಚಟ ಇದೆ. ಮದ್ಯ ಸೇವಿಸಿ ನನ್ನ ಕುಟುಂಬದವರ ಮೇಲಾದ ಪರಿಣಾಮವನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಎಚ್ಚರದಿಂದ ಇರುತ್ತೇನೆ. ನಾನು ಶೂಟಿಂಗ್ ಹಾಗೂ ಕೆಲಸದಲ್ಲಿದ್ದಾಗ ಮಾತ್ರ ಮದ್ಯ ಸೇವಿಸಲ್ಲ’ ಎಂದು ಹೇಳಿದರು.


ಹಾಗೇ ‘ನಾನು ಕುಡಿತಕ್ಕೆ ದಾಸನಾಗಿಲ್ಲ. ಆದರೆ ನಾನು ತುಂಬಾ ಮದ್ಯ ಸೇವಿಸುತ್ತೇನೆ. ನಾನು ಕುಡಿಯುವುದನ್ನು ಶುರು ಮಾಡಿದರೆ, ನಿಲ್ಲಿಸುವುದೇ ಇಲ್ಲ. ಬಹುಶಃ ಇದು ನನ್ನ ರಕ್ತದಲ್ಲೇ ಇದೆ ಎಂದು ಅನಿಸುತ್ತದೆ. ನನ್ನ ಕುಟುಂಬದ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಕುಡಿಯುವ ಅಭ್ಯಾಸವಿದೆ’ ಎಂದು ರಣ್‍ಬೀರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ ನಟಿ ಇಲಿಯಾನ

ಮುಂಬೈ : ಬಾಲಿವುಡ್ ನಟಿ ಇಲಿಯಾನ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ...

ಕೇದಾರನಾಥ್ ಚಿತ್ರದಲ್ಲಿ ಸಾರಾ ಅಲಿ ಖಾನ್ ಲುಕ್ ಇಷ್ಟವಾಗದೇ ಕರೀನಾ ಕಪೂರ್ ಮಾಡಿದ್ದೇನು ಗೊತ್ತಾ?

ಮುಂಬೈ : ಕೇದಾರನಾಥ್ ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್ ಅವರ ಲುಕ್ ಅವರ ...

ಹಿನ್ನೆಲೆ ಗಾಯಕಿ ಕೆ. ರಾಣಿ ವಿಧಿವಶ!

ಹೈದರಾಬಾದ್: ಹಿನ್ನೆಲೆಗಾಯಕಿ ಕೆ. ರಾಣಿ (75) ಅವರು ಶುಕ್ರವಾರ ( (ಜು.13) ರಾತ್ರಿ ವಿಧಿವಶರಾಗಿದ್ದಾರೆ. ...

ಪವನ್ ಕಲ್ಯಾಣ್ ಅರೆನಗ್ನ ಸೀನ್ ಗಳಲ್ಲಿನ ನಟನೆಯ ಫೋಟೊವನ್ನು ಪೋಸ್ಟ್ ಮಾಡಿದ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಲ್ಲದೇ ಕಾಸ್ಟಿಂಗ್ ಕೌಚ್ ...