ಬಾಲಿವುಡ್ ಈ ನಟನಿಂದ ರಾಣಿ ಮುಖರ್ಜಿ ಹೃದಯವೇ ಒಡೆದು ಹೋಯಿತಂತೆ!

ಮುಂಬೈ, ಬುಧವಾರ, 11 ಜುಲೈ 2018 (11:13 IST)

ಮುಂಬೈ : ಸಂದರ್ಶನವೊಂದರಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಾಲಿವುಡ್ ನ ಸ್ಟಾರ್ ನಟರೊಬ್ಬರಿಂದ ನನ್ನ ಹೃದಯವೇ ಒಡೆದು ಹೋಯಿತು ಎಂದು  ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಹೇಳಿದ್ದಾರೆ.


ಆ ನಟ ಬೇರೆ ಯಾರು ಅಲ್ಲ. ರಾಣಿ ಮುಖರ್ಜಿ ಅವರ ಜೊತೆ 'ಗುಲಾಮ್' ಸಿನಿಮಾದಲ್ಲಿ ನಟಿಸಿದ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್. ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ವಿಶೇಷ ನೀಡಿದ ನಟಿ ರಾಣಿ ಮುಖರ್ಜಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ.


‘ನಾನು ಚಿಕ್ಕವಳಿದ್ದಾಗಿನಿಂದಲೂ ಅಮೀರ್ ಖಾನ್‍ ರ ದೊಡ್ಡ ಅಭಿಮಾನಿ. ಅಮೀರ್ ಅಭಿನಯದ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರ ನನ್ನ ಮೆಚ್ಚಿನ ಸಿನಿಮಾ. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಜೊತೆಯಾಗಿ 'ಲವ್ ಲವ್ ಲವ್' ಚಿತ್ರದಲ್ಲಿ ನಟಿಸುತ್ತಿದ್ದರು. ಈ ವೇಳೆ ನಾನು ಅಮೀರ್ ಆಟೋಗ್ರಾಫ್ ಪಡೆದುಕೊಳ್ಳಲು ಶೂಟಿಂಗ್ ಸೆಟ್ ಗೆ ಹೋಗಿದ್ದೆ. ಅಲ್ಲಿ ಚಿತ್ರವೊಂದರ ಆಯಕ್ಷನ್ ಸೀನ್ ಶೂಟ್ ನಡೆಯುತ್ತಿತ್ತು. ಜನರ ಗುಂಪಿನ ನಡುವೆ ನಿಂತಿದ್ದ ನಾನು ಆಟೋಗ್ರಾಫ್ ಪಡೆಯಲು ಕಷ್ಟಪಡುತ್ತಿದ್ದೆ. ನನ್ನ ಬುಕ್ ಮೇಲೆ ಡೀಯರ್ ಅಮೀರ್ ಖಾನ್ ಅಂತಾ ಬರೆದಿದ್ದೆ, ಆದ್ರೆ ಇದನ್ನು ಯಾವುದು ಗಮನಿಸದೇ, ಕೈಗೆ ಸಿಕ್ಕ ಬುಕ್‍ ನಲ್ಲಿ ಆಟೋಗ್ರಾಫ್ ಹಾಕಿಕೊಟ್ಟರು. ಈ ವೇಳೆ ನನ್ನನ್ನು ನೋಡದೇ ಅಮೀರ್ ಆಟೋಗ್ರಾಫ್ ಹಾಕಿದ್ದರಿಂದ ಅಂದು ನನ್ನ ಹೃದಯವೇ ಒಡೆದು ಹೋಗಿತ್ತು’ ಎಂದು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ಯಾಕೆ?

ಹೈದರಾಬಾದ್ : ಸಿನಿಮಾರಂಗದಿಂದ ದೂರ ಸರಿದು ರಾಜಕೀಯದಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ನಟ ಪವರ್ ಸ್ಟಾರ್ ...

news

ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿಗೆ ಅವಹೇಳನ ; ನಟ ಸಿದ್ದೀಕಿ, ನಿರ್ಮಾಪಕರ ವಿರುದ್ಧ ದೂರು

ಮುಂಬೈ : ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕ ರಾಜೀವ್ ಕುಮಾರ್ ಸಿನ್ಹಾ ಅವರು ಬಾಲಿವುಡ್ ನಟ ನವಾಝುದ್ದೀನ್ ...

news

ಡಿವೋರ್ಸ್ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿದ ಸ್ಪೋಟಕ ಮಾಹಿತಿ ಏನು?

ಹೈದರಾಬಾದ್ : ಇತ್ತೀಚೆಗೆ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ...

news

ಸಂಗೀತ ನಿರ್ದೇಶಕ ಸಾಧು ಕೋಕಿಲ ಸಿಸಿಬಿ ಪೊಲೀಸರನ್ನು ಭೇಟಿ ಮಾಡಿದ್ಯಾಕೆ?

ಬೆಂಗಳೂರು : ರೌಡಿ ಶೀಟರ್ ಸೈಕಲ್ ರವಿಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ...

Widgets Magazine
Widgets Magazine