ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

ಮುಂಬೈ, ಶನಿವಾರ, 15 ಜುಲೈ 2017 (13:55 IST)

Widgets Magazine

ಮುಂಬೈ:ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ನಡುವಿನ ಪ್ರೇಮಕ್ಕೆ ಮರುಜೀವ ಸಿಕ್ಕಿದೆಯೆ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಈ ಸುದ್ದಿಗಳಿಗೆ ಇನ್ನಷ್ಟು ಪುಷ್ಟಿ ನೀಡುವಂತಹ ಸಂದರ್ಭಕ್ಕೆ ಮುಂಬೈ ನಗರಿ ಸಾಕ್ಷಿಯಾಗಿದೆ.
 
ನಟಿ ಕತ್ರಿನಾ ಅವರ 34ನೇ ಸಮಾರಂಭದಲ್ಲಿ ಬಾಲಿವುಡ್ ಗಣ್ಯಾತಿಗಣ್ಯರು ಪಾಲ್ಗೊಂಡು ಕತ್ರಿನಾಗೆ ಶುಭಕೋರಿದ್ದಾರೆ. ಈ ಸಮಾರಂಭಕ್ಕೆ ನಟ ಸಲ್ಮಾನ್ ಖಾನ್ ಕೂಡಾ  ಹಾಜರಿದ್ದಿದ್ದು ವಿಶೇಷವಾಗಿತ್ತು. ಮಾತ್ರವಲ್ಲ ತನ್ನ ಮಾಜಿ ಪ್ರೇಯಸಿಯ ಜನ್ಮದಿನಕ್ಕೆ ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಸಲ್ಮಾನ್ ಪ್ರೀತಿಯಿಂದ ತಬ್ಬಿ ಸಿಹಿಮುತ್ತಿನ ಉಡುಗೊರೆ ನೀಡಿದ್ದಾರೆ. 
 
ಸಲ್ಮಾನ್ ಅವರ ಈ ರೀತಿಯ ವಿಶ್ ಗೆ ಕತ್ರಿನಾ ಕೂಡಾ ನಯವಾಗಿಯೇ ಸ್ಪಂದಿಸಿ ಮುಗುಳುನಗೆ ಬೀರಿದರು. ಇತ್ತೀಚೆಗಷ್ಟೆ ನಡೆದ ಐಫಾ 2017 ಪ್ರಶಸ್ತಿ ಕಾರ್ಯಕ್ರಮದಲ್ಲಿ ಕತ್ರಿನಾ ಹಾಗೂ ಸಲ್ಮಾನ್ ಖಾನ್  ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಹಾಗಾಗಿ ಈ ತಾರಾ ಜೋಡಿ ನಡುವೆ ಮತ್ತೆ ಪ್ರೇಮಾಂಕುರವಾಗಿದೆಯೇ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟಿಯ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ...

news

ಬಿಕಿನಿಯಲ್ಲಿ ಮೈಮಾಟ ತೋರಿಸಿದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ...

news

ಸ್ಯಾಂಡಲ್ ವುಡ್ ನಟಿಯ ರಹಸ್ಯ ಮದುವೆ

ಹನಿ ಹನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್`ಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಬಾರ್ನಾ ರಹಸ್ಯವಾಗಿ ರಿಜಿಸ್ಟ್ರಾರ್ ...

news

ಟಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಯಾವೆಲ್ಲ ಸೆಲೆಬ್ರೆಟಿಗಳ ಹೆಸರು ಸೇರಿಕೊಂಡಿದೆ ಗೊತ್ತಾ..?

ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ 15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿಮಾಡಿದೆ.

Widgets Magazine