ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸೂಯಿ ಧಾಗಾ..

ಬೆಂಗಳೂರು, ಬುಧವಾರ, 3 ಅಕ್ಟೋಬರ್ 2018 (18:32 IST)

ವರುಣ್ ಧವನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಸೂಯಿ ಧಾಗಾ ಇದುವರೆಗೆ 36.60 ಕೋಟಿ ರೂಪಾಯಿಗಳನ್ನು ಗಳಿಸಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿನ ಗಳಿಕೆ ಇದಾಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಗಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.

ವರುಣ್ ಮತ್ತು ಅನುಷ್ಕಾ ಅಭಿನಯದ ಸೂಯಿ ಧಾಗಾ ಉತ್ತಮ ಆರಂಭಿಕ ವಾರಾಂತ್ಯವನ್ನು ಕಂಡಿದೆ. ಈ ಚಿತ್ರವನ್ನು ಶರತ್ ಕಟಾರಿಯಾ ನಿರ್ದೇಶಿಸಿದ್ದಾರೆ ಮತ್ತು ಯಶ್ ರಾಜ್ ಬ್ಯಾನರ್‌ನ ಅಡಿಯಲ್ಲಿ ಮನೀಶ್ ಶರ್ಮಾ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಘುಬಿರ್ ಯಾದವ್ ಸಹ ನಟಿಸಿದ್ದಾರೆ.
 
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್‌ನಲ್ಲಿ ಚಿತ್ರದ ಬಾಕ್ಸ್ ಆಫೀಸ್‌ ಅಂಕಿ-ಅಂಶಗಳನ್ನು ಪ್ರಕಟಿಸಿದ್ದಾರೆ. '#ಸೂಯಿ ಧಾಗಾ ಅತ್ಯುತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ... ದಿನ 2 + ದಿನ 3 ರ ವ್ಯವಹಾರವು ಉದ್ದೇಶಿತ ಪ್ರೇಕ್ಷಕರು [ಕುಟುಂಬಗಳು] ವ್ಯವಹಾರವನ್ನು ದ್ವಿಗುಣಗೊಳಿಸಲು ಸಹಾಯ ಮಾಡಿರುವುದಕ್ಕೆ ನಿದರ್ಶನವಾಗಿದೆ... ದಿನ 3 ರ ವ್ಯವಹಾರ ದಿನ 1 ರ *ಸುಮಾರು ಎರಡರಷ್ಟಿದೆ*... ಶುಕ್ರ 8.30 ಕೋಟಿ, ಶನಿ 12.25 ಕೋಟಿ, ಭಾನು 16.05 ಕೋಟಿ. ಒಟ್ಟೂ: ರೂ. 36.60 ಕೋಟಿ [2500 ಸ್ಕ್ರೀನ್‌ಗಳು]. ಭಾರತ ವ್ಯವಹಾರ.' ಎಂದು ಬರೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಟಿವಿಯಲ್ಲಿ ‘ಜೈ ಹನುಮಾನ್’! ಆದರೆ ಈ ಬಾರಿ ಯಾವ ಚಾನೆಲ್ ನಲ್ಲಿ ಗೊತ್ತಾ?

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿ ಧಾರವಾಹಿ ಹಿಟ್ ಆದ ಬಳಿಕ ಕನ್ನಡದ ಎಲ್ಲಾ ಚಾನೆಲ್ ಗಳೂ ...

news

ಕಾರ್ ರೇಸ್ ನಲ್ಲಿ ಭಾಗವಹಿಸ್ತಾರಾ ನಟ ದರ್ಶನ್. ಈ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಲು ಕಾರಣವಾಗಿದ್ದು ಈ ವಸ್ತು

ಮೈಸೂರು : ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ಕಾರ್ ರೇಸ್ ನಲ್ಲಿ ಭಾಗವಹಿಸಲು ನಟ ದರ್ಶನ್ ಅವರಿಗೆ ...

news

ಅಭಿಮಾನಿಗಳನ್ನು ಕಾಲಿನಿಂದ ತುಳಿದ ಟಾಲಿವುಡ್ ನಟ ಬಾಲಕೃಷ್ಣ

ಹೈದರಾಬಾದ್ : ಟಾಲಿವುಡ್ ನಟ ಬಾಲಕೃಷ್ಣ ಅವರು ಅಭಿಮಾನಿಗಳನ್ನು ಹೊಡೆದು ಕಾಲಿನಲ್ಲಿ ಒದ್ದಿದ್ದಾರೆ ಎಂಬ ಆರೋಪ ...

news

ಖ್ಯಾತ ನಿರ್ದೇಶಕ ಮಣಿರತ್ನಂ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಕಾರಣವೇನು?

ಚೆನ್ನೈ : ನಟಿ ಸುಹಾಸಿನಿ ಅವರ ಪತಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿವಾಸಕ್ಕೆ ಬಿಗಿ ...

Widgets Magazine