Widgets Magazine
Widgets Magazine

ಸನ್ನಿ ಲಿಯೋನ್ ತಮ್ಮದೇ ಕಾಸ್ಮೆಟಿಕ್ ಬ್ರ್ಯಾಂಡ್ ಸ್ಥಾಪಿಸುತ್ತಿದ್ದಾರಂತೆ..!?

ನಾಗಶ್ರೀ ಭಟ್ 

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (17:14 IST)

Widgets Magazine

ಸನ್ನಿ ಲಿಯೋನ್ ತಮ್ಮ ಸ್ಟಾರ್‌ಸ್ಟ್ರಕ್ ಎನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಶಿಘ್ರದಲ್ಲೇ ಬರಲಿದೆ ಮತ್ತು ಅದು ಗುಣಮಟ್ಟದಲ್ಲಿ ಮತ್ತು ಬಾಳಿಕೆಯಲ್ಲಿ ಉತ್ತಮವಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ.

"ಇದು ನಾನು ಬಹಳ ಸಮಯದಿಂದ ಬಯಸಿರುವುದಾಗಿದೆ. ಸ್ಟಾರ್‌ಸ್ಟ್ರಕ್ ಅನ್ನು ಪ್ರಾರಂಭಿಸಲು ತುಂಬಾ ಪ್ರಯತ್ನ ಪಟ್ಟಿದ್ದೇನೆ, ಕಾಳಜಿ ವಹಿಸಿದ್ದೇನೆ. ಈಗ ಇದು ಮುಗಿಯುವ ಹಂತಕ್ಕೆ ಬಂದಿದೆ ಮತ್ತು ಸದ್ಯದಲ್ಲೇ ಗ್ರಾಹಕರನ್ನು ತಲುಪಲಿದೆ" ಎಂದು ಸನ್ನಿ ಲಿಯೋನ್ ತಮ್ಮ ಸಂತೋಷವನ್ನು ಹಂಚಿಕೊಂಡರು.
 
ಸನ್ನಿ ಲಿಯೋನ್ ನಿಜವಾದ ಹೆಸರು ಕರೆನ್ಜಿತ್ ಕೈರ್ ವೊಹ್ರಾ ಆಗಿದ್ದು ಇವರು ವಿದೇಶದಲ್ಲಿ ವಯಸ್ಕ ಚಲನಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿದ ನಂತರ ಬಾಲಿವುಡ್‌ನಲ್ಲಿ ನಟಿಸಿ ತಮ್ಮ ಮಾದಕ ಸೌಂದರ್ಯದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಸನ್ನಿ ಲಿಯೋನ್ ಬಿಗ್‌ ಬಾಸ್ ಹಿಂದಿನ ಸೀಸನ್‌ನಲ್ಲಿ ಕಾಣಿಸಿಕೊಂಡರು. ಸನ್ನಿ ಲಿಯೋನ್ ಈಗಾಗಲೇ 'ಜಿಸ್ಮ್-2', 'ಏಕ್ ಪಹೆಲಿ ಲೀಲಾ', 'ಕುಚ್ ಕುಚ್ ಲೋಚಾ ಹೈ' ಮತ್ತು 'ಒನ್ ನೈಟ್ ಸ್ಟ್ಯಾಂಡ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ಸನ್ನಿ ನಾನು ಧರಿಸಲು ಮತ್ತು ಬಳಸಲು ಇಷ್ಟಪಡುವ ವಸ್ತುಗಳನ್ನು ತಯಾರಿಸುವ ಲೈನ್ ಅನ್ನು ಆರಿಸಿಕೊಂಡಿದ್ದೇನೆ. ಈ ಬ್ರ್ಯಾಂಡ್ ಯಾವ ಯಾವ ಸೌಂದರ್ಯವರ್ಧಕಗಳನ್ನು ಒಳಗೊಂಡಿರಲಿದೆ ಎನ್ನುವುದು ಮಾರ್ಚ್ 1 ರಂದು ಹೊರಬರುತ್ತದೆ ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರಿಸುತ್ತಾ "ನಾನು ಕ್ಯಾಮರಾ ಮುಂದೆ ಹಲವು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಆದ್ದರಿಂದ ನಾನು ಉತ್ತಮ ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆಬರುವ ಉತ್ಪನ್ನಗಳನ್ನು ಸೃಷ್ಟಿಸುತ್ತೇನೆ" ಎಂದು ಹೇಳಿದರು.
 
"ಮುಖ್ಯಮಹಿಳೆಯರಿಗೆ ಲಿಪ್‌ಸ್ಟಿಕ್‌ಗಳು, ಲಿಪ್ ಲೈನರ್ ಮತ್ತು ಲಿಪ್ ಗ್ಲೊಸ್‌ಗಳನ್ನು ಬಳಸುವಾಗ ಅದು ಅವರ ಪ್ರಪಂಚವಾಗಿರುವ ಕಾರಣ ನನಗೆ ಉತ್ಪನ್ನದ ವಿನ್ಯಾಸ, ಅದರ ಹೊಳಪು ಮತ್ತು ಅದರ ಪ್ರಕಾರ ಬಹಳ ಮುಖ್ಯವಾಗುತ್ತದೆ. ನಾನು ತಯಾರಿಸುವ ಎಲ್ಲಾ ಉತ್ಪನ್ನಗಳು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿದೆ ಮತ್ತು ಯಾವುದೇ ಪ್ರಾಣಿಗಳ ಮೇಲೆ ಪರೀಕ್ಷಿಸಲ್ಪಟ್ಟಿಲ್ಲ. ಸ್ಟಾರ್‌ಸ್ಟ್ರಕ್‌ನ ಯಾವುದೇ ಉತ್ಪನ್ನಗಳನ್ನು ಎಲ್ಲಾ ಮಹಿಳೆಯರೂ ಬಳಸಬಹುದು ಏಕೆಂದರೆ ಎಲ್ಲಾ ಉತ್ಪನ್ನದ ಬಣ್ಣಗಳನ್ನು ನಾನೇ ಆರಿಸಿದ್ದು ಅವು ಯಾವುದೇ ಚರ್ಮದ ಪ್ರಕಾರ ಮತ್ತು ಬಣ್ಣಕ್ಕೆ ಚೆನ್ನಾಗಿ ಹೊಂದುತ್ತದೆ" ಎಂದು ತಮ್ಮ ಉತ್ಪನ್ನಗಳ ಕುರಿತು ವಿವರಿಸಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸನ್ನಿ ಲಿಯೋನ್ ಕಾಸ್ಮೆಟಿಕ್ ಬ್ರ್ಯಾಂಡ್ ಕರೆನ್ಜಿತ್ ಕೈರ್ ವೊಹ್ರಾ ಬಾಲಿವುಡ್‌ Bollywod Cosemetic Brand Sunny Leone Karenjit Kair Vohra

Widgets Magazine

ಸ್ಯಾಂಡಲ್ ವುಡ್

news

ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್: ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್

ಮಲೆಯಾಳಂ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಚಂದದ ಹುಡುಗಿ ...

news

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!

ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ...

news

ಮದುವೆ ಆನಿವರ್ಸರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟವರಾರು ಗೊತ್ತಾ?!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ನಿನ್ನೆ ಸ್ಪೆಷಲ್ ದಿನ. ಇಬ್ಬರೂ ವೈವಾಹಿಕ ಜೀವನಕ್ಕೆ ...

news

ನಟಿ ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತಾ...?

ಮುಂಬೈ: ನಟಿ ಪ್ರಿಯಾಂಕ ಚೋಪ್ರಾ ಮದುವೆ, ಮಕ್ಕಳ ಕನಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ...

Widgets Magazine Widgets Magazine Widgets Magazine