Widgets Magazine

ಹಾಟ್ ತಾರೆ ಸನ್ನಿ ಲಿಯೋನ್ ಗೆ ಧೋನಿ ಎಂದರೆ ಯಾಕಿಷ್ಟ ಗೊತ್ತಾ?

ಮುಂಬೈ| Krishnaveni K| Last Modified ಶುಕ್ರವಾರ, 15 ಮಾರ್ಚ್ 2019 (09:13 IST)
ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಗೆ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಧೋನಿ ಎಂದರೆ ಭಾರೀ ಇಷ್ಟವಂತೆ. ಅದಕ್ಕೆ ಕಾರಣವನ್ನೂ ಅವರು ಹೇಳಿಕೊಂಡಿದ್ದಾರೆ.

 
ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್ ಪ್ರಸಕ್ತಿ ಕ್ರಿಕೆಟಿಗರ ಪೈಕಿ ನಿಮಗೆ ಯಾರು ಇಷ್ಟ ಎಂದಿದ್ದಕ್ಕೆ ಧೋನಿ ಎಂದಿದ್ದಾರೆ. ಅದಕ್ಕೆ ಕಾರಣ ಧೋನಿ ಫ್ಯಾಮಿಲಿ ಮೆನ್ ಎಂದಿದ್ದಾರೆ.
 
‘ಧೋನಿ ನನಗಿಷ್ಟ. ಅವರ ಮಗಳು ತುಂಬಾ ಮುದ್ದಾಗಿದ್ದಾಳಲ್ವಾ? ಜೀವಾ ಜತೆ ಧೋನಿಯ ಹಲವು ಫೋಟೋಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಅವರು ಮುದ್ದಾಗಿದ್ದಾರೆ. ಅವರು ಕ್ರಿಕೆಟಿಗ ಜತೆಗೆ ಉತ್ತಮ ಫ್ಯಾಮಿಲಿ ಮೆನ್ ಕೂಡಾ. ಅದಕ್ಕೇ ಅವರೆಂದರೆ ನನಗಿಷ್ಟ’ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     
ಇದರಲ್ಲಿ ಇನ್ನಷ್ಟು ಓದಿ :