ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಸನ್ನಿ ಲಿಯೋನ್

ಸೋಮವಾರ, 28 ಮೇ 2018 (06:55 IST)

ಮುಂಬೈ : ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ಭಾವುಕರಾದ ಫೋಟೋವೊಂದನ್ನು ಹಾಕಿ ತಮ್ಮ ದುಖಃವನ್ನು ಹೇಳಿಕೊಂಡಿದ್ದಾರೆ.


‘ನನ್ನ ಹೃದಯ ಈ ರಾತ್ರಿ ಸಾವಿರ ಬಾರಿ ಛಿದ್ರವಾಗಿದೆ. ಈ ರಾತ್ರಿ ಬಹುಶಃ ನಾನು ಸಾವಿರ ಬಾರಿ ಕಣ್ಣೀರಿಟ್ಟಿದ್ದೇನೆ. ಈ ರಾತ್ರಿ ನಾನು ಅಪೇಕ್ಷಿಸುತ್ತಿದ್ದೇನೆ, ಹಾತೊರೆಯುತ್ತಿದ್ದೇನೆ, ಕಾಣೆಯಾಗಿದ್ದೇನೆ, ವಿಷಾದಿಸುತ್ತಿದ್ದೇನೆ ಹಾಗೂ ನಿನ್ನನ್ನು ನನ್ನ ಜೊತೆ ಇರಿಸುವುದ್ದಾಗಿ ಬಯಸುತ್ತಿದ್ದೇನೆ. ಆದರೆ ಇದು ನನ್ನ ಜೀವನದಲ್ಲಿ ಹಿಂತಿರುಗಿ ಬರುವುದಿಲ್ಲ. ಆದರೆ ನನ್ನ ಮನಸ್ಸಿನಲ್ಲಿ ಸದಾ ಕಾಡುತ್ತೆ ಕರಣ್‍ಜಿತ್ ಕೌರ್ ವೊಹ್ರಾ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ಆದರೆ ನಟಿ  ಸನ್ನಿ ಲಿಯೋನ್ ಅವರ ಕಣ್ಣೀರಿಗೆ ಕಾರಣವೆನೆಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಸನ್ನಿ ಲಿಯೋನ್ ತನ್ನ ಹಿಂದಿನ ಜೀವನವನ್ನು ನೆನೆದುಕೊಂಡು ಕಣ್ಣೀರು ಹಾಕಿದ್ದಾರೆ ಎಂದು ಅಭಿಮಾನಿಗಳು ಪತ್ರಿಕ್ರಿಯಿಸಿದ್ದಾರೆ. ಯಾಕೆಂದರೆ ಕರಣ್‍ಜಿತ್ ಕೌರ್ ವೊಹ್ರಾ ಬೇರಾರೂ ಅಲ್ಲ, ಅದು ಸನ್ನಿ ಲಿಯೋನ್ ಮೂಲ ಹೆಸರು. ಬಣ್ಣದ ಲೋಕಕ್ಕೆ ಜಿಗಿದ್ಮೇಲೆ ಸನ್ನಿ ಲಿಯೋನ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ!

ಮುಂಬೈ : ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಜನಪ್ರಿಯ ಗಳಿಸಿದ ಬಾಲಿವುಡ್ ನ ಹಿರಿಯ ನಟಿ ಗೀತಾ ...

ದೀಪಿಕಾ ರಣವೀರ್ ರವರನ್ನು ಇಷ್ಟಪಟ್ಟಿದ್ದು ಅವರ ಈ ಗುಣಗಳನ್ನು ನೋಡಿಯಂತೆ

ಮುಂಬೈ : ಗಂಡು ಹೆಣ್ಣ ಒಬ್ಬರನೊಬ್ಬರು ಇಷ್ಟಪಡಲು ಹಲವು ಕಾರಣಗಳಿರುತ್ತವೆ. ಅದೇರೀತಿ ಬಾಲಿವುಡ್ ನ ಪ್ರಣಯ ...

ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕನ್ನಹಾಕಿದ ಕಳ್ಳರು

ಬೆಂಗಳೂರು : ಇತ್ತೀಚೆಗೆ ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕಳ್ಳರು ಕನ್ನ ಹಾಕಿರೋ ಘಟನೆ ...

ರಾಕಿಂಗ್ ಸ್ಟಾರ್ ಯಶ್ ಗೆ ಖಡಕ್ ಆಗಿ ವಾರ್ನ್ ಮಾಡಿದ ರೆಬಲ್ ಸ್ಟಾರ್ ಅಂಬರೀಶ್

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಇದೀಗ ನಟ ರಾಕಿಂಗ್ ಸ್ಟಾರ್ ಯಶ್ ...