ನಟಿ ಶ್ರೀದೇವಿ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮುಂಬೈ, ಭಾನುವಾರ, 13 ಮೇ 2018 (06:48 IST)

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸುನೀಲ್ ಸಿಂಗ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.


ಫೆಬ್ರವರಿ 24 ರಂದು ದುಬೈನ ಹೋಟೆಲ್ ನಲ್ಲಿ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಅವರ ಸಾವು ಅನುಮಾನಾಸ್ಪದವಾಗಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಕೋರಿ ನಿರ್ಮಾಪಕ ಸುನೀಲ್ ಸಿಂಗ್ ಅವರು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಅರ್ಜಿ ವಜಾಗೊಂಡಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ ಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರದಂದು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲವೆಂದು ಹೇಳಿದರಲ್ಲದೇ, ತಮ್ಮ ಆರೋಪ ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸುನೀಲ್ ಸಿಂಗ್ ವಿಫಲರಾಗಿದ್ದಾರೆಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸದ್ದಿಲ್ಲದೇ ಮದುವೆ ಮಾಡಿಕೊಂಡ ಖ್ಯಾತ ಗಾಯಕ ಹಿಮೇಶ್ ರೇಶಮಿಯಾ

ಮುಂಬೈ : ಬಾಲಿವುಡ್ ನ ಖ್ಯಾತ ಗಾಯಕ, ನಟ ಹಿಮೇಶ್ ರೇಶಮಿಯಾ ಅವರು ಸದ್ದಿಲ್ಲದೇ ಮದುವೆ ಮಾಡಿಕೊಂಡಿದ್ದಾರಂತೆ.

news

ಪ್ರಭುದೇವ್ ರನ್ನು ಮದುವೆಯಾಗುತ್ತಾರಾ ನಟಿ ನಿಕಿಶಾ ಪಟೇಲ್?

ಹೈದರಾಬಾದ್ : ಪವನ್ ಕಲ್ಯಾಣ್ ಅವರ ‘ಕೊಮ್ರಾಮ್ ಪುಲಿ’ ಚಿತ್ರದಲ್ಲಿ ಅಭಿನಯಿಸಿದ ನಟಿ ನಿಕಿಶಾ ಪಟೇಲ್ ಅವರು ...

news

ನಟಿ ಪಾರ್ವತಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ನಟಿ

ಬೆಂಗಳೂರು : ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮಲಯಾಳಂನ ನಟಿ ...

news

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿನಿಮಾ ತಾರೆಯರು ಕೂಡ ...

Widgets Magazine