ನಟಿ ಶ್ರೀರೆಡ್ಡಿಯ ಬೆಂಬಲಕ್ಕೆ ನಿಂತ ಮತ್ತೊಬ್ಬ ತೆಲುಗು ನಟಿ ಮಾಧವಿ ಲತಾ ಹೇಳಿದಾದರೂ ಏನು ಗೊತ್ತಾ..?

ಹೈದರಾಬಾದ್, ಶನಿವಾರ, 14 ಏಪ್ರಿಲ್ 2018 (12:55 IST)

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ತೆಲುಗು ನಟಿ ಶ್ರೀರೆಡ್ಡಿ ಅವರು ಅರೆಬೆತ್ತಲೆಯಾಗಿ ಫಿಲ್ಮಂ ಚೇಂಬರ್ ಮುಂದೆ ಪ್ರತಿಭಟನೆ ಮಾಡಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ತೆಲುಗಿನ ಮತ್ತೊಬ್ಬ ನಟಿ ಈ ರೀತಿಯಾಗಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ನಟಿ ಶ್ರೀರೆಡ್ಡಿ ಅವರ ಪ್ರತಿಭಟನೆಯ ಬಗ್ಗೆ ಕೆಲವರು ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ನಟಿ ಶ್ರೀರೆಡ್ಡಿಯ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ತೆಲುಗು ಮತ್ತೊಬ್ಬ ನಟಿ ಮಾಧವಿ ಲತಾ ಅವರು ಈ ಕುರಿತು ತಮ್ಮ ಫೇಸ್ ಬುಕ್ ಹಾಗು ಟ್ವಿಟ್ಟರ್ ಮೂಲಕ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ನಾವೆಲ್ಲ ನಮಗಾಗಿರುವ ದೌರ್ಜನ್ಯದ ವಿರುದ್ದ ನ್ಯಾಯವಾದ ನೆಲೆಗಟ್ಟಿನಲ್ಲಿ ಹೋರಾಡುತ್ತಿದ್ದೇವೆ ಇದನ್ನೇ ನೀವು ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ಎಂದರೆ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ ಹಾಗೆಯೇ ನಮ್ಮ ಸ್ಥಾನದಲ್ಲಿ ನೀವಿದ್ದಿದ್ದರೆ ನಿಮಗೆ ಅರ್ಥವಾಗುತ್ತಿತ್ತು. ಏನೇ ಇರಲಿ ನಾವು ಈ ಹೋರಾಟವನ್ನು ಕೈ ಬಿಡುವ ಮಾತೇ ಇಲ್ಲ, ಒಂದು ವೇಳೆ ನಮಗೆ ನ್ಯಾಯ ಸಿಗದೇ ಹೋದಲ್ಲಿ ಖಂಡಿತವಾಗಿಯೂ ಬಹಿರಂಗವಾಗಿ ನಟಿ ಶ್ರೀರೆಡ್ಡಿಯವರ ಹಾಗೆಯೇ ನಾನು ಸಹ ಬೆತ್ತಲೆ ಹೋರಾಟ ಮಾಡುತ್ತೇನೆ ಎಂದು ಮಾಧವಿ ಲತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  
ಹೈದರಾಬಾದ್ ಫಿಲ್ಮಂ ಚೇಂಬರ್ ಶ್ರೀರೆಡ್ಡಿ ಮಾಧವಿ ಲತಾ ಫೇಸ್ ಬುಕ್ ಟ್ವಿಟ್ಟರ್ Hydrabad Srireddi Tweeter Madhavi Latha Face Book Film Chamber

ಸ್ಯಾಂಡಲ್ ವುಡ್

news

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಮಿಲ್ಕಿ ಬ್ಯೂಟಿ ತಮನ್ನಾ

ಹೈದರಾಬಾದ್ : ಸಿನಿಮಾರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ...

news

ನಟಿ ಶ್ರೀರೆಡ್ಡಿ ಅರೆಬೆತ್ತಲೆ ಪ್ರತಿಭಟನೆಗೆ ಕಂಡು ಸೆಲ್ಯೂಟ್ ಹೊಡೆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ತೆಲುಗು ನಟಿ ಶ್ರೀರೆಡ್ಡಿ ಮಾಡಿರುವ ...

news

ನಟ ಅರ್ಜುನ್ ಕಪೂರ್ ವೆಬ್ ಸೈಟ್ ಒಂದರ ಮೇಲೆ ಕೋಪಗೊಳ್ಳಲು ಕಾರಣವೇನು…?

ಮುಂಬೈ : ನಟಿ ಶ್ರೀದೇವಿ ಮಗಳು ಜಾಹ್ನವಿ ಧರಿಸಿದ್ದ ಡ್ರೆಸ್ ಬಗ್ಗೆ ಕೆಟ್ಟದಾಗಿ ಬರೆದ ವೆಬ್ ಸೈಟ್ ಒಂದರ ...

news

ನಟ ಅಕ್ಷಯ ಕುಮಾರ್ ಗೆ ಓಪನ್ ಚಾಲೆಂಜ್ ಮಾಡಿದ ನಟಿ ಕರೀನಾ ಕಪೂರ್!

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ತಮ್ಮ ಮಗ ತೈಮೂರ್ ನ ಕುರಿತಾಗಿ ನಟ ಅಕ್ಷಯ ಕುಮಾರ್ ಅವರಿಗೆ ...

Widgets Magazine