ಕಾಯಿಲೆಯಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್ ಗೆ ಸಹಾಯ ಮಾಡಿದ್ದಾರಂತೆ ಈ ನಟ

ಮುಂಬೈ, ಸೋಮವಾರ, 25 ಜೂನ್ 2018 (12:10 IST)

ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ನ್ಯೂರೋಎಂಡೋಕ್ರೈನ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಈಗಾಗಲೇ ಲಂಡನ್ ಗೆ ಕೂಡ ತೆರಳಿದ್ದಾರೆ. ಇಂತಹ  ನೋವಿನ ಪರಿಸ್ಥಿತಿಯಲ್ಲಿರುವ ಇರ್ಫಾನ್ ಖಾನ್ ಅವರಿಗೆ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರು  ಸಹಾಯ ಮಾಡಿದ್ದಾರಂತೆ.


ನಟ ಇರ್ಫಾನ್ ಖಾನ್ ಅವರಿಗೆ ತುಂಬಾ ಹತ್ತಿರವಾಗಿರುವವರೆಂದರೆ ಅದು ನಟ ಶಾರುಕ್ ಖಾನ್. ಅವರನ್ನು ಲಂಡನ್ ಗೆ ಹೋಗುವ ಮೊದಲು ಇರ್ಫಾನ್ ಖಾನ್ ಅವರು ಮನೆಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ಶಾರುಕ್ ಲಂಡನ್ ನಲ್ಲಿರುವ ತಮ್ಮ ಮನೆ ಕೀ ಯನ್ನು ಇರ್ಫಾನ್ ಅವರಿಗೆ ನೀಡಿದ್ದರು. ಇರ್ಫಾನ್ ಅವರು ನಿರಾಕರಿಸಿದ್ರೂ ಕೂಡ ಶಾರುಕ್ಖಾನ್ ಅವರು  ಒತ್ತಾಯ ಮಾಡಿ ಕೀ ಕೊಟ್ಟಿದ್ದರು ಎನ್ನಲಾಗಿದೆ. ಲಂಡನ್ ನಲ್ಲಿರುವ ನನ್ನ ಮನೆಯಲ್ಲಿ ಇರ್ಫಾನ್ ಕುಟುಂಬ ವಾಸವಾಗ್ಲಿ ಎನ್ನುವ ಕಾರಣಕ್ಕೆ ಶಾರುಕ್ ಖಾನ್ ಹೀಗೆ ಮಾಡಿದ್ದರಂತೆ. ಈ ಎಲ್ಲ ಸಂಗತಿಯನ್ನು ಸ್ವತಃ ಇರ್ಫಾನ್ ಖಾನ್ ಅವರೇ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಿರ್ದೇಶಕ ದಯಾಳ್ ಲಹರಿ ಸಂಸ್ಥೆ ವಿರುದ್ಧ ದೂರು ನೀಡಿದ್ಯಾಕೆ?

ಬೆಂಗಳೂರು : ಆ ಕರಾಳ ರಾತ್ರಿ ಸಿನಿಮಾದ ಹಾಡೊಂದರ ಕುರಿತಾಗಿ ನಿರ್ದೇಶಕ ದಯಾಳ್ ಹಾಗೂ ಲಹರಿ ಸಂಸ್ಥೆ ಮಧ್ಯೆ ...

news

ನಟಿ ವಿದ್ಯಾಬಾಲನ್ ಗರ್ಭಿಣಿಯಂತೆ ನಟಿಸುತ್ತಿದಿದ್ದು ಯಾಕೆ ಗೊತ್ತಾ…?

ಮುಂಬೈ : ಉತ್ತಮ ನಟಿ ಎಂದು ಹೆಸರು ಮಾಡಿರುವ ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಹಲವು ಪ್ರಶಸ್ತಿಗಳನ್ನು ...

news

ಸಂಜಯ್ ದತ್ ಜೊತೆಗೆ ರಣಬೀರ್ ಕಪೂರ್ ಕ್ಲೋಸ್ ಆಗಿರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ ‘ಸಂಜು’ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ...

news

ಬೋನಿ ಕಪೂರ್ ಗೆ ಸಲ್ಮಾನ್ ಖಾನ್ ಕಾಲ್ ಶೀಟ್ ನೀಡದೇ ಇರಲು ಇವರು ಕಾರಣವಂತೆ

ಮುಂಬೈ : ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರು ತಾವು ತಯಾರಿಸುತ್ತಿರುವ ಸಿನಿಮಾಗಳಿಗಾಗಿ ನಟ ...

Widgets Magazine