Widgets Magazine

ಶಾರುಖ್ ಖಾನ್ ಆಫರ್ ಇದ್ದರೂ ಹಾಲಿವುಡ್ ನಲ್ಲಿ ನಟಿಸದಿರುವುದಕ್ಕೆ ಇದೇ ಮುಖ್ಯ ಕಾರಣವಂತೆ

ಮುಂಬೈ| pavithra| Last Modified ಗುರುವಾರ, 30 ಆಗಸ್ಟ್ 2018 (11:05 IST)
ಮುಂಬೈ : ಹಾಲಿವುಡ್ ನ ಸಿನಿಮಾಗಳಲ್ಲಿ ನಟಿಸಲು ನಟ ನಟಿಯರು ತುದಿಗಾಲಿನಲ್ಲಿ ನಿಂತಿರುವಾಗ ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರು ಮಾತ್ರ ಅವಕಾಶವಿದ್ದರೂ ಕೂಡ
ಹಾಲಿವುಡ್ ಗೆ ಹಾರಲಿಲ್ಲ.


ಇದಕ್ಕೆ ಕಾರಣವೆನಿರಬಹುದು ಎಂಬ ಹಲವರಲ್ಲಿರಬಹುದು. ಇದಕ್ಕೆ ಉತ್ತರ ಇದೀಗ ಶಾರುಖ್ ಅವರೇ ನೀಡಿದ್ದಾರೆ. “ನಟಿ ಪ್ರಿಯಾಂಕಾ ಚೋಪ್ರಾ, ನವಾಜುದ್ದೀನ್ ಸಿದ್ಧಿಕಿ, ಇರ್ಫಾನ್ ಖಾನ್ ಸೇರಿದಂತೆ ಸಾಕಷ್ಟು ತಾರೆಯರು ಹಾಲಿವುಡ್​ನಲ್ಲಿ ಮಿಂಚಿದ್ದಾರೆ. ಅದೃಷ್ಟದ ಪರೀಕ್ಷೆ ಅವರ ಕೈ ಹಿಡಿದಿದೆ. ಆದ್ರೆ, ನಾನು ಮಾತ್ರ ಬಾಲಿವುಡ್​ನಲ್ಲೇ ಉಳಿದಿರುವೆ. ಇದುವರೆಗೂ ಯಾವುದೇ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿಲ್ಲ. ಅದಕ್ಕೆ ಕಾರಣ ಇಂಗ್ಲಿಷ್. ನನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬರುವುದಿಲ್ಲ. ಹಾಗಾಗಿ ನಾನು ಇಲ್ಲಿಯೇ ಉಳಿದಿದ್ದೇನೆ “ ಎಂದಿದ್ದಾರೆ.


ಅಲ್ಲದೆ “ಬಾಲಿವುಡ್ ಸಿನಿಮಾಗಳನ್ನು ಹಾಲಿವುಡ್​ನಲ್ಲಿ ಪರಿಚಯಿಸಬೇಕು ಎನ್ನುವುದು ನನ್ನ ಆಸೆ ಆಗಿದೆ. ಭಾರತೀಯ ನಟ-ನಟಿ ಯಾವತ್ತೂ ಹಾಲಿವುಡ್​ನಲ್ಲಿ ನಟಿಸಬೇಕು ಎಂದು ಅಂದುಕೊಂಡುರುವುದಿಲ್ಲ. ಇಲ್ಲಿರುವ ನಮ್ಮ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು” ಎಂದು ಹೇಳುವುದರ ಮೂಲಕ ಅವರು ಈಗಾಗಲೇ ಹಾಲಿವುಡ್​ಗೆ ಹಾರಿದವರಿಗೆ
ಟಾಂಗ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :