ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ಶೇಖರ್ ಕಪೂರ್ ಬೇಸರ ವ್ಯಕ್ತಪಡಿಸಿರುವುದಾದರೂ ಯಾಕೆ…?

ಮುಂಬೈ, ಸೋಮವಾರ, 16 ಏಪ್ರಿಲ್ 2018 (06:38 IST)

ಮುಂಬೈ : 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದರ ಬಗ್ಗೆ ಇದೀಗ ನಿರ್ದೇಶಕ ಮತ್ತು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾವೆಲ್ಲರೂ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಮರಣ ಹೊಂದಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವ ತೀರ್ಮಾನ ಸೂಕ್ತವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸುತ್ತಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು’ ಎಂದು ಶೇಖರ್ ಕಪೂರ್ ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರೆಡಿಯೋ ಜಾಕಿ ರಾಪಿಡ್ ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಯಾಕೆ…?

ಬೆಂಗಳೂರು : ರೆಡಿಯೋ ಜಾಕಿ ರಾಪಿಡ್ ರಶ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ತನಗೆ ಅತ್ಯಾಚಾರದ ಬೆದರಿಕೆ ...

news

ಬಾಲಿವುಡ್ ನ ‘ರಾಝಿ’ ಚಿತ್ರದ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ನಟಿಯರು ಹೇಳಿದ್ದೇನು…?

ಬೆಂಗಳೂರು : ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದ ‘ರಾಝಿ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ...

news

ನಟಿ ಪ್ರಿಯಾಂಕ ಚೋಪ್ರಾರವರ ರಿಯಲ್ ಚಾಂಪಿಯನ್ ಯಾರು ಗೊತ್ತಾ…?

ಮುಂಬೈ : 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಅವರಿಗೆ ...

news

ಈ ಬಾರಿ ಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ಇಳಿಯುತ್ತಾರಾ ನಟ ಶಿವರಾಜ ಕುಮಾರ್…?

ಹಾಸನ : ಈ ಬಾರಿಯ ಚುನಾವಣೆಯಲ್ಲಿ ಸಿನಿಮಾ ತಾರೆಯರು ಕೂಡ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರಕ್ಕೆ ಇಳಿದಿರುವ ...

Widgets Magazine