ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಮುಂಬೈ, ಗುರುವಾರ, 11 ಅಕ್ಟೋಬರ್ 2018 (13:37 IST)

ಮುಂಬೈ : ಇಂದು (ಅ.11) ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು 76 ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟನಿಗೆ ಬಾಲಿವುಡ್ ನ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಶುಭಾಶಯವನ್ನು ತಿಳಿಸಿದ್ದಾರೆ.


ಆದರೆ ಇಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂಬುದಾಗಿ ಬಿಗ್ ಬಿ ತಿಳಿಸಿದ್ದಾರೆ. ಕಾರಣ ಇತ್ತೀಚೆಗಷ್ಟೇ ಮಗಳು ಶ್ವೇತಾ ನಂದ ಅವರ ಮಾವ ರಾಜನ್ ನಂದ ತೀರಿಕೊಂಡಿದ್ದರು. ಆ ದುಃಖದಿಂದ ಕುಟುಂಬ ಸದಸ್ಯರು ಇನ್ನೂ ಹೊರಬಾರದ ಕಾರಣ ತಮ್ಮ ಹುಟ್ಟುಹಬ್ಬವನ್ನು ಆಚರಿಸದೆ ಇರಲು ನಿರ್ಧರಿಸಿದ್ದಾರೆ.


1969ರಲ್ಲಿ 'ಭವ ಶೋಮ್' ಚಿತ್ರದ ಕಲಾವಿದನಿಗೆ ತಮ್ಮ ಧ್ವನಿ ನೀಡುವ ಮೂಲಕ ತಮ್ಮ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಬಿಗ್ ಬಿ ನಂತರ 'ಸೆವೆನ್ ಹಿಂದೂಸ್ಥಾನಿ'ಯಲ್ಲಿ ಮೊದಲ ಬಾರಿಗೆ ನಟಿಸುವುದರ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚಿಗೆ ಪಡೆದ ಈ ನಟ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಸದ್ಯಕ್ಕೆ ಅವರು  'ಥಗ್ಸ್ ಆಫ್ ಹಿಂದುಸ್ತಾನ್', 'ಬ್ರಹ್ಮಾಸ್ತ್ರ', 'ಸೈರಾ ನರಸಿಂಹ ರೆಡ್ಡಿ', 'ಬದ್ಲಾ' ಮುಂತಾದ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ. 
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತನುಶ್ರೀ ಬೆಂಬಲಕ್ಕೆ ನಿಂತ ಮಹಿಳಾ ಆಯೋಗ; ನಾನಾಪಾಟೇಕರ್ ಗೆ ನೋಟಿಸ್ ಜಾರಿ

ಮುಂಬೈ : ಇತ್ತೀಚೆಗೆ ನಟ ನಾನಾ ಪಾಟೀಕರ್ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ ...

news

ಮದಕರಿ ಚಿತ್ರಗಳ ವಿವಾದದ ಬಗ್ಗೆ ಸುದೀಪ್ ಹೇಳಿದ್ದೇನು?

ಬೆಂಗಳೂರು : ದರ್ಶನ್ ನಟಿಸಲಿರುವ ‘ಗಂಡುಗಲಿ ಮದಕರಿ ನಾಯಕ’ ಹಾಗೂ ಸುದೀಪ್ ನಟಿಸಲಿರುವ ‘ವೀರ ಮದಕರಿ’ ...

news

ಮಲ್ಟಿಪ್ಲೆಕ್ಸ್ ಗಳ ಮೇಲೆ ಕಿಡಿಕಾರಿದ ನಿರ್ದೇಶಕ ಪ್ರೇಮ್

ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ‘ದಿ ವಿಲನ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ...

news

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ

ಬೆಂಗಳೂರು : ಇತ್ತೀಚೆಗೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ...

Widgets Magazine