Widgets Magazine

ಅಮೀರ್ ಖಾನ್ ‘ಮಹಾಭಾರತ’ ಚಿತ್ರದಲ್ಲಿ ನಟಿಸಲಿದ್ದಾರಂತೆ ಟಾಲಿವುಡ್ ನ ಸೂಪರ್ ಸ್ಟಾರ್

ಮುಂಬೈ| pavithra| Last Modified ಶನಿವಾರ, 1 ಸೆಪ್ಟಂಬರ್ 2018 (14:03 IST)
ಮುಂಬೈ : ಬಾಲಿವುಡ್ ನಟ
ಅಮೀರ್ ಖಾನ್ ಅವರ ಮಹಾಭಾರತ ಚಿತ್ರಕ್ಕೆ ಟಾಲಿವುಡ್ ಸೂಪರ್ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಗೆ ಬಹುಮುಖ್ಯ ಪಾತ್ರ ನೀಡಲು ಅಮೀರ್ ಖಾನ್ ಮುಂದಾಗಿದ್ದಾರಂತೆ.ನಟ ಅಮೀರ್ ಖಾನ್ ಅವರು ಕೋಟಿ ರೂಪಾಯಿ ಬಜೆಟ್ ನಲ್ಲಿ ಮಹಾಭಾರತಕ್ಕೆ ಕೈ ಹಾಕ್ತಿದ್ದಾರೆ. ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅಮೀರ್ ಖಾನ್ ಅವರಿಗೆ
ಬಾಹುಬಲಿ ಮೂಲಕ ವಿಶ್ವದ ಜನರ ಗಮನ ಸೆಳೆದ ಪ್ರಭಾಸ್ ನಮ್ಮ ಚಿತ್ರದಲ್ಲಿರಲಿ ಎಂಬುದು ಅವರ ಬಯಕೆಯಂತೆ


ಆದ್ದರಿಂದ ಈಗಾಗಲೇ ಚಿತ್ರದ ಕೆಲಸ ಶುರು ಮಾಡಿರುವ ಅಮೀರ್ ಖಾನ್ ಪ್ರಭಾಸ್ ಅವರಿಗೆ ಆಫರ್ ನೀಡಿದ್ದಾರಂತೆ. ಈ ಚಿತ್ರದಲ್ಲಿ ಅಮೀರ್ ಖಾನ್ , ಅರ್ಜುನನ ಪಾತ್ರದಲ್ಲಿ ಪ್ರಭಾಸ್ ನೀಡಲು ನಿರ್ಧರಿಸಿದ್ದಾರಂತೆ. ಒಂದು ವೇಳೆ ಪ್ರಭಾಸ್ ಅರ್ಜುನನ ಪಾತ್ರಕ್ಕೆ ಸೈ ಎಂದ್ರೆ ಕೃಷ್ಣನ ಪಾತ್ರದಲ್ಲಿ ಅಮೀರ್ ಮಿಂಚಲಿದ್ದಾರಂತೆ. ದ್ರೌಪದಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬುವ ಸಾಧ್ಯತೆ ಇದೆ ಎನ್ನಲಾಗಿದೆ.


ಮಹಾಭಾರತ್ ಚಿತ್ರಕ್ಕೆ ಮುಕೇಶ್ ಅಂಬಾನಿ ಹಣ ನೀಡ್ತಿದ್ದಾರೆ. ಚಿತ್ರ ಮೂರು ಭಾಗವಾಗಿ ಮೂಡಿ ಬರಲಿರುವ ಕಾರಣ ಚಿತ್ರ ರೆಡಿಯಾಗಲು 10-15 ವರ್ಷ ಬೇಕೆಂದು ಅಂದಾಜಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :