ಕರೀನಾಗೆ ಬಿಕನಿ ಹಾಕಲು ಬಿಟ್ಟ ಸೈಫ್ ನೀನು ಎಂತಹ ಗಂಡಸೋ: ಟ್ರೋಲ್

ಬೆಂಗಳೂರು, ಬುಧವಾರ, 13 ಮಾರ್ಚ್ 2019 (20:53 IST)

ಬಾಲಿವುಡ್ ನಟಿ ಕರೀನಾ ಕಪೂರ್ ಬಿಕನಿ ಹಾಕಿದ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಪ್ರೇಕ್ಷಕರು ಟ್ರೋ ಮಾಡಲು ಆರಂಭಿಸಿದ್ದು ಟ್ರೋಲ್ ಮಾಡಿದವರಿಗೆ ಕರೀನಾ ಸಖತ್ತಾಗಿ ತಿರುಗೇಟು ನೀಡಿದ್ದಾಳೆ.
ಸೈಫ್ ಅಲಿ ಖಾನ್ ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನ ಪತ್ನಿ ಬಿಕನಿ ಹಾಕಿ ತಿರುಗುತ್ತಿದ್ದರೆ ನೀನು ನೋಡಿ ಮಜಾ ಮಾಡುತ್ತಿದ್ದೀಯಾ ಎನ್ನುವ ಟ್ರೋಲ್‌ಗೆ ಕರೀನಾ ಬರೋಬ್ಬರಿ ತಿರುಗೇಟು ನೀಡಿದ್ದಾಳೆ. ನನಗೆ ಇಷ್ಟವಾದ ಡ್ರೆಸ್ ಹಾಕುತ್ತೇನೆ. ನಾನು ಬಿಕನಿ ಹಾಕುವುದನ್ನು ತಡೆಯಲು ಸೈಫ್ ಯಾರು? ಸೈಫ್ ಮತ್ತು ನನ್ನ ಸಂಬಂಧ ಆಳವಾಗಿದೆ ಇಂತಹ ವಿಚಾರಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ನಾನು ಬಿಕನಿ ಹಾಕುತ್ತೇನೆ ಎಂದರೆ ಅದರಲ್ಲಿ ಕಾರಣವಿರುತ್ತದೆ ಎಂದು ಗುಡುಗಿದ್ದಾಳೆ.
ಮತ್ತೊಬ್ಬರು ಟ್ರೋಲ್ ಮಾಡಿ ನೀನು ಒಬ್ಬ ತಾಯಿಯಾಗಿ ಮಗು ತೈಮೂರ್‌ನನ್ನು ಕೂಡಾ ಎತ್ತಿಕೊಳ್ಳುವುದಿಲ್ಲ ಎನ್ನುವುದಕ್ಕೆ ತಿರುಗೇಟು ನೀಡಿ ಇದರಿಂದ ನಿಮ್ಮ ನಡತೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾಳೆ.
 
ತಾಯಿಯಾದ ಮೇಲೆ ನಮ್ಮ ಜೀವನ ಮುಗಿದುಹೋಗುತ್ತಾ? ಜಿಮ್‌ಗೆ ಹೋಗದಿರು.ಗೆಳೆಯರೊಂದಿಗೆ ಮಾತನಾಡದಿರು ಎನ್ನುವ ಹೇಳಿಕೆಗಳಿಗೆಲ್ಲಾ ನಾನು ಸೊಪ್ಪು ಹಾಕುವುದಿಲ್ಲ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಟಾಂಗ್ ನೀಡಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧರಾಗಿ ಮಿಂಚಿದ 'ಕಲಂಕ್' ನಟ ನಟಿಯರು...

ಅಭಿಷೇಕ್ ವರ್ಮನ್ ಅವರ ಕಲಂಕ್ ಚಿತ್ರದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿದ ನಂತರ ನಿರ್ಮಾಪಕರು ...

news

ಸ್ಟಾರ್ಟ್ ಆಯ್ತು ಕೆಜಿಎಫ್ 2! ಮುಹೂರ್ತಕ್ಕೆ ಬಂದವರು ಯಾರೆಲ್ಲಾ?

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಯಾವಾಗ ಎಂಬ ಪ್ರಶ್ನೆಗಳಿಗೆ ...

news

ತಂದೆಯಾಗುತ್ತಿರುವ ಲೂಸ್ ಮಾದ ಯೋಗಿ! ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದು ಹೀಗೆ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ‘ದುನಿಯಾ’ ಸಿನಿಮಾ ಮೂಲಕ ಪರಿಚಿತರಾದ ಲೂಸ್ ಮಾದ ಯೋಗೇಶ್ ಈಗ ...

news

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?

ಮುಂಬೈ: ಮದುವೆಯಾಗಿ ಮಕ್ಕಳಾದ ಮೇಲೆ ನಟಿಯರ ಗ್ಲಾಮರ್ ಮುಗಿದು ಹೋಯಿತು ಎನ್ನುವ ಕಾಲವಿತ್ತು. ಆದರೆ ಈಗ ...

Widgets Magazine