ಪುಸ್ತಕದ ಜತೆ ಫೋಟೊ… ಮತ್ತೆ ಟ್ರೋಲ್ ಗೆ ಸಿಲುಕಿದ ಟ್ವಿಂಕಲ್ ಖನ್ನಾ

ಮುಂಬೈ, ಗುರುವಾರ, 26 ಅಕ್ಟೋಬರ್ 2017 (17:43 IST)

ಮುಂಬೈ: ನಟ ಅಕ್ಷಯ್ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಮತ್ತೆ ಟ್ರೋಲ್‌ಗೆ ಸಿಲುಕಿದ್ದಾರೆ. ಇತ್ತೀಚೆಗೆ ಟ್ವಿಟರ್ ನಲ್ಲಿ ಶೇರ್‌ ಮಾಡಿದ್ದ ಫೋಟೊ ಈಗ ಟೀಕಾಕಾರರಿಗೆ ಆಹಾರವಾಗಿದೆ.


ಟ್ವಿಂಕಲ್ ಶೇರ್ ಮಾಡಿದ್ದ ಫೋಟೊದಲ್ಲಿ ಆಕೆ ಪುಸ್ತಕಗಳ ಮೇಲೆ ಕುಳಿತಿದ್ದು, ತಮ್ಮ ಕಾಲನ್ನು ಸ್ಟೂಲ್‌ ಮೇಲೆ ಇರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ ವೈರಲ್‌ ಆಗಿದೆ. ಪುಸ್ತಕಗಳ ಮೇಲೆ ಕುಳಿತು ಫೋಸ್‌ ನೀಡಿರುವುದು ಕೆಲವರ ಕಣ್ಣುಗಳು ಕೆಂಪಾಗಿಸಿದೆ. ಟ್ವಿಂಕಲ್ ಖನ್ನಾ ವಿರುದ್ಧ ವಾಗ್ದಾಳಿ ನಡೆಸಿರುವ ಜನರು, ಟ್ವಿಂಕಲ್‌ ನಡೆಯನ್ನು ಖಂಡಿಸಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಉತ್ತರ ನೀಡಿರುವ ಟ್ವಿಂಕಲ್‌, ನನ್ನ ಕಾಲು ಸ್ಟೂಲ್‌ ಮೇಲಿದೆ. ಪುಸ್ತಕಗಳ ಮೇಲೆ ಕಾಲಿಟ್ಟು ಧೂಳು ಮಾಡುವುದು ನನಗಿಷ್ಟವಿಲ್ಲ. ಪುಸ್ತಕಗಳ ಮೇಲೆ ಮಲಗಲು, ಬಾತ್‌ರೂಮ್‌ನಲ್ಲಿ ಓದಲು ನಂಗೆ ಯಾವುದೇ ಹಿಂಜರಿಕೆಯಿಲ್ಲ. ಶ್ರದ್ಧೆಯಿಂದ ಪುಸ್ತಕಗಳನ್ನು ಓದಿದ್ರೆ ನಾಲೆಡ್ಜ್  ಬರುತ್ತೆ. ಹೊರತು ಅವುಗಳನ್ನು ಪೂಜಿಸುವುದರಿಂದಲ್ಲ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಾಟ್ ನಟಿ ಪೂಜಾ ಗಾಂಧಿಗೆ ನ್ಯಾಯಾಲಯ ಶಿಕ್ಷೆ

ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕುರಿತಂತೆ ನಟಿ ಪೂಜಾ ಗಾಂಧಿಗೆ ನ್ಯಾಯಾಲಯ ಶಿಕ್ಷೆ ...

news

ಹಿಮಾಲಯದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಿದ ಸೂಪರ್ ಸ್ಟಾರ್ ಅಂಡ್ ಫ್ರೆಂಡ್ಸ್

ನವದೆಹಲಿ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಸ್ನೇಹಿತರು ಹಿಮಾಲಯದಲ್ಲಿ ಧ್ಯಾನ ಕೇಂದ್ರ ...

news

ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಗೆ ಪತಿ ಜತೆ ಬಂದ ನಟಿ ಅಮೂಲ್ಯ

ಕಲ್ಲಡ್ಕ: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆ ಬಳಿಕ ಬಣ್ಣದ ಬದುಕು ಮರೆತು ತಮ್ಮ ಪತಿ ಜಗದೀಶ್ ಜತೆ ...

news

ರಶ್ಮಿಕಾ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಪತ್ರಿಕೆ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

ಬೆಂಗಳೂರು: ಭಾವೀ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ತಪ್ಪು ಮಾಹಿತಿ ನೀಡಿದ ಪತ್ರಿಕೆಯೊಂದರ ಬಗ್ಗೆ ನಟ, ...

Widgets Magazine
Widgets Magazine