ವಿರಾಟ್ ಕೊಹ್ಲಿ ತಮ್ಮ ಗೆಳತಿಯನ್ನ ಹೇಗೆ ಕರೀತಾರೆ ಗೊತ್ತಾ…?

ಮುಂಬೈ, ಶನಿವಾರ, 14 ಅಕ್ಟೋಬರ್ 2017 (18:23 IST)

ಮುಂಬೈ: ಫ್ರೆಂಡ್ ಶಿಷ್, ಲವ್ ನಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ತಮ್ಮದೇ ರೀತಿಯಲ್ಲಿ ಕ್ಯೂಟ್ ಪೆಟ್ ನೇಮ್ ಇಟ್ಟು ಕರೀತಾರೆ. ಹಾಗೆ ವಿರಾಟ್ ಕೊಹ್ಲಿ ಅನುಷ್ಕಾರನ್ನ ಹೇಗೆ ಕರೀತಾರೆ ಗೊತ್ತಾ…


ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ, ತಮ್ಮ ಗೆಳತಿ ಅನುಶ್ಕಾ ಶರ್ಮಾ ಅವರ ಅಡ್ಡ ಹೆಸರನ್ನ ರಿವೀಲ್ ಮಾಡಿದ್ದಾರೆ. ಕೊಹ್ಲಿ ಅನುಷ್ಕಾರನ್ನ `ನುಷ್ಕಿ’  ಎಂದು ಕರೆಯುತ್ತಾರಂತೆ. ಸುದ್ದಿ ವಾಹಿನಿಯು ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಆಮೀರ್ ಖಾನ್ ಜತೆ ಭಾಗವಹಿಸಿದ್ದ ಕೊಹ್ಲಿ ಮಾತುಕತೆಯ ಸಂದರ್ಭದಲ್ಲಿ `ನುಷ್ಕಿ’ ಬಹಳ ಪ್ರಮಾಣಿಕಳು ಎಂದು ಹೇಳಿದ್ದಾರೆ.

ನಾನು ಪ್ರೀತಿಯಲ್ಲಿ ಒಮ್ಮೆ ಮಾತ್ರ ಬಿದ್ದಿದ್ದೇನೆ ಎಂದು ವಿರಾಟ್ ಹೇಳಿದ್ದಾರೆ. ಈ ಶೋ ನಲ್ಲಿ ಭಾಗವಹಿಸಿದ್ದ ಪತ್ರಕರ್ತ ಸಮೀರ್ ಅಲ್ಲಾ ಟ್ವಿಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಅನುಷ್ಕಾರಲ್ಲಿ ಇಷ್ಟವಾದ ಗುಣ ಮತ್ತು ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನುಷ್ಕಿ ಬಹಳ ಪ್ರಮಾಣಿಕಳು. ಈ ಗುಣ ನನಗೆ ಇಷ್ಟ. ಇಷ್ಟವಿಲ್ಲದ ಗುಣ ಎಂದರೆ ಯಾವಾಗಲೂ 5-7 ನಿಮಿಷ ತಡವಾಗಿ ಆಗಮಿಸುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಇತ್ತೀಚೆಗೆ ಅನುಷ್ಕಾ ಕ್ಲಾತಿಂಗ್ ಬ್ರ್ಯಾಂಡ್‍ ಆರಂಭಿಸಿದ್ದು ಅದಕ್ಕೆ ‘ನುಶ್ ಎಂದು ಹೆಸರಿಟ್ಟಿದ್ದಾರೆ. 2013ರಿಂದಲೂ ಈ ಜೋಡಿ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಸುದ್ದಿಯಾಗುತ್ತಲೇ ಇದೆ. ಆದ್ರೆ ಈ ಜೋಡಿ ಮಾತ್ರ ಈ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಎದುರು  ಹೇಳಿಕೊಂಡಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್

ಮುಂಬೈ: ಚಿತ್ರರಂಗದ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್. ಇದೀಗ ಪಟಾಕಿ ಬಳಸಬೇಡಿ ...

news

ಮಿಲಿಂದ್ ಸೋಮನ್ ಗೆ ಅಭಿಮಾನಿಗಳು ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?

ಮುಂಬೈ: ಬಾಲಿವುಡ್ ನಟ,ನಿರ್ಮಾಪಕ ಮಿಲಿಂದ್ ಸೋಮನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗೆಳತಿಯೊಂದಿಗಿರುವ ಫೋಟೊ ...

news

ಐಶ್ವರ್ಯಾ ರೈಯನ್ನೇ ಮಂಚಕ್ಕೆ ಕರೆಯಲು ಹೊಂಚು ಹಾಕಿದ್ದ ನಿರ್ಮಾಪಕ!

ಮುಂಬೈ: ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ...

news

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಭಾನುವಾರ ಸುದೀಪ್ ಈ ಕೆಲಸ ಮಾಡಲಿದ್ದಾರೆ!

ಬೆಂಗಳೂರು: ಭಾನುವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಲಿದ್ದು, ...

Widgets Magazine
Widgets Magazine