ಫಿಲ್ಮ್‌ಫೇರ್‌ನ ಜನವರಿಯ ಮುಖಪುಟದಲ್ಲಿ ಮಿಂಚುತ್ತಿರುವ ವಿರುಷ್ಕಾ...!!

ನಾಗಶ್ರೀ ಭಟ್ 

ಬೆಂಗಳೂರು, ಬುಧವಾರ, 10 ಜನವರಿ 2018 (18:43 IST)

ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್‌ನ ರನ್ ಮೆಷಿನ್ ಎಂದೇ ಕರೆಯಲ್ಪಡುವ ನಾಯಕ ವಿರಾಟ್ ಕೊಹ್ಲಿ ಡಿ. 11 ರಂದು ಇಟಲಿಯ ಟುಸ್ಕಾನಿಯಲ್ಲಿ ತಮ್ಮ ಕೆಲವೇ ಕೆಲವು ಆತ್ಮೀಯರ ಎದುರು ಗುಟ್ಟಾಗಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಆದರೂ ವಿರುಷ್ಕಾ ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಹೇಗೋ ಮಾಧ್ಯಮದವರಿಗೆ ತಿಳಿದು ಬಹು ದೊಡ್ಡ ಸುದ್ದಿಯಾಗಿತ್ತು. ಮದುವೆಯಾದ ನಂತರ ವಿರಾಟ್ ಮತ್ತು ಅನುಷ್ಕಾ ಟ್ವಿಟರ್‌ನಲ್ಲಿ ತಾವು ಪರಸ್ಪರ ಮದುವೆಯಾಗಿರುವುದಾಗಿ ಹಂಚಿಕೊಂಡಾಗಲಂತೂ ಎಲ್ಲಾ ಮಾಧ್ಯಮಗಳಲ್ಲೂ ಅದೇ ಸುದ್ದಿ. ಮದುವೆಯ ನಂತರ ಹನಿಮೂನ್, ದಿಲ್ಲಿ ಮತ್ತು ಮುಂಬೈಯಲ್ಲಿ ನಡೆದ ಅವರ ರಿಸೆಪ್ಶನ್ ಹೀಗೆ ಇಲ್ಲಿಯವರೆಗೂ ಮೀಡಿಯಾ ಇವರ ಸುತ್ತ ಸುತ್ತುತ್ತ ಸುದ್ದಿಗಳನ್ನು ಬಿತ್ತಿರಿಸುತ್ತಲೇ ಇದೆ.
 
ಆದ್ರೆ ಇದೀಗ ಹಾಟ್ ವಿಶ್ಯ ಏನಪ್ಪಾ ಅಂದ್ರೆ ವಿರುಷ್ಕಾ ಫಿಲ್ಮ್‌ಫೇರ್‌ನ ಮುಖಪುಟದಲ್ಲಿ ಬರುವ ಮೂಲಕ ತಮ್ಮ ಕಪಲ್ ಗೋಲ್ ಅನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ದಿರುವುದು. ಹೌದು,

ಫಿಲ್ಮ್‌ಫೇರ್‌ನ ಮ್ಯಾಗ್‌ಸಿನ್‌ನ ಜನವರಿಯ ಮುಖಪುಟದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿರುವ ವಿರುಷ್ಕಾ ಗೋಲ್ಡನ್‌ ಎಂಬ್ರೊಯಿಡರಿಗಳನ್ನು ಹೊಂದಿರುವ ಮೆರೂನ್ ವೆಲ್ವೇಟ್ ಸೀರೆ ಮತ್ತು ಭಾರಿ ಆಭರಣಗಳೊಂದಿಗೆ ಕೂದಲನ್ನು ಸಾಂಪ್ರದಾಯಿಕ ರೀತಿಯಲ್ಲಿ ಬನ್ ಹಾಕಿಕೊಂಡು ಅದಕ್ಕೆ ಅಂತಿಮ ಸ್ಪರ್ಷ ನೀಡುವಂತೆ ಕೆಂಪು ಗುಲಾಬಿಯನ್ನು ಮುಡಿದುಕೊಂಡು ಅನುಷ್ಕಾ ಕಂಗೊಳಿಸುತ್ತಿದ್ದರೆ, ವಿರಾಟ್ ಅನುಷ್ಕಾ ಮುಖವನ್ನು ನೋಡುತ್ತಿರುವ ಚಿತ್ರ ಎಂಥವರನ್ನೂ ಮರಳುಗೊಳಿಸುವಂತಿದೆ. ವಿರಾಟ್ ಇಲ್ಲಿ ನೇವಿ ಬ್ಲೂ ಬಣ್ಣದ ಸೂಟ್, ಹೊಳೆಯುವ ಗ್ರೇ ಬಣ್ಣದ ಟೈ ಮತ್ತು ಬಿಳಿ ಬಣ್ಣದ ಪಾಕೆಟ್ ಹೂವನ್ನು ಧರಿಸಿ ಮಿಂಚುತ್ತಿದ್ದಾರೆ.
 
ಪರಸ್ಪರ ಪ್ರೀತಿಸುತ್ತಿರುವ ದಿನಗಳಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಈ ಜೋಡಿ ಹಕ್ಕಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ರೀತಿಯ ಸ್ಟೈಲ್‌ನ ಮೂಲಕ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸುತ್ತಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

'ಟೈಗರ್ ಘರ್ಜನೆಗೆ ಬಾಕ್ಸ್ ಆಫೀಸ್ ಧೂಳಿಪಟ...!!!

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಟೈಗರ್ ಜಿಂದಾ ಹೈ' ಚಿತ್ರ ...

news

ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ತಮ್ಮ ತಂದೆ ಬಂದಾಗಲೂ ಅಷ್ಟೊಂದು ಅಳದ ಜಯರಾಮ್ ಕಾರ್ತಿಕ್ ರಿಯಾಜ್ ಪತ್ನಿ ...

news

ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ...

news

ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯಾ ಮಾಡಿದ ಕೆಲಸವೇನು ಗೊತ್ತೇ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ವಿಷಯದಲ್ಲೂ ಡಿಫರೆಂಟ್. ಇದೀಗ ಅವರ ಪುತ್ರಿಯೂ ಅಪ್ಪನಿಗಿಂತ ...

Widgets Magazine
Widgets Magazine