ರಜನೀಕಾಂತ್ ಅಭಿನಯದ ಕಾಲಾ ಚಿತ್ರದ ಬಗ್ಗೆ ನಿರ್ಮಾಪಕ ಧನುಷ್ ಹೀಗ್ಯಾಕೆ ಹೇಳಿದ್ರು

ಚೆನ್ನೈ, ಗುರುವಾರ, 12 ಜುಲೈ 2018 (07:47 IST)

ಚೆನ್ನೈ : ತಮಿಳು ನಟ, ಧನುಷ್ ಅವರು ತಮ್ಮ ನಿರ್ಮಾಣದಲ್ಲಿ ಮೂಡಿಬಂದ 'ಕಾಲಾ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿದೆ ಎಂದು ಹೇಳಿದ್ದಾರೆ. ಹಲವರಿಗೆ ಧನುಷ್ ಅವರು  ಹೀಗ್ಯಾಕೆ ಹೇಳಿದ್ರು ಎಂಬ ಗೊಂದಲ ಮೂಡಿರಬಹುದು.


ಇದಕ್ಕೆ ಒಂದು ಮುಖ್ಯವಾದ ಕಾರಣವಿದೆ. ಅದೇನೆಂದರೆ ಧನುಷ್ ನಿರ್ಮಾಣದ ವಂಡರ್‌‍ಬಾಲ್ ಬ್ಯಾನರ್‌‍ ನಲ್ಲಿ ತೆರೆಗೆ ಕಂಡ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ  ಸಿನಿಮಾ ತಮಿಳುನಾಡಿನಲ್ಲಿ ಎಲ್ಲಾ ನಗರಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮುಖ್ಯವಾಗಿ ಚೆನ್ನೈನಲ್ಲಿ ಭಾರಿ ಕಲೆಕ್ಷನ್ ಮಾಡಿದ ಐದನೇ ಅತಿ ದೊಡ್ಡ ಸಿನಿಮಾ ಎನ್ನಿಸಿಕೊಂಡಿದೆ.


ಆದರೆ ಕಾಲಾ ಚಿತ್ರದಿಂದ ರೂ.40 ಕೋಟಿವರೆಗೂ ನಷ್ಟ ಆಗಿದೆ, ಆ ನಗದನ್ನು ವಿತರಕರಿಗೆ ಧನುಷ್ ನೀಡಬೇಕು ಎಂಬ ಸುದ್ದಿ ಕೇಳಿಬಂದಿದೆ. ಆದಕಾರಣ  ಧನುಷ್ ಅವರು 'ಕಾಲಾ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿದೆ’ ಎಂದು ಹೇಳಿದ್ದಾರೆ. 'ನಿಜ ಹೇಳಬೇಕೆಂದರೆ ಕಲೆಕ್ಷನ್ ಪರವಾಗಿ ಕಾಲಾ ಯಶಸ್ಸು ಸಾಧಿಸಿದ್ದು, ವಂಡರ್ ಬಾಲ್ ಫಿಲಂಸ್ ಕಂಪೆನಿಗೆ ಒಳ್ಳೆಯ ಹೆಸರುತಂದುಕೊಟ್ಟಿದೆ. ತಮ್ಮ ಕಂಪೆನಿಗೆ ಅವಕಾಶ ನೀಡಿದ ರಜನಿಕಾಂತ್‌ಗೆ, ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಪ್ರೇಕ್ಷಕರಿಗೆ ಈ ಸಂದರ್ಭದಲ್ಲಿ ಕೃತಜ್ಜತೆಗಳನ್ನು ತಿಳಿಸುತ್ತಿದ್ದೇನೆ' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಂಜು ಸಿನಿಮಾಕ್ಕೆ ಅನುಮತಿ ನೀಡಿದ್ದಕ್ಕೆ ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ : ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿರುವ ‘ಸಂಜು’ ಚಿತ್ರ ಜೂನ್ 29ರಂದು ಬಿಡುಗಡೆಗೊಂಡು ಬಾಕ್ಸ್ ...

news

ಹೊಸ ರೂಪದಲ್ಲಿ ರಿಲೀಸ್ ಆಗುತ್ತಿರುವ ನಾಗರಹಾವು ಚಿತ್ರದ ಬಗ್ಗೆ ಹಿರಿಯ ನಟಿ ಲೀಲಾವತಿ ಹೇಳಿದ್ದೇನು?

ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ನಟಿಸಿದ ಹಿಟ್ ಸಿನಿಮಾ 'ನಾಗರಹಾವು’ ಈಗ ಮತ್ತೆ ತೆರೆ ...

news

ಸೋನಾಲಿಯನ್ನು ನೋಡಿದರೆ ಎಂಥವರ ಹೃದಯವೂ ಕರಗುತ್ತದೆ. ಹಾಗಾದ್ರೆ ಅಂತದೇನಾಯ್ತು ?

ಮುಂಬೈ : ಇತ್ತೀಚೆಗಷ್ಟೇ ತಾನು ಅಪಾಯಕಾರಿ ಕ್ಯಾನ್ಸರ್ ಗೆ ತುತ್ತಾಗಿದ್ದು, ನ್ಯೂಯಾರ್ಕ್ ನಲ್ಲಿ ಅದಕ್ಕೆ ...

news

ನಟ ದರ್ಶನ್ ಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಮ್ಯಾನೇಜರ್ ಮಲ್ಲಿಕಾರ್ಜುನ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಲ್ಲ ವ್ಯವಹಾರಗಳನ್ನು ...

Widgets Magazine
Widgets Magazine