ಸಲ್ಮಾನ್ ಖಾನ್ ಪ್ರಿಯಾಂಕ ಚೋಪ್ರಾ ಮೇಲೆ ಸಿಟ್ಟಾಗಿ ಹೇಳಿದ್ದೇನು ಗೊತ್ತೇ?

ಮುಂಬೈ, ಗುರುವಾರ, 9 ಆಗಸ್ಟ್ 2018 (12:39 IST)

ಮುಂಬೈ: ಮದುವೆಯ ಕಾರಣ ನೀಡಿ ಭಾರತ್‌ ಸಿನಿಮಾದಿಂದ ಹೊರಬಂದು ಆಮೇಲೆ ಹಾಲಿವುಡ್‌ ಪ್ರಾಜೆಕ್ಟ್ ಒಪ್ಪಿದ ಚೋಪ್ರಾ ಮೇಲೆ ಸಲ್ಮಾನ್‌ ಖಾನ್‌ ಬೇಸರಗೊಂಡಿದ್ದಾರಂತೆ.


ಪ್ರಿಯಾಂಕ ನಿರ್ಧಾರದ ಬಗ್ಗೆ ನನಗೆ ಸಂತೋಷವಿದೆ. ಆದರೆ ಆಕೆ ಮೊದಲೇ ಹಾಲಿವುಡ್‌ನ ಬಿಗ್‌ ಸಿನಿಮಾ ಆಫರ್‌ ಸಿಕ್ಕಿರುವ ಕಾರಣ ಹೇಳಿದ್ದರೆ ನಾವು ಆಕೆಯನ್ನು ತಡೆಯುತ್ತಲೇ ಇರಲಿಲ್ಲ. ಅದರ ಶೂಟಿಂಗ್‌ ಆರಂಭವಾದ ಮೇಲೆಯೇ ನಮಗೆ ನಿಜ ವಿಷಯ ಗೊತ್ತಾಗಿದ್ದು ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ.

ಪ್ರಿಯಾಂಕರಿಗೆ ಭಾರತದಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೋ ಅಥವಾ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲವೋ ಅಥವಾ ಅವರು ಹಾಲಿವುಡ್‌ ಸಿನಿಮಾ ಮತ್ತು ಟೀವಿ ಶೋಗಳಲ್ಲಿ ಮಾತ್ರ ನಟಿಸಲು ನಿರ್ಧರಿಸಿದ್ದಾರೋ ಗೊತ್ತಿಲ್ಲ. ಅವರ ಸ್ವಂತ ನಿರ್ಧಾರಗಳ ಬಗ್ಗೆ ನಾನೇನೂ ಹೇಳುವುದಿಲ್ಲ. ಅವರಿಗೆ ಸಲ್ಮಾನ್‌ ಖಾನ್‌ ಜೊತೆಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಪರವಾಗಿಲ್ಲ, ಕನಿಷ್ಠ ಪಕ್ಷ ಅವರು ಹಾಲಿವುಡ್‌ನ ದೊಡ್ಡ ಹೀರೊ ಜೊತೆಗಾದರೂ ನಟಿಸುತ್ತಿದ್ದಾರೆ ತಾನೇ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ




ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

'ಡಾಲಿ' ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ಯಾಕೆ?

ಬೆಂಗಳೂರು: ‘ಸದಾ ನಿಮ್ಮೊಂದಿಗೆ’ ಎಂಬ ಸಂಚಿಕೆಯಲ್ಲಿ ಸಿನಿ ತಾರೆಯರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುಚ ...

news

ಪೂಜಾ ದದ್ವಾಲ್ ಗೆ ಸಹಾಯ ಹಸ್ತ ಚಾಚಿದ ಸಲ್ಮಾನ್ ಖಾನ್

ಮುಂಬೈ: ಕ್ಷಯರೋಗದೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ಪೂಜಾ ದದ್ವಾಲ್ ಗುಣಮುಖರಾಗಿ ...

news

ಶಾರುಕ್ ಖಾನ್ ಮಗ ಮಾಡಿದ ಈ ಕೆಲಸ ವೈರಲ್ ಆಯ್ತು!

ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಶಾರೂಕ್ ಖಾನ್ ತಮ್ಮ ಮಕ್ಕಳನ್ನು ತಾನು ನಡೆದ ಹಾದಿಯಲ್ಲೇ ಬೆಳೆಸಿದ್ದಾರೆ. ...

news

ಸಾಕ್ಷ್ಯಂ ಚಿತ್ರದಲ್ಲಿ ಪೂಜಾ ಹೆಗಡೆ ಗ್ಲಾಮರಸ್ ಆಗಿ ಕಾಣದೇ ಇರುವುದಕ್ಕೆ ಕಾರಣ ಯಾರು ಗೊತ್ತೇ?

ಚೆನ್ನೈ: ನಟಿ ಪೂಜಾ ಹೆಗಡೆ ಇದೀಗ ತೆಲುಗಿನ 'ಸಾಕ್ಷ್ಯಂ' ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ...

Widgets Magazine
Widgets Magazine