ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಗೆಳತಿಯರ ಜತೆ ಖುಷಿಯ ಕ್ಷಣಗಳನ್ನು ಕಳೆದು ಹೇಳಿದ್ದೇನು?

ಮುಂಬೈ, ಮಂಗಳವಾರ, 7 ಆಗಸ್ಟ್ 2018 (08:24 IST)

ಮುಂಬೈ: ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಹೊಸ ಫೋಟೋವನ್ನು ಶೇರ್ ಮಾಡಿದ್ದಾರೆ. ಅವರ ಆತ್ಮೀಯ ಸ್ನೇಹಿತರಾದ ಸುಸಾನೆ ಖಾನ್ ಮತ್ತು ಗಾಯಿತ್ರಿ ಜೋಷಿ ಅವರ ಸಾಂಗತ್ಯದಿಂದ ಫ್ರೆಂಡ್‌ಶಿಪ್‌ ಡೇಯನ್ನು ಸಂತಸದಿಂದ ಕಳೆಯುವಂತೆ ಮಾಡಿದೆಯಂತೆ.


ಚಿಕಿತ್ಸೆಗಾಗಿ ಕೂದಲನ್ನು ಬೋಳಿಸಿರುವ ಸೋನಾಲಿ ಬೇಂದ್ರೆ 'ಇದು ನಾನು, ಈ ಕ್ಷಣ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದರೆ ಜನರು ನನ್ನನ್ನು ವಿಚಿತ್ರವಾಗಿ ನೋಡಬಹುದು. ಆದರೆ ಇದು ಸತ್ಯ, ಅದ್ಹೇಗೆ ಎಂದು ಹೇಳುತ್ತೇನೆ, ನಾನೀಗ ಪ್ರತಿಯೊಂದು ಕ್ಷಣವನ್ನೂ ಗಮನಿಸುತ್ತೇನೆ, ಸಂತೋಷವಾಗಿ ಕಳೆಯಲು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತೇನೆ.


ಹೌದು, ನೋವಿದೆ, ನಿಶ್ಯಕ್ತಿಯಿದೆ, ಆದರೂ ನನಗೆ ಇಷ್ಟವಾಗಿದ್ದನ್ನು ಮಾಡುತ್ತೇನೆ. ಸ್ನೇಹಿತರು ನನ್ನ ಶಕ್ತಿ, ಅವರ ಬ್ಯುಸಿ ಶೆಡ್ಯೂಲ್‌ ನಡುವೆಯೂ ನನ್ನ ಭೇಟಿ ಮಾಡಿ, ನನ್ನಲ್ಲಿ ಒಂಟಿತನ ಭಾವನೆ ಬರದಂತೆ ನೋಡಿಕೊಂಡಿದ್ದಾರೆ. ನಿಮ್ಮಂಥ ಸ್ನೇಹಿತರನ್ನು ಪಡೆದ ನಾನು ಅದೃಷ್ಟವಂತೆ ನನ್ನೊಂದಿಗೆ ಇರಲು ಇಚ್ಛಿಸಿದವರಿಗೆ ಹಾಗೂ ನನಗೆ ಸಹಾಯ ಮಾಡಿದವರಿಗೆ ನಾನು ತುಂಬಾ ಧನ್ಯವಾದ ತಿಳಿಸುತ್ತೇನೆ’ ಎಂದು ಸೋನಾಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಿಯಾಂಕಳ ನಿರ್ಧಾರದಿಂದ ಬೇಸರಗೊಂಡ ಬನ್ಸಾಲಿ

ಮುಂಬೈ: ಪ್ರಿಯಾಂಕ ಚೋಪ್ರಾಳ ನಿರ್ಧಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಬಿಕ್ ಜತೆ ಮದುವೆ ...

news

ಶೂಟಿಂಗ್ ಬಿಟ್ಟು ತರಾತುರಿಯಲ್ಲಿ ಅಮಿತಾಭ್ ಬಚ್ಚನ್ ಭಾರತಕ್ಕೆ ಬಂದಿದ್ಯಾಕೆ….?

ಮುಂಬೈ: ಬಲ್ಗೇರಿಯಾದಲ್ಲಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಚಿತ್ರದ ...

news

ಸನ್ನಿ ಲಿಯೋನ್ ಈ ನಿರ್ಧಾರದಿಂದ ಅಭಿಮಾನಿಗಳು ಫುಲ್ ಖುಷ್ ಅಂತೆ!

ಮುಂಬೈ: ನಟಿ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿದ ನಂತರ ಈಗ ...

news

ನಟಿ ರಚಿತಾ ರಾಮ್ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದು ಹೇಗಿದೆ ನೋಡಿ!

ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ವಿಡಿಯೋ ಇದೀಗ ಸಾಮಾಜಿಕ ...

Widgets Magazine