ನಟಿ ಪ್ರಿಯಾಂಕ ಚೋಪ್ರಾರವರ ರಿಯಲ್ ಚಾಂಪಿಯನ್ ಯಾರು ಗೊತ್ತಾ…?

ಮುಂಬೈ, ಸೋಮವಾರ, 16 ಏಪ್ರಿಲ್ 2018 (06:19 IST)

ಮುಂಬೈ : 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗೆದ್ದ ಬಾಕ್ಸರ್ ಮೇರಿ ಕೋಮ್ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಶುಭಾಶಯ ಕೋರಿದ್ದಾರೆ.


ಆಸ್ಟೇಲಿಯಾದ ಗೋಲ್ಟ್ ಕಾಸ್ಟ್ ನಲ್ಲಿ ನಡೆಯುತ್ತಿರುವ 2018ರ ಕಾಮನ್ ವೆಲ್ತ್ ಮಹಿಳೆಯರ ಬಾಕ್ಸಿಂಗ್ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ್ದ ಮೇರಿ ಕೋಮ್ ಅವರು ಐರ್ಲೆಂಡಿನ ಕ್ರಿಸ್ಟಿನಾ ಹೊರಾ ಅವರನ್ನು 5-0 ಅಂತರರಿಂದ ಮಣಿಸಿ ಚಿನ್ನದ ಪದಕ ಗೆದಿದ್ದರು. ಈಗಾಗಲೇ ಐದು ಬಾರಿ ವಿಶ್ವಚಾಂಪಿಯನ್ ಪಟ್ಟ ಗಳಿಸಿರುವ ಮೇರಿ ಕೋಮ್ ಅವರ ಈ ಸಾಧನೆಯ ಬಗ್ಗೆ ನಟಿ ಪ್ರಿಯಾಂಕ ಚೋಪ್ರ ಅವರು  ಟ್ವೀಟ್ ಮಾಡಿ,’ ನನ್ನ ಸ್ನೇಹಿತೆಯ ಈ ಸಾಧನೆ ನನಗೆ ಹೆಮ್ಮೆ ತಂದಿದೆ. ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ‘ ಎಂದು ತಿಳಿಸಿ ಶುಭಾಶಯ ಕೋರಿದ್ದಾರೆ.


ನಟಿ ಪ್ರಿಯಾಂಕ ಚೋಪ್ರ ಅವರು  2014 ರಲ್ಲಿ ತೆರೆಕಂಡ ಮೇರಿ ಕೋಮ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ನಿರ್ದೇಶಕರಾದ ಓಮುಂಗ್ ಕುಮಾರ್ ಸಹ ಮೇರಿ ಕೋಮ್ ಅವರಿಗೆ ಈ ಬಗ್ಗೆ ಅಭಿನಂದನೆ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಈ ಬಾರಿ ಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ಇಳಿಯುತ್ತಾರಾ ನಟ ಶಿವರಾಜ ಕುಮಾರ್…?

ಹಾಸನ : ಈ ಬಾರಿಯ ಚುನಾವಣೆಯಲ್ಲಿ ಸಿನಿಮಾ ತಾರೆಯರು ಕೂಡ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರಕ್ಕೆ ಇಳಿದಿರುವ ...

news

‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ; ಸಂತಸ ವ್ಯಕ್ತಪಡಿಸಿದ ನಟಿ ತಾರಾ

ಬೆಂಗಳೂರು : ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ...

news

ವಂಚನೆ ಪ್ರಕರಣದಡಿಯಲ್ಲಿ ದೋಷಿ ಎಂದು ಸಾಬೀತಾದ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್

ಮುಂಬೈ : ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್ ಹಾಗೂ ಅವರ ಪತ್ನಿ ಯನ್ನು ...

news

ಚಿತ್ರರಂಗಕ್ಕೆ ಕಾಲಿಡುತ್ತಿದೆ ಅಮಿತಾಬ್ ಬಚ್ಚನ್ ರವರ ಮೂರನೇ ತಲೆಮಾರು!

ಮುಂಬೈ : ಬಾಲಿವುಡ್ ನಲ್ಲಿ ಸ್ಟಾರ್ ನಟ ಎಂದು ಹೆಸರುಮಾಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬದ ...

Widgets Magazine
Widgets Magazine