Widgets Magazine

ಕರಣ್ ಜೋಹರ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು ಯಾಕೆ...?

ಮುಂಬೈ| pavithra| Last Modified ಶುಕ್ರವಾರ, 26 ಜನವರಿ 2018 (08:34 IST)
ಮುಂಬೈ : ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹಾಗು ಅವರ ಧರ್ಮಾ ಪ್ರೊಡಕ್ಷನ್, ವಿತರಕರು, ಕಾರ್ಯಕ್ರಮದ ತೀರ್ಪುಗಾರರು ಹಾಗು ಟಿವಿ ವಾಹಿನಿಯ ಮಾಲೀಕರಿಗೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದಾರೆ.ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ ‘ ಇಂಡಿಯಾಸ್ ನೆಕ್ಸ್ಟ್ ಸೂಪರ್ ಸ್ಟಾರ್ಸ್’ ಕಾರ್ಯಕ್ರಮದಲ್ಲಿ ‘ಕಮ್ಲಾ ಪಸಂದ್ ‘ ಪಾನ್ ಮಸಾಲಾ ಬ್ರಾಂಡ್ ನ ಪ್ರಮೋಷನ್ ಮಾಡಲಾಗಿತ್ತು. ಈ ಎಲ್ಲಾ ಕಡೆ ಪ್ರಸಾರವಾಗಿದ್ದು, ತಂಬಾಕು ಸೇವನೆಗೆ ಉತ್ತೇಜನ ಮಾಡಿರುವುದು ಕಾನೂನಿಗೆ ವಿರುದ್ದವಾಗಿದೆ. ಆದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು 2003 ಕಾನೂನಿನ ಅನ್ವಯ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು 10 ದಿನಗಳ ಒಳಗೆ ಕರಣ್ ಜೋಹರ್ ಹಾಗು ಧರ್ಮಾ ಪ್ರೊಡಕ್ಷನ್ ಉತ್ತರಿಸಬೇಕೆಂದು ನೋಟಿಸ್ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :