ಕಾಜೋಲ್ ತಮ್ಮ ಬಯೋಪಿಕ್ ಚಿತ್ರ ಮಾಡುವುದು ಬೇಡ ಎಂದಿದ್ದು ಯಾಕೆ ?

ಮುಂಬೈ, ಮಂಗಳವಾರ, 10 ಜುಲೈ 2018 (07:50 IST)

ಮುಂಬೈ : ಇತ್ತೀಚೆಗೆ ಬಯೋಪಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿನಿಮಾ ರಂಗಗಳು ಹೆಚ್ಚು ಗಮನ ಹರಿಸುತ್ತಿದೆ. ಈಗಾಗಲೇ ಸಾಕಷ್ಟು ಬಯೋಪಿಕ್ ಸಿನಿಮಾಗಳು ಚಿತ್ರಿಕರಣದ ಹಂತದಲ್ಲಿದ್ದು, ಕೆಲವು ಸಿನಿಮಾಗಳು ರಿಲೀಸ್ ಆಗಿ ಈ ನಡುವೆ ಭರ್ಜರಿ ಯಶಸ್ಸು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟಿಯೊಬ್ಬರು ತಮ್ಮ ಬಯೋಪಿಕ್ ಚಿತ್ರ ಮಾಡುವುದು ಬೇಡ ಎಂದು ಹೇಳುತ್ತಿದ್ದಾರಂತೆ.


ಬಾಲಿವುಡ್ ನಟ ಸಂಜಯ್ ದತ್ ಅವರ ಬಯೋಪಿಕ್ ಚಿತ್ರ 'ಸಂಜು' ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದನ್ನು ಕಂಡು ಸಿನಿಮಾ ತಾರೆಯರು ತಮ್ಮ ಬಯೋಪಿಕ್ ಚಿತ್ರ ಮಾಡುವುದರ ಬಗ್ಗೆ ಮಾತನಾಡಿದರೆ ಬಾಲಿವುಡ್ ನಟಿ ಕಾಜೋಲ್ ಮಾತ್ರ ಬಯೋಪಿಕ್ ಚಿತ್ರ ಬೇಡ ಎನ್ನುತ್ತಿದ್ದಾರಂತೆ.


ಮುಂಬೈನಲ್ಲಿ ನಡೆದ ಐಕಾನಿಕ್ ಬ್ರಾಂಡ್ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಕಾಜೋಲ್ ‘ನನ್ನ ಜೀವನಚರಿತ್ರೆ ಸಿನಿಮಾ ಆಗೋದು ಬೇಡ. ನನಗಿಷ್ಟದಂತೆ ನಾನು ನನ್ನ ಜೀವನ ಕಳೆದಿದ್ದೇನೆ. ನನಗೆ ಇದ್ರಲ್ಲಿ ತುಂಬಾ ಖುಷಿಯಿದೆ. ಇದು ಸಿನಿಮಾ ಆಗೋದು ನನಗೆ ಇಷ್ಟವಿಲ್ಲವೆಂದು ಹೇಳಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕತ್ರೀನಾ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ಯಾಕೆ?

ಮುಂಬೈ : ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ಬಾಲಿವುಡ್ ನಟಿ ಕತ್ರೀನಾ ಕೈಫ್ ವರ್ಕೌಟ್ ...

news

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಮುಂಬೈ : ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ...

news

ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಚೆನ್ನೈ : ತಮಿಳು ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಪೋಸ್ಟರ್ ವಿರುದ್ಧ ತಮಿಳುನಾಡು ಆರೋಗ್ಯ ಇಲಾಖೆ ...

news

ಈ ದಿನ ನಟ ಸುದೀಪ್ ಜೀವನದಲ್ಲಿ ಮರೆಯಲಾಗದ ದಿನವಂತೆ. ಯಾಕೆ ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಜುಲೈ 6 ತಮ್ಮ ಜೀವನದಲ್ಲಿ ಮರೆಯಲಾಗದ ದಿನವಾಗಿದೆ ...

Widgets Magazine