ನೇಪಾಳಿ ಕುವರಿ ಮನೀಷಾ ಕೊಯಿರಾಲಾಗೆ ಮದ್ವೆಯಂತೆ!

Manisha Koirala
IFM
ನೇಪಾಳಿ ರಾಜಕಾರಣಿ ಕುಟುಂಬದ ಹಿನ್ನೆಲೆಯ ಖ್ಯಾತ ಬಾಲಿವುಡ್ ನಟಿ ಮನೀಷ ಕೊಯಿರಾಲ ಹಸೆಮಣೆ ಏರಲು ಸನ್ನದ್ಧರಾಗಿದ್ದಾರೆ. ಇದೇ ಬರುವ ಜೂನ್ 19ರಂದು ನೇಪಾಳಿ ಉದ್ಯಮಿ ಸಾಮ್ರಾಟ್ ದಹಾಲ್ ಅವರನ್ನು ಕೈಹಿಡಿಯಲಿದ್ದೇನೆಂದು ಬಹಿರಂಗಪಡಿಸಿದ್ದಾರೆ.

ನೇಪಾಳದ ಕಠ್ಮಾಂಡುವಿನಲ್ಲೇ ಮನೀಷಾ ಸಾಮ್ರಾಟ್ ಅವರ ಕೈಹಿಡಿಯಲಿದ್ದಾರೆಂದು ನೇಪಾಳಿ ಚಿತ್ರ ನಿರ್ದೇಶಕರಾದ ದೀಪೇಂದ್ರ ಖನಾಲ್ ತಿಳಿಸಿದ್ದಾರೆ. ದೀಪೇಂದ್ರ ಕನ್ಹಾಲ್ ಅವರ ಮುಂಬರುವ ಧರ್ಮ ಎಂಬ ನೇಪಾಳಿ ಚಿತ್ರದಲ್ಲಿ ಮನೀಷಾ ಕೊಯಿರಾಲ ನಟಿಸುತ್ತಿದ್ದಾರೆ. ಬಹುತೇಕ ಎರಡು ದಶಕಗಳ ನಂತರ ಇದೀಗ ಮೊದಲ ಬಾರಿಗೆ ಭಾರತ ಬಿಟ್ಟು ಮನೀಷಾ ನೇಪಾಳಿ ಭಾಷೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಮನೀಷಾ ಕೇರಳದಲ್ಲಿ ತೆಲುಗು ಚಿತ್ರವೊಂದರ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಕಾಠ್ಮಂಡುವಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

1970ರ ಆಗಸ್ಟ್ 16ರಂದು ಜನಿಸಿದ ಮನೀಷಾ ನೇಪಾಳದ ಪ್ರಥಮ ಚುನಾಯಿತ ಪ್ರಧಾನ ಮಂತ್ರಿ ಬಿ.ಪಿ.ಕೊಯಿರಾಲ ಅವರ ಮೊಮ್ಮಗಳಾಗಿದ್ದು, ಆಕೆಯ ತಂದೆ ಪ್ರಕಾಶ್ ಕೊಯಿರಾಲ ಕೂಡಾ ಸಚಿವರಾಗಿದ್ದರು. ಮನೀಷಾಳ ಅತ್ತೆ ಸುಜಾತಾ ಕೊಯಿರಾಲಾ ಸದ್ಯ ನೇಪಾಳದ ಉಪ ಪ್ರಧಾನಿಯಾಗಿದ್ದು, ಆಕೆಯ ಇಬ್ಬರು ಮಾವಂದಿರು ಎಂಪಿಗಳಾಗಿದ್ದಾರೆ. ಮನೀಷಾ ಕೂಡಾ ರಾಜಕಾರಣದತ್ತ ಗಂಭೀರವಾಗಿ ಮುಖ ಮಾಡುವ ಲಕ್ಷಣಗಲು ಕಾಣುತ್ತಿದ್ದು, ಸದ್ಯ ಆಕೆ ಭಾರತದಿಂದ ನೇಪಾಳಕ್ಕೆ ಮತ್ತೆ ಹೋಗುವ ಲಕ್ಷಣಗಳೇ ಕಂಡು ಬರುತ್ತಿವೆ ಎನ್ನಲಾಗಿದೆಯಾದರೂ, ಆಕೆ ಎಲ್ಲೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ.
Manisha Koirala
IFM


ಮನೀಷಾ ಬಾಲಿವುಡ್ ಮೂಲಕವೇ ಜಗಜ್ಜನಿತಳಾದರೂ, ಫೇರಿ ಭೇತುಲಾ ಎಂಬ ಒಂದು ನೇಪಾಳಿ ಚಿತ್ರದಲ್ಲಿ ಈ ಹಿಂದೆ ನಟಿಸಿದ್ದರೂ, ಆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಹೀಗಾಗಿ ಧರ್ಮ ಚಿತ್ರವೇ ಆಕೆಯ ಮೊದಲ ನೇಪಾಳಿ ಚಿತ್ರವಾಗಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಮನೀಷಾ ನೇಪಾಳಿ ಮೂಲವಾದರೂ, ಆಕೆ ಬೆಳೆದಿದ್ದು ಭಾರತದಲ್ಲೇ. ವಾರಣಾಸಿಯಲ್ಲಿ ಅಜ್ಜಿಯ ಜೊತೆ ಬೆಳೆದ ಆಕೆ ಓದಿದ್ದೂ ಕೂಡಾ ವಾರಣಾಸಿ ಹಾಗೂ ದೆಹಲಿಯಲ್ಲಿ. ಹಾಗಾಗಿ ದಶಕಗಳ ನಂತರವಷ್ಟೇ ನೇಪಾಳಕ್ಕೆ ಮರಳಲು ಇದೀಗ ಮನೀಷಾ ಸಜ್ಜಾಗಿದ್ದಾಳೆ.

ನೇಪಾಳದಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಸುಂದರಿ ಮನೀಷಾ ಸುಭಾಷ್ ಘಾಯ್ ನಿರ್ದೇಶನ ಸೌದಾಗರ್ ಚಿತ್ರ ಮೂಲಕ ಬಾಲಿವುಡ್ಡಿಗೆ ಅಡಿಯಿಟ್ಟು ಸಾಕಷ್ಟು ಸುದ್ದಿ ಮಾಡಿದಳು. ನಂತರ ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡಿದ ಮನೀಷಾಗೆ ಮಣಿರತ್ಮಂ ಅವರ ದಿಲ್ ಸೇ, ಬಾಂಬೇ, ಸಂಜಯ್ ಲೀಲಾ ಭನ್ಸಾಲಿ ಅವರ ಖಾಮೋಷಿ, ವಿಧು ವಿನೋದ್ ಛೋಪ್ರಾರ 1942: ಎ ಲವ್ ಸ್ಟೋರಿ ಯಂತಹ ಚಿತ್ರಗಳು ಸಾಕಷ್ಟು ಪ್ರಸಿದ್ಧಿ, ಹಣ, ಪ್ರತಿಷ್ಠೆ ತಂದುಕೊಟ್ಟವು. ನಂತರ ಗುಪ್ತ್, ಅಕೇಲೇ ಹಮ್ ಅಕೇಲೇ ತುಮ್, ಕಚ್ಚೇ ದಾಗೇ, ಕಂಪೆನಿ, ಲಜ್ಜಾದಂತಹ ಚಿತ್ರಗಳಲ್ಲಿ ನಟಿಸಿ ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಗಳಿಸಿಕೊಂಡಾಕೆ. ಬಾಲಿವುಡ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಅನಭಿಷಿಕ್ತ ರಾಣಿಯಾಗಿ ಮೆರೆದ ಈ ಮನೀಷಾ ಕೆಲ ಕಾಲ ಸುದ್ದಿಯಿಂದ ದಾರವಿದ್ದರೂ, ಇದೀಗ ತನ್ನ 40ರ ಹರೆಯರಲ್ಲಿ ಮದುವೆಯಾಗುವ ಮಾತೆತ್ತಿ ಮತ್ತೆ ಸುದ್ದಿಯಾಗಿದ್ದಾಳೆ. ಆಕೆಯ ವೈವಾಹಿಕ ಜೀವನಕ್ಕೆ ಶುಭಾಷಯ ಕೋರಲು ಇನ್ಯಾಕೆ ತಡ?ಇದರಲ್ಲಿ ಇನ್ನಷ್ಟು ಓದಿ :  

ತಾರಾ ಪರಿಚಯ

ಡಿ ಗ್ರೇಡ್ ಸಿನಿಮಾಕ್ಕೂ ನಾನು ರೆಡಿ ಎಂದ ಕನ್ನಡತಿ ಸ್ನೇಹಾ

ನಾನು ಡಿ ಗ್ರೇಡ್ ಸಿನಿಮಾದಲ್ಲಿ ನಟಿಸೋದಕ್ಕೆ ನಾಚಿಕೆ ಪಡೋದಿಲ್ಲ ಎಂದು ಕನ್ನಡತಿ, ನಟಿ ಸ್ನೇಹಾ ಉಲ್ಲಾಳ್ ...

ಸುಖ ದಾಂಪತ್ಯಕ್ಕೆ ಹಾಟ್ ನಟಿ ಕೊಯಿನಾ ಮಿತ್ರಾ ಫ್ರೀ ಟಿಪ್ಸ್!

ಕೊಯಿನಾ ಮಿತ್ರಾ ಎಂಬ ಬಾಲಿವುಡ್ ಹಾಟ್ ಬೆಡಗಿ ತನ್ನ ಶೇ.100ರಷ್ಟನ್ನೂ ತನ್ನ ಗಂಡನಾಗುವವನಿಗೆ ...

ಕತ್ರಿನಾಳ ಝೆರಾಕ್ಸ್ ಕಾಪಿ ಝರೀನ್ ಸಲ್ಮಾನ್‌ಗೆ ನಾಯಕಿ!

ಸಲ್ಮಾನ್ ಖಾನ್ ಅವರ ಮುಂಬರುವ ವೀರ್ ಚಿತ್ರದಲ್ಲಿ ಸುಂದರ ಝರೀನ್ ಖಾನ್ ಎಂಬಾಕೆ ನಾಯಕಿಯಾಗಿದ್ದಾಳೆ. ಹೊಸದಾಗಿ ...

ಎಂದಿಗೂ ಹಿಂತಿರುಗಿ ನೋಡದ ಅಮೀರ್ ಖಾನ್ ಎಂಬ ಪರ್ಫೆಕ್ಷನಿಸ್ಟ್!

ಅಮೀರ್ ಖಾನ್ 1965 ಮಾರ್ಚ್ 14ರಂದು ಮುಂಬೈಯಲ್ಲಿ ಜನಿಸಿದರು. ಅಮೀರ್ ಹುಸೈನ್ ಖಾನ್ ಎಂಬುದು ಇವರ ಹುಟ್ಟು ...

Widgets Magazine