ಸುಖ ದಾಂಪತ್ಯಕ್ಕೆ ಹಾಟ್ ನಟಿ ಕೊಯಿನಾ ಮಿತ್ರಾ ಫ್ರೀ ಟಿಪ್ಸ್!

Koena Mitra
IFM
ಕೊಯಿನಾ ಮಿತ್ರಾ ಎಂಬ ಬಾಲಿವುಡ್ ಹಾಟ್ ಬೆಡಗಿ ತನ್ನ ಶೇ.100ರಷ್ಟನ್ನೂ ತನ್ನ ಗಂಡನಾಗುವವನಿಗೆ ಕೊಡುವುದಿಲ್ಲವಂತೆ. ಗಂಡಂದಿರಿಗೆ ನಿಮ್ಮ ಶೇ.100ರಷ್ಟನ್ನೂ ಒಪ್ಪಿಸಿಬಿಡಬೇಡಿ. ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಿ ಎಂದು ಈಕೆ ಮಹಿಳೆಯರಿಗೆ ಕಿವಿಮಾತನ್ನೂ ಹೇಳಿದ್ದಾಳೆ.

ಹುಡುಗಿಯರು ತುಂಬ ತಾಳ್ಮೆ ಹೊಂದಿರಬೇಕು ಹಾಗೂ ಸ್ಮಾರ್ಟ್ ಆಗಿರಬೇಕು. ಸಾಮಾನ್ಯವಾಗಿ ಗಂಡಸರು ತಮ್ಮ ಹುಡುಗಿಯ ಬಗ್ಗೆ ಎಲ್ಲವನ್ನೂ ತಿಳಿಯುವ ಕುತೂಹಲ ಹೊಂದಿರುತ್ತಾರೆ. ಅವರ ಆಲೋಚನೆ ಪ್ರಕಾರ, ಹುಡುಗಿಯರಿಗೆ ಖಾಸಗಿತನವೇ ಬೇಕಿಲ್ಲ. ಆದರೆ, ನಿಜಕ್ಕೂ ಹುಡುಗಿಯರಿಗೆ ಅವರವರ ಖಾಸಗಿತನ ಇರಲೇಬೇಕು. ನಾನು ನಿಜಕ್ಕೂ ನನ್ನ ಶೇ.100ರಷ್ಟನ್ನು ನನ್ನ ಗಂಡನಿಗೆ ನೀಡಲಾರೆ. ನೀವು ಕೂಡಾ ಎಲ್ಲವನ್ನೂ ನೀಡಬೇಡಿ. ನಿಮ್ಮ ಬಗ್ಗೆ ಕುತೂಹಲ ಅವರಲ್ಲಿದ್ದರೆ ಮಾತ್ರ ನಿಮ್ಮ ದಾಂಪತ್ಯ ಸುಖಕರವಾಗಿರುತ್ತದೆ. ನಾನಂತೂ ನನ್ನ ಮುಂದಿನ ವೈವಾಹಿಕ ಜೀವನದಲ್ಲಿ ಇದೇ ತಂತ್ರ ಅನುಸರಿಸಲಿದ್ದೇನೆ ಎನ್ನುತ್ತಾರೆ ಕೊಯಿನಾ.

ಸದ್ಯಕ್ಕೆ ಕೊಯಿನಾ ಟರ್ಕಿಯ ಉದ್ಯಮಿ ಮೀಟ್ ಮೆರಲ್‌ ಜೊತೆ ಸುತ್ತಾಡುತ್ತಿದ್ದಾಳೆ. ಮುಂಬೈ, ಟರ್ಕಿಗಳಲ್ಲಿ ಸಾಕಷ್ಟು ಸುತ್ತಾಡಿದ್ದಾರೆ ಕೂಡಾ. ಆದರೆ ಮದುವೆ ಎಂದರೆ, ಕೊಯಿನಾ ತನ್ನ ಜಾಣತನ ಮೆರೆಯುತ್ತಾರೆ. ಮೀಟ್ ಹಾಗೂ ನಾನು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಆದರೆ ಮದುವೆ ಸದ್ಯಕ್ಕೆ ಬೇಡ. ನಮ್ಮ ನಡುವಿನ ಸಂಬಂಧ ಇನ್ನೂ ಗಟ್ಟಿಗೊಳ್ಳಬೇಕು. ಮದುವೆಯಂಥ ಬಂಧನಕ್ಕೆ ನಾವಿಬ್ಬರೂ ಬದ್ಧರಾಗಬಹುದು ಎಂದೆನಿಸಿದಾಗ ನಾವು ಮದುವೆಯಾಗುತ್ತೇವೆ. ಅಲ್ಲಿವರೆಗೂ ಆ ಮಾತು ಬೇಡ ಎನ್ನುತ್ತಾರೆ.

ಕೊಯಿನಾ ಮಿತ್ರಾ ಕೊಲ್ಕೊತ್ತಾದಲ್ಲಿ ಜನಿಸಿದ್ದು ಅಲ್ಲೇ ವ್ಯಾಸಂಗ ಮುಗಿಸಿದ್ದಾಳೆ. ಆದರೆ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಜಗತ್ತಿಗೆ ಆಕರ್ಷಿತಳಾದ ಕೊಯಿನಾ ಮಾಡೆಲಿಂಗ್‌ನಲ್ಲೇ ತಾನು ಮುಂದುವರಿಯಬೇಕೆಂದು ಆಸೆಪಟ್ಟಳು. ಎಲಿಪಿ ವಿಸ್ಕಿ, ಮಿರಿಂಡಾ, ಕ್ಲಿನಿಕ್ ಆಲ್ ಕ್ಲಿಯರ್, ಮಾರುತಿ ಆಲ್ಟೋ ಮತ್ತಿತರ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿ ಪಡೆದಳು. ಇಶ್ಕ್, ಆಜ್ ಕೀ ರಾತ್, ಚನೋ ಆಖ್ ತೇರಿ ಮತ್ತಿತರ ಮ್ಯೂಸಿಕ್ ವಿಡಿಯೋಗಳಲ್ಲೂ ಹೆಜ್ಜೆ ಹಾಕಿ ತಾನು ಹಾಟ್ ಎಂದು ತೋರಿಸಿಕೊಟ್ಟಳು.
Koena Mitra
IFM


ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಇಷ್ಟು ಸಾಕಿತ್ತು. ಹಾಗಾಗಿ ಅವರು ತಕ್ಷಣ ತಮ್ಮ ರೋಡ್ ಚಿತ್ರದ ಐಟಂ ಸಾಂಗ್‌ಗಾಗಿ ಮೈ ಬಳುಕಿಸಲು ಕರೆದರು. ಅದು ಈಕೆಗೆ ಸಾಕಷ್ಟು ಪ್ರಚಾರ ನೀಡಿತು. ನಂತರ ಮುಸಾಫಿರ್ ಚಿತ್ರದಲ್ಲೂ ಪುಟ್ಟ ಪಾತ್ರದಲ್ಲಿ ನಟಿಸಿದಳು. ಆದರೆ ಪೂರ್ಣ ಪ್ರಮಾಣದ ನಟಿಯಾಗಿ ಬಾಲಿವುಡ್ಡಿಗೆ ಕಾಲಿಟ್ಟದ್ದು ಏಕ್ ಕಿಲಾಡಿ ಏಕ್ ಹಸೀನಾ ಚಿತ್ರದ ಮೂಲಕ.

ಅದಾದ ನಂತರ ಇನ್‌ಸಾನ್, ಅಪ್ನಾ ಸಪ್ನಾ ಮನೀ ಮನೀ, ಕ್ಯಾಶ್, ಹೇ ಬೇಬಿ, ಅಗರ್, ಅನಾಮಿಕಾ ಚಿತ್ರಗಳಲ್ಲಿ ನಟಿಸಿದಳು. ಆದರೆ ಹೇಳಿಕೊಳ್ಲುವಂಥ ಬ್ರೇಕ್ ಯಾವುದೂ ನೀಡಲಿಲ್ಲ. ತಮಿಳು ಚಿತ್ರರಂಗದಲ್ಲೂ ಐಟಂ ಹಾಡಿಗಾಗಿ ಹೆಜ್ಜೆ ಹಾಕಿ ಈಕೆಗೆ ಅನುಭವವಿದೆ. ಗ್ಲ್ಯಾಮರಸ್ ಆಗಿ ಕಾಣೋದು ಹಾಗೂ ಐಟಂ ಸಾಂಗ್‌ಗಾಗಿ ಮೈ ಕುಣಿಸೋದು ಕೂಡಾ ಒಂದು ಪ್ರತಿಭೆ ಎಂಬ ಸಿದ್ಧಾಂತವನ್ನು ಅಪ್ಪಟ ನಂಬಿದವಳು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶರ್ಟು ಬಿಚ್ಚಿದಳಾ?: ಅದೇನೇ ಇರಲಿ, ಇತ್ತೀಚೆಗೆ ಇದೇ ಕೊಯಿನಾ ಮಿತ್ರಳನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಶರ್ಟು ಬಿಚ್ಚಲು ಧಮಕಿ ಹಾಕಿದರಂತೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಚೆಕ್ಕಿಂಗ್ ಮಹಿಳಾ ಅಧಿಕಾರಿಗಳು ಎಲ್ಲರಂತೆ ಆಕೆಯನ್ನೂ ಚೆಕ್ ಮಾಡಲು ಕೋಣೆಗೆ ಕರೆದೊಯ್ದರು. ಇದು ಸಾಮಾನ್ಯ ಕೂಡಾ. ಅದ್ಕಕೆ ಕೊಯಿನಾ ಸಹಕರಿಸಿದಳು. ಆದರೆ ಕೊಯಿನಾ ಈಗಿನ ಫ್ಯಾಷನ್ ದಿರಿಸಾದ ಮೊಣಕಾಲಿನ ಮೇಲೆ ಮೂರ್ನಾಲ್ಕು ಕಡೆ ಹರಿದ ಜೀನ್ಸ್, ಹಾಗೂ ಸ್ಲೀವ್ ಲೆಸ್ ಟೀ ಶರ್ಟ್ ಧರಿಸಿದ್ದಳು. ಇದನ್ನು ನೋಡಿ ಆ ಮಹಿಳಾ ಅಧಿಕಾರಿಗಳಿಗೆ ಏನನ್ನಿಸಿತೋ ಏನೋ, ಕನ್ನಡ ಭಾಷೆಯಲ್ಲಿ ತಮ್ಮ ತಮ್ಮೊಳಗೆ ಏನೋ ಮಾತಾಡಿಕೊಂಡು ಪಿಸ ಪಿಸನೆ ನಗಲು ಆರಂಭಿಸಿದರು. ಆಕೆಯ ಬ್ಯಾಗ್ ಚೆಕ್ ಮಾಡಿದರು. ಹಲವು ಪರೀಕ್ಷೆ ನಡೆಸಿದರೂ ಬಿಡಲಿಲ್ಲ. ಇದರಿಂದ ಕೊಯಿನಾಗೆ ಸಿಟ್ಟು ಬರಲು ಆರಂಭವಾಯಿತು. ತನ್ನನ್ನು ನೋಡಿ ಇವರೇನೋ ವ್ಯಂಗ್ಯ ಮಾಡುತ್ತಿದ್ದಾರೆ ಎಂದು ತಿಳಿದುಹೋಯಿತು. ಅಷ್ಟರಲ್ಲಿ ಈ ಮಹಿಳಾ ಅಧಿಕಾರಿಗಳು ಆಕೆಯ ಟೀ ಶರ್ಟು ಬಿಚ್ಚಲು ಹೇಳಿದರು. ಇದನ್ನು ಕೇಳಿದ ತಕ್ಷಣ ಆಕೆಗೆ ಸಿಕ್ಕಾಪ್ಟಟ್ಟೆ ಸಿಟ್ಟು ಬಂತು. ಸಹಾಯಕ್ಕೆ ಕೂಗಿದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಹೇಗೋ ತಪ್ಪಿಸಿಕೊಂಡು ಹೊರಬರುವಲ್ಲಿ ಆಕೆಗೆ ಸಾಕು ಬೇಕಾಗಿತ್ತು.

ಈ ಅನುಭವವನ್ನು ಕೊಯಿನಾ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡು, ಆ ಅಧಿಕಾರಿಗಳು ನನ್ನನ್ನು ಚೆಕ್ ಮಾಡಿದ್ದಲ್ಲ, ಶೋಷಣೆ ಮಾಡಿದರು ಎಂದು ಹೇಳಿದ್ದಾಳೆ. ಪ್ರಪಂಚದ ಯಾವ ವಿಮಾನ ನಿಲ್ದಾಣದಲ್ಲೂ ನನಗೆ ಇಂತಹ ಅನುಭವ ಆಗಿರಲಿಲ್ಲ ಎಂದು ಬೆಂಗಳೂರು ವಿಮಾನನಿಲ್ದಾಣವನ್ನು ಕೊಯಿನಾ ದೂರಿದ್ದಾಳೆ.



ಇದರಲ್ಲಿ ಇನ್ನಷ್ಟು ಓದಿ :  

ತಾರಾ ಪರಿಚಯ

ಕತ್ರಿನಾಳ ಝೆರಾಕ್ಸ್ ಕಾಪಿ ಝರೀನ್ ಸಲ್ಮಾನ್‌ಗೆ ನಾಯಕಿ!

ಸಲ್ಮಾನ್ ಖಾನ್ ಅವರ ಮುಂಬರುವ ವೀರ್ ಚಿತ್ರದಲ್ಲಿ ಸುಂದರ ಝರೀನ್ ಖಾನ್ ಎಂಬಾಕೆ ನಾಯಕಿಯಾಗಿದ್ದಾಳೆ. ಹೊಸದಾಗಿ ...

ಎಂದಿಗೂ ಹಿಂತಿರುಗಿ ನೋಡದ ಅಮೀರ್ ಖಾನ್ ಎಂಬ ಪರ್ಫೆಕ್ಷನಿಸ್ಟ್!

ಅಮೀರ್ ಖಾನ್ 1965 ಮಾರ್ಚ್ 14ರಂದು ಮುಂಬೈಯಲ್ಲಿ ಜನಿಸಿದರು. ಅಮೀರ್ ಹುಸೈನ್ ಖಾನ್ ಎಂಬುದು ಇವರ ಹುಟ್ಟು ...

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು

ಕನ್ನಡತಿ ದೀಪಿಕಾ ಪಡುಕೋಣೆ ಮುಂಬೈಗೆ ಹಾರಿ ಬಾಲಿವುಡ್‌ನಲ್ಲಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳನ್ನೂ ...

ಬಾಲಿವುಡ್ಡಿನ ಝೀರೋ ಫಿಗರ್ ಕರೀನಾ ಕಪೂರ್

ಕಪೂರ್ ಕುಡಿ ಕರೀನಾ ಕಪೂರ್ ಸದ್ಯದ ಬಾಲಿವುಡ್‌ನ ಭಾರೀ ಬೇಡಿಕೆಯ ಪ್ರತಿಭಾವಂತ ನಟಿ. ಮೊದಮೊದಲು ಚಿತ್ರ ...

Widgets Magazine