30 ಬಾರಿ ಕ್ಯಾಮರಾ ಮುಂದೆ ಚುಂಬಿಸಿದ ರೀಮಾ ಸೇನ್!

IFM
ರೀಮಾ ಸೇನ್ ಎಂಬ ಬೆಂಗಾಳಿ ಬೆಡಗಿ ಹಿಂದಿಯಲ್ಲಿ ಅಷ್ಟಾಗಿ ಸುದ್ದಿ ಮಾಡದಿದ್ದರೂ, ತಮಿಳು, ತೆಲುಗಿನಲ್ಲಿ ಸುದ್ದಿ ಮಾಡಿದ್ದು ಹೆಚ್ಚು. ಇಂತಿಪ್ಪ ನಟಿ ಮೊನ್ನೆ ತನ್ನ ಮುಂದಿನ ಹಿಂದಿ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಕ್ಕಾಗಿ 30 ಟೇಕ್ ತೆಗೆದುಕೊಂಡಿದ್ದಾಳಂತೆ. ಅರ್ಥಾತ್ 30 ಬಾರಿ ಚುಂಬಿಸಿದ್ದಾಳೆ!

ಹೌದು. ರೀಮಾ ಸೇನ್ 30 ಬಾರಿ ಚುಂಬಿಸಿದ್ದಾಳೆ. ಇದು ಹೌದಾ ಎಂದು ನೇರವಾಗಿ ರೀಮಾಳನ್ನೇ ಕೇಳಿದರೆ, ಹೌದು. ಆದರೆ 30 ಬಾರಿ ಎಂದು ನಾನು ಲೆಕ್ಕವಿಟ್ಟಿಲ್ಲ. ಆದರೆ ತುಂಬ ಸಲ ರೀಟೇಕ್ ತೆಗೆದುಕೊಂಡೆವು. ಆದರೆ ಆ ಚುಂಬನವೇನೂ ತುಟಿಗೆ ತುಟಿ ಸೇರಿಸಿದ ಚುಂಬನವಲ್ಲ. ಆದರೂ ಸರಿಯಾದ ಚುಂಬನ ದೃಶ್ಯ ಸೆರೆಹಿಡಿಯಬೇಕಾದರೆ ನಾವು 30 ಬಾರಿ ಚುಂಬಿಸಬೇಕಾಯಿತು ಎನ್ನುತ್ತಾಳೆ.

ಚಿತ್ರದ ನಾಯಕ ನಟ ರಣವೀರ್ ಸಿಂಗ್ ಹೊಸ. ಆತ ತುಂಬಾ ಟೆನ್ಶನ್ ಆಗಿದ್ದ. ಹೀಗಾಗಿ ಕಿಸ್ಸಿಂಗ್ ಸೀನ್ ಸರಿಯಾಗಿ ಬರಲಿಲ್ಲ. ಅದ್ಕಕಾಗಿ ಪದೇ ಪದೇ ಮಾಡಬೇಕಾಯಿತು. ಈಗ ಸಿನಿಮಾಗಳಲ್ಲಿ ಕಿಸ್ಸಿಂಗ್ ಕಾಮನ್ ಆದ್ರೂ ನಾನು ಕಿಸ್ ಅಂದ್ರೆ ಸ್ವಲ್ಪ ಹಿಂದೆ ಅನ್ನುತ್ತಾಳೆ ರೀಮಾ.

ಇಂತಿಪ್ಪ ರೀಮಾ ಸೇನ್ ಹುಟ್ಟಿದ್ದು ಕೋಲ್ಕತ್ತಾದಲ್ಲಿ. ಮೂಲತಃ ಬೆಂಗಾಳಿ. ಮಧ್ಯಮವರ್ಗದ ಸಾಧಾರಣ ಕುಟುಂಬದಿಂದ ಬಂದ ಈಕೆ ಮಾಡೆಲ್ ಆಗಿ ನಂತರ ಚಿತ್ರರಂಗಕ್ಕೆ ಧುಮುಕಿದಳು. ಮುಂಬೈಗೆ ಕುಟುಂಬ ಶಿಫ್ಟ್ ಆದ ಮೇಲೆ ಕಾಲೇಜು ದಿನಗಳಲ್ಲಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಅನುಭವ ಹೊಂದಿರುವ ರೀಮಾ ಸೇನ್ ಮೊದಲು ತೆಲುಗಿನ ಕಡಿಮೆ ಬಜೆಟ್ ಚಿತ್ರ 'ಚಿತ್ರಂ'ನಲ್ಲಿ ಬಣ್ಣ ಹಚ್ಚಿದಳು. ನಂತರ ತಮಿಳು ಚಿತ್ರ 'ಮಿನ್ನಲೇ'ಯಲ್ಲಿ ಕಾಣಿಸಿಕೊಂಡು ರಾತ್ರಿ ಬೆಳಗಾಗುವುದರಲ್ಲಿ ಯಶಸ್ಸಿನ ಅಲೆಯಲ್ಲಿ ತೇಲಿದಳು. ಹಿಂದಿಯಲ್ಲೂ ಕಾಲಿರಿಸಿದ ಈಕೆಯ ಮೊದಲ ಚಿತ್ರ ಹಮ್ ಹೋ ಗಯೇ ಆಪ್ ಕೇ ಚಿತ್ರ ಫ್ಲಾಪ್ ಆಯಿತು. ಅದಾದ ನಂತರ ಹಲವು ತಮಿಳು ಚಿತ್ರಗಳಲ್ಲಿ ನಟಿಸಿದ ರೀಮಾ ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗಕ್ಕೇರುವ ಆಸೆ ಬಿಟ್ಟರೂ, ಆಗೊಮ್ಮೆ ಈಗೊಮ್ಮೆ ಬಾಲಿವುಡ್ ಮೆಟ್ಟಿಲು ತುಳಿದು ಬಂದಳು.

ಮನಸಂತ ನುವ್ವೇ, ಸೀಮಾ ಸಿಂಹಂ, ಅದೃಷ್ಟಂ, ವೀಡೇ, ಅಂಜಿಯಂತಹ ತೆಲುಗು ಚಿತ್ರಗಳಲ್ಲೂ, ಬಗವತಿ, ಧೂಳ್, ಜಯ್ ಜಯ್, ಎನಕ್ಕು 20 ಉನಕ್ಕು 18, ಚೆಲ್ಲಮೇ, ರೆಂಡು, ಆಯಿರತ್ತಿಲ್ ಒರುವನ್ ಮತ್ತಿತರ ಹಲವು ತಮಿಳು ಚಿತ್ರಗಳ್ಲಲಿ ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ. ಕನ್ನಡದಲ್ಲೂ ನ್ಯೂಸ್ ಎಂಬ ಚಿತ್ರದಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ತಾರಾ ಪರಿಚಯ

ಡಿ ಗ್ರೇಡ್ ಸಿನಿಮಾಕ್ಕೂ ನಾನು ರೆಡಿ ಎಂದ ಕನ್ನಡತಿ ಸ್ನೇಹಾ

ನಾನು ಡಿ ಗ್ರೇಡ್ ಸಿನಿಮಾದಲ್ಲಿ ನಟಿಸೋದಕ್ಕೆ ನಾಚಿಕೆ ಪಡೋದಿಲ್ಲ ಎಂದು ಕನ್ನಡತಿ, ನಟಿ ಸ್ನೇಹಾ ಉಲ್ಲಾಳ್ ...

ಸುಖ ದಾಂಪತ್ಯಕ್ಕೆ ಹಾಟ್ ನಟಿ ಕೊಯಿನಾ ಮಿತ್ರಾ ಫ್ರೀ ಟಿಪ್ಸ್!

ಕೊಯಿನಾ ಮಿತ್ರಾ ಎಂಬ ಬಾಲಿವುಡ್ ಹಾಟ್ ಬೆಡಗಿ ತನ್ನ ಶೇ.100ರಷ್ಟನ್ನೂ ತನ್ನ ಗಂಡನಾಗುವವನಿಗೆ ...

ಕತ್ರಿನಾಳ ಝೆರಾಕ್ಸ್ ಕಾಪಿ ಝರೀನ್ ಸಲ್ಮಾನ್‌ಗೆ ನಾಯಕಿ!

ಸಲ್ಮಾನ್ ಖಾನ್ ಅವರ ಮುಂಬರುವ ವೀರ್ ಚಿತ್ರದಲ್ಲಿ ಸುಂದರ ಝರೀನ್ ಖಾನ್ ಎಂಬಾಕೆ ನಾಯಕಿಯಾಗಿದ್ದಾಳೆ. ಹೊಸದಾಗಿ ...

ಎಂದಿಗೂ ಹಿಂತಿರುಗಿ ನೋಡದ ಅಮೀರ್ ಖಾನ್ ಎಂಬ ಪರ್ಫೆಕ್ಷನಿಸ್ಟ್!

ಅಮೀರ್ ಖಾನ್ 1965 ಮಾರ್ಚ್ 14ರಂದು ಮುಂಬೈಯಲ್ಲಿ ಜನಿಸಿದರು. ಅಮೀರ್ ಹುಸೈನ್ ಖಾನ್ ಎಂಬುದು ಇವರ ಹುಟ್ಟು ...

Widgets Magazine