ಬಜೆಟ್ ಭಾಷಣದಲ್ಲಿ ಅರುಣ್ ಜೇಟ್ಲಿ ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ

ನವದೆಹಲಿ, ಗುರುವಾರ, 1 ಫೆಬ್ರವರಿ 2018 (11:09 IST)

ನವದೆಹಲಿ: 2018-2019ನೇ ಸಾಲಿನ ಬಜೆಟ್ ಮಂಡನೆ  ಹಿನ್ನೆಲೆ ಅರುಣ್ ಜೇಟ್ಲಿ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ. ಇದು 5ನೇ ಬಾರಿ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ಮಂಡಿಸುತ್ತಿರುವುದು. ಈ ಭಾರಿಯ ಭಾಷಣದಲ್ಲಿನ ಪ್ರಮುಖ ಅಂಶಗಳು ಹೀಗಿವೆ. ಕಳೆದ 4 ವರ್ಷಗಳಿಂದ ಸ್ವಚ್ಛ ಆಡಳಿತ ನೀಡುತ್ತಿದ್ದೇವೆ. ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ. ಆರ್ಥಿಕ ಸುಧಾರಣೆ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.


ದೇಶದ ಜನರಿಗೆ ನೀಡಿದ  ಭರವಸೆಯಂತೆ ನಡೆದುಕೊಂಡಿದ್ದೇವೆ. ಪ್ರಪಂಚದಲ್ಲೇ 5ನೇ ಅತೀದೊಡ್ಡ ಆರ್ಥಿಕ ದೇಶವಾಗುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಆರ್ಥಿಕ ಸುಧಾರಣಾ ಪ್ರಕ್ರಿಯೆ ಜಾರಿ ಮಾಡಿದ್ದೇವೆ. ಉತ್ಪಾದನಾ ವಲಯ ಪ್ರಗತಿಯಲ್ಲಿದೆ. ಭಾರತ ಉತ್ಪಾದನೆಯಲ್ಲಿ ಶೀಘ್ರವಾಗಿ  5ನೇ ಸ್ಥಾನಕ್ಕೇರಲಿದೆ.  2ನೇ ದೈವಾರ್ಷಿಕದಲ್ಲಿ ಭಾರತದ ಜಿಡಿಪಿ ಶೇ.7.5ರ ನಿರೀಕ್ಷೆಯಲ್ಲಿದ್ದೇವೆ.  ಈ ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ಉದ್ಯೋಗಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಳೆದ 2 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಸುಧಾರಣೆ ಕಂಡಿದೆ ಎಂದು ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಬಜೆಟ್ 2018: 30 ವರ್ಷಗಳ ಅವಧಿಯಲ್ಲಿ ಅದೃಷ್ಟಶಾಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ

2018-19 ಸಾಲಿನ ಕೇಂದ್ರ ಬಜೆಟ್ ಸಿದ್ಧವಾಗಿದೆ. ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರು ನಾಳೆಯ ದಿನ ...

news

ಕೇಂದ್ರ ಬಜೆಟ್ ಗೆ ಸಚಿವ ಸಂಪುಟ ಒಪ್ಪಿಗೆ

ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

news

ರಾಜ್ಯ ನಾಯಕರ ಮೇಲೆ ರಮ್ಯಾ ಮೇಡಂಗೆ ಸಿಟ್ಯಾಕೆ? ಸಿಡುಕ್ಯಾಕೆ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ...

news

ಚಂದ್ರಗ್ರಹಣ ವೀಕ್ಷಿಸುವ ಭರದಲ್ಲಿ ನೆಹರೂ ತಾರಾಲಯದಲ್ಲಿ ಗಲಾಟೆ

ಬೆಂಗಳೂರು: ನಿನ್ನೆ ಆಕಾಶದಲ್ಲಿ ನಡೆದ ಕೌತುಕ ವಿದ್ಯಮಾನ ನೋಡಲು ನೆಹರೂ ತಾರಾಲಯದಲ್ಲಿ ಸೇರಿದ್ದ ಜನ ...

Widgets Magazine
Widgets Magazine