Widgets Magazine

ಮೇಷದಲ್ಲಿ ಗುರು, ನಿಮ್ಮ ರಾಶಿಗಳ ಮೇಲೆ ಏನು ಪ್ರಭಾವ?

ರಾಜೇಶ್ ಪಾಟೀಲ್|

WD
ಸಾಮಾನ್ಯವಾಗಿ ಗೋಚಾರದಲ್ಲಿ ಗುರು ಮತ್ತು ಶನಿ ಒಂದು ರಾಶಿಯಿಂದ ಮುಂದಿನರಾಶಿಗೆ ಪ್ರವೇಶಿಸಿದಾಗ ಪ್ರತೀ ವ್ಯಕ್ತಿಗಳಲ್ಲೂ ಹಾಲಿ ನಡೆಯುತ್ತಿರುವ ದಶಾ ಮತ್ತು ಭಕ್ತಿ ಗ್ರಹಗಳ ಮೇಲೆ ಈ ಗುರು ಮತ್ತು ಶನಿ ತಮ್ಮ ತಮ್ಮ ಪ್ರಭಾವ ಬೀರುವುದರಿಂದ ಬದಲಾವಣೆಗಳು ಉಂಟಾಗುತ್ತವೆ.

ಗುರು ನೈಸರ್ಗಿಕ ಶುಭಗ್ರಹವಾಗಿರುವುದರಿಂದ ಶುಭಫಲ ನೀಡುತ್ತಾನೆ. ಶನಿ ನೈಸರ್ಗಿಕ ಕೆಟ್ಟಫಲ ನೀಡುತ್ತಾನೆ. ಆದರೆ ನಾವು ಮಾಡುವ ಪ್ರತಿಯೊಂದು ಶುಭಕಾರ್ಯಗಳಿಗೆ ಅಂದರೆ ಮುಖ್ಯವಾಗಿ ವಿವಾಹ, ಗೃಹನಿರ್ಮಾಣ, ಸಂತಾನ, ವೃತ್ತಿ ವ್ಯವಹಾರಗಳು ಎಲ್ಲಾ ಚಟುವಟಿಕೆಗಳಿಗೆ ಗುರು ಮತ್ತು ಶನಿಯ ಪರಸ್ಪರ ಪ್ರಭಾವವು - ಸಂಭಂದಪಟ್ಟ ಭಾವಗಳಿಗೆ ಅಥವಾ ಭಾವಾಧಿಪತಿಗೆ ಸಂಯೋಗ ಅಥವಾ ದೃಷ್ಠಿ ಅಥವಾ ಪರಿವರ್ತನಾಯೋಗ ಕಡ್ಡಾಯವಾಗಿ ಬೇಕಾಗುತ್ತದೆ. ಸಂಭಂದವೇರ್ಪಡದಿದ್ದರೆ ಕಾರ್ಯಗಳು ನೆರವೇರುವುದಿಲ್ಲ ಇದನ್ನು ನಾವು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಗುರು ಮೇ 8 ರಂದು ಮೇಷರಾಶಿಗೆ ಪ್ರವೇಶಿಸಿದರೆ ಶನಿ ನವೆಂಬರ್ 15 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆ 11 ನಿಮಿಷಕ್ಕೆ ತುಲಾರಾಶಿಗೆ ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಶನಿ ಉಚ್ಚನಾಗಿರುವುದರಿಂದ ಹಾಗೂ ಗುರುವಿನ 7ನೇ ದೃಷ್ಠಿ ಪಡೆಯುವುದರಿಂದ ಸಾಡೇಸಾಥಿಯಲ್ಲಿರುವ ಕನ್ಯಾರಾಶಿ, ತುಲಾರಾಶಿ ಮತ್ತು ವೃಶ್ಚಿಕರಾಶಿಯವರಿಗೆ ಸಾಡೇಸಾಥಿಯ ಕೆಟ್ಟಫಲ ದೊರೆಯುವುದಿಲ್ಲ ಬದಲಾಗಿ ಒಳ್ಳೆಯ ಫಲದೊರೆಯುತ್ತದೆ.

ರಾಶಿಯವರಿಗೆ ಜನ್ಮ ಗುರುವಿನ ಪ್ರಭಾವದಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿಕೆ. ಒಳ್ಳೆಯ ಗುಣಧರ್ಮಗಳು ಮೈಗೂಡಿಸಿಕೊಳ್ಳುವುದು. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ವಿ ಶತೃಗಳು ಸಹಾ ಗೌರವದಿಂದ ವರ್ತಿಸುತ್ತಾರೆ. ಧಾರ್ಮಿಕ ಭಾವನೆಯಿಂದ ಮುಂದುವರೆಯುವಿರಿ. ಸಂತಾನಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ನವೆಂಬರ್ 15 ರ ನಂತರ ಗುರು ಶನಿ ಪರಸ್ಪರ ವೀಕ್ಷಣೆಯಿಂದ ಉದ್ಯೋಗಗಳಲ್ಲಿ ಬಡ್ತಿ, ವ್ಯವಹಾರಗಳಲ್ಲಿ ಪ್ರಗತಿ, ವಿದೇಶ ಪ್ರಯಾಣ ಯೋಗ.

ವೃಷಭ ರಾಶಿಯವರಿಗೆ 12ನೇ ಗುರುವಿನಿಂದ ವಿಮಲಯೋಗ ಉಂಟಾಗುತ್ತದೆ. ಅಂದರೆ ಶುಭಫಲ ದೊರೆಯುತ್ತದೆ. ಕೆಲಸಕಾರ್ಯಗಳು ಸುಗಮವಾಗಿ ಸಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ಯಾತ್ರೆಯೋಗ, ಅಪವಾದಗಳಿಂದ ಮುಕ್ತಿ, ದೂರ ಪ್ರಯಾಣ, ನವೆಂಬರ್ 15 ರ ನಂತರ ಸ್ಪರ್ದೆಗಳಲ್ಲಿ ಜಯ. ಶತೃಗಳ ಮೇಲೆ ಜಯ, ಕೋರ್ಟು ಪ್ರಕರಣಗಳೂ ನಿಮ್ಮಂತೆ ಆಗುವುದನ್ನು ನಿರೀಕ್ಷಿಸಬಹುದು.

ಮಿಥುನ ರಾಶಿಯವರಿಗೆ 11ನೇ ಗುರುವಿನಿಂದ ನಿರೀಕ್ಷಿತ ಉದ್ಯೋಗಗಳು ದೊರೆಯುತ್ತದೆ. ವೃತ್ತಿ ಬದಲಾವಣೆಯಿಂದ ಅನುಕೂಲ. ಅವಿವಾಹಿತರಿಗೆ ವಿವಾಹದಿಂದ ಅನುಕೂಲ, ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷೆಯಂತೆ ಪ್ರಗತಿ. ನವೆಂಬರ್ 15 ರ ನಂತರ ವಿದ್ಯಾರ್ಥಿಗಳಿಗೆ ಅನುಕೂಲ ಪ್ರಗತಿ ಉಂಟಾಗುತ್ತದೆ. ಬಹುದಿನದಿಂದ ಅವಿವಾಹಿತರಿಗ ಉತ್ತಮ ವಿವಾಹಯೋಗ.

ಕಟಕ ರಾಶಿಯವರಿಗೆ, 10ನೇ ಗುರುವಿನಿಂದ ಉದ್ಯೋಗಗಳಲ್ಲಿ ಉತ್ತಮ ಸ್ಪರ್ದೆಗಳಲ್ಲಿ ಜಯ, ಹೆಚ್ಚಿನದೇನೂ ನಿರೀಕ್ಷೆ ಬೇಡ, ಧಾರ್ಮಿಕ ಸ್ಥಳಗಳಿಗೆ ಯಾತ್ರೆಯೋಗ, ಧಾರ್ಮಿಕ ಚಟುವಟಿಕೆಯಲ್ಲಿ ತೊಡಗುವಿರಿ, ನವೆಂಬರ್ 15 ರ ನಂತರ ಅವಿವಾಹಿತರಿಗೆ ವಿವಾಹಯೋಗ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸು.

ಸಿಂಹರಾಶಿಯವರಿಗೆ, 9ನೇ ಗುರುವಿನಿಂದ ಭಾಗ್ಯಶಾಲಿಗಳು, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು, ವಿದ್ಯಾಕ್ಷೇತ್ರಗಳಲ್ಲಿರುವವರಿಗೆ ಗೌರವ, ಸನ್ಮಾನಗಳು ದೊರೆಯುತ್ತವೆ, ಆರ್ಥಿಕ ಪ್ರಗತಿ, ಹಣಕಾಸು ವ್ಯವಹಾರಗಳು ಸುಗಮ, ಅವಕಾಶವಿದ್ದಲ್ಲಿ ಮುಂಬಡ್ತಿ ಹೊಂದುವಿರಿ, ಧಾರ್ಮಿಕ ಕಾರ್ಯಗಳು ಶುಭಕಾರ್ಯಗಳು ಜರುಗುವುವು. ನವೆಂಬರ್ 15 ರ ನಂತರ ಕೋರ್ಟಿನ ಪ್ರಕರಣಗಳಿದ್ದಲ್ಲಿ ನಿಮ್ಮಂತೆ ಆಗುತ್ತದೆ. ಅವಿವಾಹಿತರಿಗೆ ವಿವಾಹಯೋಗ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ.

ಕನ್ಯಾರಾಶಿಯವರಿಗೆ, 8ನೇ ಗುರುವಿನಿಂದ ಆಕಸ್ಮಿಕ ಅಡಚಣೆಗಳು, ಸ್ಥಳ ಬದಲಾವಣೆ, ಉದ್ಯೋಗದಲ್ಲಿರುವವರಿಗೆ ವರ್ಗಾವಣೆ, ಮಾನಸಿಕ ಅಸಮದಾನ, ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ನವೆಂಬರ್ 15 ರ ನಂತರ ಪ್ರೇಮವಿವಾಹಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಅನಾರೋಗ್ಯದಿಂದಿದ್ದವರಿಗೆ ಆರೋಗ್ಯ ಸುಧಾರಣೆ ಉಂಟಾಗುತ್ತದೆ. ಆಕಸ್ಮಿಕ ಧನಯೋಗ, ಉತ್ಸುಕತೆಯಿಂದ ಮುಂದುವರೆಯುವಿರಿ.

ತುಲಾರಾಶಿಯವರಿಗೆ, 7ನೇ ಗುರುವಿನಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೊರುತ್ತದೆ. ವಾದ-ವಿವಾದಗಳಲ್ಲಿ ಮುಂದುವರೆಯುವುದು ಒಳ್ಳೆಯದಲ್ಲ. ಆಕಸ್ಮಿಕ ಆಪಾದನೆಗೊಳಗಾಗುವಿರಿ. ಸಮತೋಲನದಲ್ಲಿ ಮುಂದುವರೆಯುವುದು ಸೂಕ್ತ ಉದ್ಯೋಗದಲ್ಲಿ ಉತ್ತಮ, ನವೆಂಬರ್ 15 ರ ನಂತರ ಕುಟುಂಬದಲ್ಲಿ ಶುಭಕಾರ್ಯಗಳ ಚಟುವಟಿಕೆ ಪ್ರಾರಂಭ ಪ್ರೇಮವಿವಾಹ ಯೋಗ, ಹಿರಿಯರಿಂದ ಅಸಮ್ಮತಿ, ಸಮಾದಾನದಿಂದ ಮುಂದುವರೆಯುವುದು ಸೂಕ್ತ. ವಿದ್ಯಾರ್ಥಿಗಳಿಗೆ ಅನುಕೂಲ ಅನಾರೋಗ್ಯ ಸಂಭವ, ಸೂಕ್ತ ಚಿಕಿತ್ಸೆ ಅಗತ್ಯ ಸಂತಾನಯೋಗ.

ವೃಶ್ಚಿಕ ರಾಶಿಯವರಿಗೆ, 6ನೇ ಗುರುವಿನಿಂದ ವಿವಾದಾತ್ಮಕ ಸ್ಪರ್ದೆಗಳುಂಟಾಗುತ್ತದೆ. ವಾದ-ವಿವಾದ, ಉದ್ಯೋಗದಲ್ಲಿ ಉನ್ನತಿ, ವ್ಯವಹಾರಗಳಲ್ಲಿ ಏರಿಳಿತ ಶತ್ರುಗಳಿಂದ ತೊಂದರೆ, ತೀರ್ಥಯಾತ್ರೆ, ಪ್ರಯಾಣಯೋಗ ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕು, ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಲದು (ನವೆಂಬರ್ 15 ರ ನಂತರ) ಸ್ಥಾನಬದಲಾವಣೆ, ಮನೆ ಬದಲಾವಣೆ ಸಂಭವ, ಅನಾರೋಗ್ಯ, ಚಿಕಿತ್ಸೆ ಸೂಕ್ತ.

ಧನಸ್ಸುರಾಶಿಯವರಿಗೆ, 5ನೇ ಗುರುವಿನಿಂದ ಗೃಹ ನಿರ್ಮಾಣ ಯೋಜನೆ ಗೌರವ ಪ್ರಶಸ್ತಿ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ, ಸಂತಾನಯೋಗ, ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ಮುಂದುವರೆಯುತ್ತದೆ. ನವೆಂಬರ್ 15 ರ ನಂತರ ಅತ್ಯುತ್ತಮ ಧನಯೋಗ, ಧನಲಾಭ, ವಿದೇಶಯಾತ್ರೆ, ತೀರ್ಥಯಾತ್ರೆ, ಶುಭಕಾರ್ಯಗಳು ಜರುಗುವುವು.

ಮಕರ ರಾಶಿಯವರಿಗೆ, 4ನೇ ಗುರುವಿನಿಂದ ಗೃಹಬದಲಾವಣೆ, ಉದ್ಯೋಗದಲ್ಲಿ ಬಡ್ತಿಯೋಗ ಉತ್ತಮ, ಹೊಸಗೃಹ ನಿರ್ಮಾಣ ಯೋಜನೆ ನಿಮ್ಮದು, ಸಹೋದರರಲ್ಲಿ ಭಿನ್ನಾಭಿಪ್ರಾಯ, ನವೆಂಬರ್ 15 ರ ನಂತರ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು, ಹೊಸ ವೃತ್ತಿಯಿಂದ ಸಮಾದಾನ, ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕು. ಮನೆಯಲ್ಲಿ ಶುಭಕಾರ್ಯಗಳು ಜರುಗುವುವು.

ಕುಂಭ ರಾಶಿಯವರಿಗೆ, 3ನೇ ಗುರುವಿನಿಂದ ಅವಿವಾಹಿತರಿಗೆ ವಿವಾಹಯೋಗ, ಸಹೋದರರುಗಳಿಂದ ಅನುಕೂಲ, ಶುಭಕಾರ್ಯಗಳು ನಡೆಯುತ್ತವೆ. ಹೆಚ್ಚಿನ ಪ್ರಯತ್ನದಿಂದ ನಿಮ್ಮ ಕಾರ್ಯಗಳು ಮುಂದುವರೆಯುತ್ತವೆ. ನವಂಬರ್ 15ರ ನಂತರ ಧಾರ್ಮಿಕ ಚಟುವಟಿಕೆ ಕ್ಷೇತ್ರಗಳಿಗೆ ಭೇಟಿ, ಪ್ರಯಾಣ ಯೋಗ, ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿನ ಪ್ರಯತ್ನದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ.

ಮೀನ ರಾಶಿಯವರಿಗೆ, 2ನೇ ಗುರುವಿನಿಂದ ಉತ್ತಮ ಹಣಕಾಸಿನ ವ್ಯವಸ್ಥೆ, ವೃತ್ತಿಯಿಂದ ಅನುಕೂಲ, ವ್ಯವಹಾರಗಳು ಉತ್ತಮ ಮಟ್ಟದಲ್ಲಿ ಪ್ರಗತಿಹೊಂದುತ್ತದೆ. ವಿದ್ಯಾಕ್ಷೇತ್ರಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲಗಳು ಉಂಟಾಗುತ್ತದೆ. ಕುಟುಂಬದಲ್ಲಿ ಸಂತೋಷ ಹಾಗೂ ಶುಭಕಾರ್ಯಗಳ ಚಟುವಟಿಕೆ, ನವೆಂಬರ್ 15 ರಿಂದ ಶನಿಯಿಂದ ಸರಳಯೋಗ ಉಂಟಾಗಿ ಧಾರ್ಮಿಕ ಕಾರ್ಯಗಳು, ಧಾರ್ಮಿಕ ಸಂಸ್ಥೆ, ಮಠಗಳೊಂದಿಗೆ ಒಡನಾಟ, ಧರ್ಮಕ್ಷೇತ್ರ ದರ್ಶನ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಪ್ರಗತಿ.

ಆರ್. ಸೀತಾರಾಮಯ್ಯ,
ಜೋತೀಷ್ಯರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ- 577 201
ಮೋ:9449048340
ಪೋನ್: 08182-227


ಇದರಲ್ಲಿ ಇನ್ನಷ್ಟು ಓದಿ :