ಹಡಗಿನ ನಾವಿಕ ಪಾಕ್ ತಂಡ ಸೇರಿ ಭಾರತಕ್ಕೆ ಮುಳುವಾದ..!

ಓವಲ್, ಸೋಮವಾರ, 19 ಜೂನ್ 2017 (18:36 IST)

Widgets Magazine

ಫಖಾರ್ ಜಮಾನ್.. ಎರಡು ದಿನಗಳ ಹಿಂದಷ್ಟೇ ಜಗತ್ತಿಗೆ ಪರಿಚಯವಿಲ್ಲದ ೀ ಹೆಸರು ನಿನ್ನೆಯಿಂದ ಭಾರೀ ಪ್ರಸಿದ್ಧವಾಗಿದೆ. ಹೌದು, ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ನೆರವಾದ ಬ್ಯಾಟ್ಸ್`ಮನ್ ಫಖಾರ್ ಜಮಾನ್.


ಅಂದಹಾಗೆ, ಈ ಫಖಾರ್ ಜಮಾನ್ ಪಾಕಿಸ್ತಾನ ಹಡಗಿನ ನಾವಿಕ. ಹೌದು, ಚಿಕ್ಕಂದಿನಿಂದಲೂ ಫಖಾರ್`ಗೆ ಕ್ರಿಕೆಟ್ ಆಡುವುದೆಂದರೆ ಪಂಚ ಪ್ರಾಣ. ಆದರೆ, ತಂದೆಗೆ ಮಗ ಬ್ಯಾಟ್ ಹಿಡಿಯುವುದು ಇಷ್ಟವಿರಲಿಲ್ಲ. ಮಗ ಯಾವುದಾದರೊಂದು ಉದ್ಯೋಗಕ್ಕೆ ಸೇರಿ ಜೀವನ ರೂಪಿಸಿಕೊಳ್ಳಲು ಎಂಬ ಆಸೆ ಇತ್ತು. 2007ರಲ್ಲಿ ನೌಕಾಪಡೆಯ ಹಡಗಿನ ನಾವಿಕನಾಗಿ ಫಖಾರ್`ಗೆ ಕೆಲಸ ಸಿಕ್ಕಿತ್ತು.

ನೌಕಾಪಡೆಯಲ್ಲಿದ್ದ ಕೋಚ್ ಅಜಂ ಖಾನ್ ಫಖಾರ್ ಪ್ರತಿಭೆಯನ್ನ ಗುರ್ತಿಸಿದರು. ಈತ ಹಡಗನ್ನ ಓಡಿಸುವುದಕ್ಕಿಂತ ಬ್ಯಾಟ್ ಹಿಡಿಯುವುದೇ ಸೂಕ್ತ ಎಂದು ಮುಖ್ಯ ಕಚೇರಿಗಳು ತಿಳಿಸಿದರು. ಅಂದಿನಿಂದ ಬದಲಾಯ್ತು ಫಖಾರ್ ಹಣೆಬರಹ. ಅಹಮ್ಮದ್ ಶಹಜಾದ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ಪಾದಾರ್ಫನೆ ಮಾಡಿದ ಫಖಾರ್ ಭಾರತದ ವಿರುದ್ಧ ಶತಕ ಸಿಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಫಖಾರ್ ಜಮಾನ್ ಮಾಜಿ ನಾವಿಕ ಚಾಂಪಿಯನ್ಸ್ ಟ್ರೋಫಿ Cricket Champions Trophy Fakhar Zaman

Widgets Magazine

ಕ್ರಿಕೆಟ್‌

news

ಟೀಮ್ ಇಂಡಿಯಾ ನಾಯಕನಿಗೆ ಬೇಕಿದೆ ಅಭಿಮಾನಿಗಳ ಬೆಂಬಲ

ಚಾಂಪಿಯನ್ಸ್ ಟ್ರೋಫಿ ಫೈನಲ್`ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಹಳ್ಳಕ್ಕೆ ...

news

ಪಾಕ್ ಗೆಲುವನ್ನು ಸಂಭ್ರಮಿಸಿದ ಹುರಿಯತ್ ನಾಯಕನಿಗೆ ಕ್ರಿಕೆಟಿಗ ಗಂಭೀರ್ ತಪರಾಕಿ

ನವದೆಹಲಿ: ಭಾರತದ ನೆಲದಲ್ಲಿದ್ದುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ಗೆಲುವನ್ನು ಸಂಭ್ರಮಿಸಿದ ಕಾಶ್ಮೀರ ...

news

ಭಾನುವಾರ ಫೈನಲ್ ನಡೆದರೆ ಟೀಂ ಇಂಡಿಯಾಕ್ಕೆ ಸೋಲು ಗ್ಯಾರಂಟಿ ! ಇಲ್ಲಿದೆ ಅದಕ್ಕೆ ಪುರಾವೆ!

ಬೆಂಗಳೂರು: ಭಾನುವಾರಕ್ಕೂ ಟೀಂ ಇಂಡಿಯಾಕ್ಕೂ ಅದೇಕೋ ವಾರ ಸರಿ ಬರೋದಿಲ್ಲ ಅಂತ ಕಾಣುತ್ತದೆ. ಹಾಗಾಗಿಯೇ ಭಾರತ ...

news

ಟಿ-20 ವಿಶ್ವಕಪ್ ನೋಡಲು ಕಾಯುತ್ತಿದ್ದವರಿಗೆ ಐಸಿಸಿ ಶಾಕ್!

ದುಬೈ: ಟಿ-20 ವಿಶ್ವಕಪ್ ಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಚುಟುಕು ಕ್ರಿಕೆಟ್ ಮಾದರಿಯನ್ನು ...

Widgets Magazine