ಕೊಹ್ಲಿ ದಾಖಲೆ ಮುರಿದ ಆಫ್ಘನ್ ಆಟಗಾರ..! ಆದರೂ ಕೊಹ್ಲಿಯೇ ಗ್ರೇಟ್

NewDelhi, ಸೋಮವಾರ, 13 ಮಾರ್ಚ್ 2017 (11:57 IST)

Widgets Magazine

ಕ್ರಿಕೆಟ್ ಎನ್ನುವುದು ಹಾಗೆ. ಇವತ್ತಿದ್ದ ದಾಖಲೆಯನ್ನ ಮುಂದೊಂದು ದಿನ ಮತ್ಯಾರೋ ಮುರಿದು ಹೊಸ ದಾಖಲೆ ಬರೆಯುತ್ತಾರೆ. ವಿಶ್ವ ಕ್ರಿಕೆಟ್`ನಲ್ಲಿ ಹಲವು ದಾಖಲೆಗಳನ್ನ ಮೆಟ್ಟಿ ನಿಂತು ಹೊಸ ದಾಖಲೆ ಬರೆದಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ದಾಖಲೆಯನ್ನೇ ಮುರಿದಿದ್ದಾನೆ ಆಫ್ಘಾನಿಸ್ತಾನದ ಆಟಗಾರ.


ಟಿ-20 ಪಂದ್ಯಗಳಲ್ಲಿ ಇದುವರೆಗೆ ಕೊಹ್ಲಿ 1709 ರನ್ ಗಳಿಸಿದ್ದು, ಆಫ್ಘನ್ ಆಟಗಾರ ಮೊಹಮ್ಮದ್ ಶಹಜಾದ್ 1779 ರನ್, ಅಂದರೆ ಕೊಹ್ಲಿಗಿಂತಲು 70 ರನ್ ಹೆಚ್ಚು ದಾಖಲಿಸುವ ಮೂಲಕ ಟಿ-20 ಕ್ರಿಕೆಟ್`ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 4ನೇ ಸ್ಥಾನಕ್ಕೆ ಏರಿದ್ದಾರೆ. ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದ್ದಾರೆ.ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 123 ರನ್ ಸಿಡಿಸಿದ ಮೊಹಮ್ಮದ್ ಈ ದಾಖಲೆ ಬರೆದಿದ್ದಾರೆ.

ಕೊಹ್ಲಿಯೇ ಗ್ರೇಟ್: ಮೊಹಮ್ಮದ್ ಶಹಜ಻ದ್ ಸದ್ಯ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿರಬಹುದು. ಶಹಜಾದ್ ಇದುವರೆಗೆ 58 ಟಿ-20 ಪಂದ್ಯಗಳನ್ನಾಡಿದ್ದಾರೆ. ಕೊಹ್ಲಿ ಆಡಿರುವುದು ಕೇವಲ 48 ಮಾತ್ರ. ಕೊಹ್ಲಿಗಿಂತ 10 ಪಂದ್ಯಗಳನ್ನ ಹೆಚ್ಚು ಶಹಜಾದ್ ಆಡಿದ್ದಾರೆ. ಹೀಗಾಗಿ, ಕಡಿಮೆ ಪಂದ್ಯಗಳಲ್ಲಿ ಕೊಹ್ಲಿ ಹೆಚ್ಚು ರನ್ ಗಳಿಸಿದ್ದು ಮೊಹಮ್ಮದ್ ಶಹಜಾದ್`ಗಿಂತಲೂ ಗ್ರೇಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಕ್ರಿಕೆಟ್ ಮೊಹಮ್ಮದ್ ಶಹಜಾದ್ Cricket Mohmmedh Shehzadh Virat Kohli

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಮೇಲೆ ಇನ್ನೊಂದು ಗಂಭೀರ ಆರೋಪ ಹೊರಿಸಿದ ಆಸೀಸ್ ಮಾಧ್ಯಮ

ಮುಂಬೈ: ದ್ವಿತೀಯ ಟೆಸ್ಟ್ ಪಂದ್ಯ ಸೋತ ಮೇಲೆ ಆಸ್ಟ್ರೇಲಿಯಾ ಟೀಂ ಇಂಡಿಯಾ ಆಟಗಾರರ ಮೇಲೆ ಒಂದಲ್ಲ ಒಂದು ...

news

ಟೀಂ ಇಂಡಿಯಾ ಆಕ್ರಮಣ ನೋಡಿ ಆಸ್ಟ್ರೇಲಿಯಾಗೆ ಶಾಕ್!

ರಾಂಚಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆಟಗಾರರು ಹೀಗಿರಲಿಲ್ಲ. ಆದರೆ ಈಗ ಅವರ ಏಟಿಗೆ ಎದುರೇಟು ನೀಡುವ ...

news

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಬರಲಿದೆ!

ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ...

news

ಅನಿಲ್ ಕುಂಬ್ಳೆ ಸ್ಥಾನಕ್ಕೆ ರಾಹುಲ್ ದ್ರಾವಿಡ್

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ...

Widgets Magazine