ಅಂತಿಮವಾಗಿ ಮೈದಾನಕ್ಕಿಳಿದ ಅಲೆಸ್ಟರ್ ಕುಕ್ ಗೆ ಎಂಥಾ ಸ್ವಾಗತ ಸಿಕ್ಕಿತು ಗೊತ್ತಾ?

ದಿ ಓವಲ್, ಸೋಮವಾರ, 10 ಸೆಪ್ಟಂಬರ್ 2018 (08:42 IST)

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ನ ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 114 ರನ್ ಗಳಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದೆ.
 

ಈಗಾಗಲೇ ಮೊದಲ ಇನಿಂಗ್ಸ್ ನ 40 ರನ್ ಗಳ ಮುನ್ನಡೆಯನ್ನೂ ಹೊಂದಿರುವ ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೇಲೆ ತನ್ನ ಬಿಗಿ ಹಿಡಿತ ಮುಂದುವರಿಸಿದೆ. ದಿನದಂತ್ಯಕ್ಕೆ ನಾಯಕ ಜೋ ರೂಟ್ 29 ರನ್ ಮತ್ತು ಅಲೆಸ್ಟರ್ ಕುಕ್ 46 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
 
ಇದೇ ಅಂತಿಮ ಬಾರಿಗೆ ಬ್ಯಾಟ್ ಹಿಡಿದು ಕಣಕ್ಕಿಳಿದ ಅಲೆಸ್ಟರ್ ಕುಕ್ ಗೆ ಇಡೀ ಮೈದಾನವೇ ಎದ್ದು ನಿಂತು ಗೌರವ ಸೂಚಿಸಿತು. ಇಂಗ್ಲೆಂಡ್ ಹಿರಿಯ ಆಟಗಾರನಿಗೆ ಮೊದಲ ಇನಿಂಗ್ಸ್ ನಲ್ಲಿ ಆಡಲಿಳಿದಾಗ ಟೀಂ ಇಂಡಿಯಾ ಆಟಗಾರರೂ ಸಾಲಾಗಿ ನಿಂತು ಗೌರವ ಸೂಚಿಸಿದ್ದರು. ನಿನ್ನೆ ನಾಟೌಟ್ ಆಗಿ ಉಳಿದಿದ್ದ ಕುಕ್ ಇಂದು ಅಂತಿಮ ಬಾರಿಗೆ ಬ್ಯಾಟ್ ಮಾಡುವ ಅವಕಾಶ ಪಡೆದಿದ್ದಾರೆ. ಅದನ್ನು ಅವರು ಸ್ಮರಣೀಯವಾಗಿಸುತ್ತಾರಾ ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾವನ್ನು ಕಾಪಾಡಿದ ‘ಹನುಮ’

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನ ಭೋಜನ ವಿರಾಮದ ...

news

ವಿರಾಟ್ ಕೊಹ್ಲಿಗಿರುವ ಈ ಒಳ್ಳೆ ಗುಣ ರವಿಶಾಸ್ತ್ರಿಯಲ್ಲಿಲ್ಲವಂತೆ!

ದಿ ಓವಲ್: ಭಾರತ ಮತ್ತುಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ತಾವು ಮಾಡಿರುವ ತಪ್ಪುಗಳನ್ನು ...

news

ಸಾನಿಯಾ ಮಿರ್ಜಾ ಸೀಮಂತಕ್ಕೆ ಗೈರು ಹಾಜರಾದ ಪತಿ ಶೊಯೇಬ್ ಮಲಿಕ್

ಹೈದರಾಬಾದ್: ಮುಂದಿನ ತಿಂಗಳು ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ...

news

ಟೀಂ ಇಂಡಿಯಾವನ್ನು ಸತಾಯಿಸುತ್ತಿರುವ ಜೋಸ್ ಬಟ್ಲರ್

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ನ ಎರಡನೇ ದಿನ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ...

Widgets Magazine