ವಿಮಾನದಲ್ಲಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ

ಮುಂಬೈ, ಗುರುವಾರ, 11 ಅಕ್ಟೋಬರ್ 2018 (07:35 IST)

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಕ್ರಿಕೆಟ್ ಜಗತ್ತು ಇಂದಿಗೂ ವಿಶೇಷ ಗೌರವ ನೀಡುತ್ತದೆ. ಅದಕ್ಕೆ ಕಾರಣ ಅವರ ವ್ಯಕ್ತಿತ್ವ ಅಂತಹದ್ದೇ ಘಟನೆಯೊಂದು ಇದೀಗ ನಡೆದಿದೆ.
 
ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಸ್ಪಿನ್ ದಿಗ್ಗಜನನ್ನು ನೋಡಿದ ಅಭಿಮಾನಿಯೊಬ್ಬರು ಖುಷಿಯಿಂದ ಟ್ವೀಟ್ ಮಾಡಿದ್ದಕ್ಕೆ ಕುಂಬ್ಳೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಲ್ಲದೆ, ಪಕ್ಕ ಬಂದು ಅಟೋಗ್ರಾಫ್ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
 
ಸೋಹಿನಿ ಎಂಬ ಮಹಿಳೆ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅನಿಲ್ ಕುಂಬ್ಳೆಯನ್ನು ನೋಡಿ ‘ನಾನು ಪ್ರಯಾಣಿಸುತ್ತಿರುವ ವಿಮಾನದಲ್ಲೇ ಅನಿಲ್ ಕುಂಬ್ಳೆ ಇದ್ದಾರೆ. ಅವರ ಮುಖವನ್ನು ಒಮ್ಮೆ ನೋಡಿದ ತಕ್ಷಣ ನನಗೆ ಹಿಂದೆ ಅವರು ವೆಸ್ಟ್ ಇಂಡೀಸ್ ವಿರುದ್ಧ ದವಡೆ ಮುರಿದುಕೊಂಡರೂ ಬ್ಯಾಂಡೇಜ್ ಕಟ್ಟಿಕೊಂಡು ಆಡಿದ್ದು ನೆನಪಾಗಿ ಕಣ್ಣು ತುಂಬಿ ಬಂತು. ಅವರು ನಮಗೆ ನೀಡಿದ ಎಲ್ಲಾ ಅದ್ಭುತ ಕ್ಷಣಗಳಿಗೆ ಧನ್ಯವಾದ. ಅವರ ಬಳಿ ಹೋಗಿ ಒಮ್ಮೆ ಮಾತಾಡಿ ಬರಬೇಕೆನಿಸುತ್ತಿದೆ. ಆದರೆ ನನ್ನ ಕಾಲು ಮರಗಟ್ಟಿ ಹೋಗಿದೆ’ ಎಂದು ಸೋಹಿನಿ ವಿಮಾನದಲ್ಲೇ ಟ್ವೀಟ್ ಮಾಡಿದ್ದರು.
 
ಇದನ್ನು ತಕ್ಷಣ ನೋಡಿದ ಅನಿಲ್ ಕುಂಬ್ಳೆ ಅಲ್ಲಿಯೇ ಟ್ವೀಟ್ ಮೂಲಕ ಸೋಹಿನಿ ಪ್ರತಿಕ್ರಿಯೆ ನೀಡಿದ್ದು ‘ವಿಮಾನ ಟೇಕ್ ಆಫ್ ಆದ ಬಳಿಕ ಸಂಕೋಚವಿಲ್ಲದೇ ನನ್ನ ಬಳಿ ಬಂದು ಮಾತಾಡಿ’ ಎಂದು ಬರೆದರು.
 
ಅಷ್ಟೇ ಅಲ್ಲ, ಹೇಳಿದಂತೆ ಸೋಹಿನಿಗೆ ಅನಿಲ್ ಕುಂಬ್ಳೆ ಬೋರ್ಡಿಂಗ್ ಪಾಸ್ ಮೇಲೆ ಅಟೋಗ್ರಾಫ್ ನೀಡಿದ್ದಾರೆ. ಖುಷಿಯಾದ ಅಭಿಮಾನಿ ಇದನ್ನು ಫೋಟೋ ಫ್ರೇಮ್ ಹಾಕಿ ಜತೆಗಿಟ್ಟುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನೀಳಕಾಯದ ಹುಡುಗಿ ಎದುರು ವಿರಾಟ್ ಕೊಹ್ಲಿ ಹೀಗೆ ಮಾಡಿದ್ದೇ ತಪ್ಪಾಯ್ತು!

ಮುಂಬೈ: ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಎದುರು ಹೀಗೆ ...

news

ಬೇಡದ ದಾಖಲೆಯ ಅಪಾಯದಲ್ಲಿ ಕೆಎಲ್ ರಾಹುಲ್

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಟೀಕೆಗೊಳಗಾಗಿದ್ದ ...

news

ಈಗಿನ ಆಯ್ಕೆಗಾರರಿಗೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯನ್ನು ಪ್ರಶ್ನೆ ಮಾಡುವ ಧೈರ್ಯವೇ ಇಲ್ಲವಂತೆ!

ಮುಂಬೈ: ಪ್ರಸಕ್ತಿ ಬಿಸಿಸಿಐ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ...

news

ವಿಂಡೀಸ್ ತಂಡವನ್ನು ಟೀಕಿಸಿ ಇಕ್ಕಟ್ಟಿಗೆ ಸಿಲುಕಿದ ಹರ್ಭಜನ್ ಸಿಂಗ್

ಮುಂಬೈ: ರಾಜ್ ಕೋಟ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯವಾಗಿ ...

Widgets Magazine