ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್

ಮುಂಬೈ, ಶುಕ್ರವಾರ, 8 ಜೂನ್ 2018 (09:55 IST)

Widgets Magazine

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮಂತೆ ಆಗಬೇಕೆಂದು ಅತ್ಯುತ್ತಮ ಕ್ರಿಕೆಟ್ ಟ್ರೈನಿಂಗ್ ಕೊಡಿಸಿದ್ದರು. ಅದಕ್ಕೀಗ ಫಲ ಸಿಕ್ಕಿದೆ.
 
ತೆಂಡುಲ್ಕರ್ ಪುತ್ರ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಜುಲೈನಲ್ಲಿ ಭಾರತ ತಂಡ ಎರಡು ನಾಲ್ಕು ದಿನಗಳ ಪಂದ್ಯ ಮತ್ತು 5 ಏಕದಿನ ಪಂದ್ಯವಾಡಲಿದೆ. ಈ ತಂಡಕ್ಕೆ ಅರ್ಜುನ್ ಆಯ್ಕೆಯಾಗಿದ್ದಾರೆ.
 
18 ವರ್ಷದ ಎಡಗೈ ಬ್ಯಾಟ್ಸ್ ಮನ್ ಮತ್ತು ಮಧ್ಯಮ ವೇಗಿ ಕೂಡಾ. ಈ ಹಿಂದೆ ಹಲವು ಕ್ಲಬ್ ಲೆವೆಲ್ ಟೂರ್ನಿಗಳಲ್ಲಿ, ಮುಂಬೈ ಕಿರಿಯರ ತಂಡದಲ್ಲಿ ಅರ್ಜುನ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲದೆ, ಅವಕಾಶ ಸಿಕ್ಕಾಗಲೆಲ್ಲಾ ಅಂತಾರಾಷ್ಟ್ರೀಯ ಬ್ಯಾಟ್ಸ್ ಮನ್ ಗಳಿಗೆ ನೆಟ್ ಬೌಲರ್ ಆಗಿಯೂ ಅನುಭವ ಪಡೆದಿದ್ದಾರೆ. ಅಂತೂ ಅಪ್ಪನ ಹಾದಿಯಲ್ಲೇ ಪುತ್ರನೂ ಸಾಗಿದಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅಭಿಮಾನಿಗಳ ಸೆಲ್ಫೀ ಹುಚ್ಚಿಗೆ ವಿರಾಟ್ ಕೊಹ್ಲಿ ಕಿವಿಯೇ ಭಗ್ನ!

ನವದೆಹಲಿ: ದೆಹಲಿಯಲ್ಲಿ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ...

news

ಕೊನೆಗೂ ಅಜಿಂಕ್ಯಾ ರೆಹಾನೆ ಮೇಲೆ ಕರುಣೆ ತೋರಿದ ವಿರಾಟ್ ಕೊಹ್ಲಿ

ಮುಂಬೈ: ಕೆಎಲ್ ರಾಹುಲ್ ಬಿಟ್ಟರೆ ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಬೆಂಚ್ ಕಾಯಿಸುವ ದುರಾದೃಷ್ಟವಂತ ...

news

ಅಷ್ಟಕ್ಕೂ ಹರ್ಭಜನ್ ಸಿಂಗ್ ಯುವರಾಜ್ ಸಿಂಗ್ ರನ್ನು ಪಾಕ್ ಕ್ರಿಕೆಟಿಗನಿಗೆ ಹೋಲಿಸಿದ್ದೇಕೆ?

ಮುಂಬೈ: ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಮೈದಾನದ ಹೊರಗೂ ಉತ್ತಮ ಸ್ನೇಹಿತರು ಎಂಬುದರಲ್ಲಿ ...

news

ವಿರಾಟ್ ಕೊಹ್ಲಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಮುಂಬೈ: ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

Widgets Magazine